ಎಷ್ಟು ಬಾರಿ ಮದುವೆ, ಯಾರೊಂದಿಗೆ ಸಂಸಾರ… ಮಹಿಳಾ ಅಧಿಕಾರಿಯ ವೈಯಕ್ತಿಕ ಪ್ರಶ್ನೆ ಕೇಳಿದ RTI ಕಾರ್ಯಕರ್ತ | ಸಂಕಷ್ಟಕ್ಕೀಡಾದ ಅಧಿಕಾರಿ

Share the Article

ಸುಮ್ನೆ ಇರಲಾರದೆ ಇರುವೆ ಬಿಟ್ಟುಕೊಂಡರು ಎನ್ನುತ್ತಾರಲ್ಲ ಅದು ಈಗ ಈ ಘಟನೆಯಲ್ಲಿ ನಡೆದಿರುವುದು. ಹೌದು, ಸರಕಾರಿ ಉದ್ಯೋಗಿಯೋರ್ವ ಮಹಿಳಾ ತಹಶೀಲ್ದಾರ್ ಅವರಿಗೆ ವೈಯಕ್ತಿಕ ಮಾಹಿತಿ ನೀಡುವಂತೆ RTI ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದು, ಈಗ ಈ ಅಧಿಕಾರಿಯ ಬಂಧನವಾಗಿದೆ.

ಆ ರ್‌ಟಿಐ ಕಾರ್ಯಕರ್ತರೊಬ್ಬರು ಮಹಿಳಾ ಅಧಿಕಾರಿಗೆ ವೈಯಕ್ತಿಕ ಮಾಹಿತಿಯನ್ನು ತುರ್ತಾಗಿ ನೀಡುವಂತೆ ರೈಟ್ ಟು ಇನ್‌ಫಾರ್ಮೆಶನ್ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಮಹಿಳಾ ಅಧಿಕಾರಿ ದೂರು ನೀಡಿದ್ದಕ್ಕೆ ಪೊಲೀಸರು ಆರ್‌ಟಿಐ ಕಾರ್ಯಕರ್ತನನ್ನು ಬಂಧಿಸಿದ್ದಾರೆ. ಈ ಘಟನೆ ಕೋಲಾರದಲ್ಲಿ ನಡೆದಿದೆ. ಮುಳಬಾಗಲು ತಾಲ್ಲೂಕಿನ ಮಂಡಿಕಲ್ ನಾಗರಾಜ್ ಎಂಬ ಆರ್‌ಟಿಐ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.

ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯ ಕುರಿತು ಆರ್‌ಟಿಐ ಕಾರ್ಯಕರ್ತ ನಾಗರಾಜ್ ವೈಯಕ್ತಿಕ ವಿಚಾರಗಳನ್ನು ಕೇಳಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗ್ತಿದೆ. ತಹಶೀಲ್ದಾರ್ ಅವರಿಗೆ ಈವರೆಗೆ ಎಷ್ಟು ಬಾರಿ ಮದುವೆಯಾಗಿದೆ, ಯಾರೊಂದಿಗೆ ಡಿವೋರ್ಸ್ ಆಗಿದೆ, ಸದ್ಯ ಯಾರ ಜೊತೆ ಸಂಸಾರ ಮಾಡುತ್ತಿದ್ದಾರೆ, ಎಲ್ಲಿ ಮದುವೆಯಾಗಿದೆ, ಲಗ್ನ ಪತ್ರಿಕೆ, ಕಲ್ಯಾಣ ಮಂಟಪದ ವಿವರಗಳನ್ನು ನಾಗರಾಜ್ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ಈತ ಇನ್ನೂ ಮುಂದುವರಿದು ಗಂಡ ಬಿಡಲು ಕಾರಣ ಏನು, ಯಾವ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ, ಯಾವ ಕಾರಣಕ್ಕೆ ಡಿವೋರ್ಸ್ ಆಗಿದೆ ಎನ್ನುವ ಮಾಹಿತಿಯನ್ನು ಕೇಳಲಾಗಿದೆಯಂತೆ. ಈ ಎಲ್ಲಾ ಮಾಹಿತಿಯನ್ನು ತುರ್ತಾಗಿ ನೀಡುವಂತೆ ನಾಗರಾಜ್ ಆರ್ ಟಿಐ ಅರ್ಜಿ ಸಲ್ಲಿಸಿದ್ದಾರಂತೆ.

ಈ ಕುರಿತು ಆರ್‌ಟಿಐ ಕಾರ್ಯಕರ್ತನ ವಿರುದ್ಧ ತಹಶೀಲ್ದಾರ್ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಆರ್ ಟಿಐ ಕಾರ್ಯಕರ್ತ ನಾಗರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಮುಳಬಾಗಲು ನಗರ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave A Reply