ಅಕ್ಟೋಬರ್ ರಾಶಿ ಭವಿಷ್ಯ | ಗ್ರಹ ಸಂಚಾರದಿಂದ ಈ ಐದು ರಾಶಿಯವರಿಗೆ ಸುರಿದು ಬೀಳಲಿದೆ ಧನ ರಾಶಿ, ಉಳಿದವರಿಗೆ ಏನು ಲಾಭ ?!

ಗ್ರಹಗಳು ತಮ್ಮ ಅಧಿಪತ್ಯದ ಆಧಾರದಲ್ಲಿ ರಾಶಿ ಫಲಾಫಲಗಳನ್ನು ತಿಳಿಸುತ್ತವೆ. ಸ್ತ್ರೀಯರು ಮತ್ತು ಪುರುಷರಿಗೆ ಸಮಾನ ಫಲಗಳು ಗೋಚರಿಸುತ್ತವೆ . ಅಕ್ಟೋಬರ್ ಮಾಸದಲ್ಲಿ ಮಂಗಳ ಗ್ರಹದ ಚಲನೆಯಿಂದ ಮೇಷ, ವೃಷಭ, ಸಿಂಹ, ಕನ್ಯಾ, ಕುಂಭ ಈ ಐದು ರಾಶಿಗಳಿರುವರು ಉತ್ತಮ ಧನ ಲಾಭ ಗಳಿಸಲಿದ್ದಾರೆ.

 

ಮೇಷ(Aries )

ಮೇಷ ರಾಶಿಯವರಿಗೆ ಮಂಗಳ ಸಂಕ್ರಮಣವು ವಿಶೇಷ ಲಾಭವನ್ನು ನೀಡಲಿದೆ. ಮಂಗಳ ಮೇಷ ರಾಶಿಯ ಅಧಿಪತಿ. ಸಂಕ್ರಮಣದ ಸಮಯದಲ್ಲಿ ಮೇಷ ರಾಶಿಯ ಮೂರನೇ ಮನೆಯಲ್ಲಿ ಮಂಗಳವು ಇರುತ್ತದೆ. ಇದು ನಿಮ್ಮ ಜೀವನದಲ್ಲಿ ಬಹಳ ಧನಾತ್ಮಕ ಫಲಿತಾಂಶಗಳನ್ನು ತರುತ್ತದೆ. ಮಂಗಳ ಗ್ರಹದ ಸಂಚಾರದೊಂದಿಗೆ, ಮೇಷ ರಾಶಿಯವರ ಅದೃಷ್ಟ ಬದಲಾಗುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಬಡ್ತಿಯ ಜೊತೆಗೆ ಆದಾಯದಲ್ಲಿಯೂ ಹೆಚ್ಚಳವಾಗುವ ಸಾಧ್ಯತೆಗಳಿವೆ. ಅಕ್ಟೊಬರ್ ತಿಂಗಳಲ್ಲಿ ಒಳಿತಾಗಲಿದೆ. ಈ ಎಲ್ಲಾ ದಿನಗಳಲ್ಲಿ 2, 6,9,10,12,13,22 ಶುಭವಾಗಲಿದೆ. ಈ ತಿಂಗಳು ನೀವು ಲವಲವಿಕೆಯಿಂದ ಕೂಡಿದ್ದು ಆತ್ಮವಿಶ್ವಾಸದಿಂದ ಇರುವಿರಿ. ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಕುಟುಂಬದ ಜೊತೆಗೆ ಉತ್ತಮ ಭಾಂಧವ್ಯ ಹೊಂದಿಕೊಂಡು ಶಾಂತಿ ಮತ್ತು ಖುಷಿಯಿಂದ ಇರುತ್ತೀರಿ. ಹಣಕಾಸಿನ ಪ್ರಯೋಜನಗಳು ಆಗಲಿವೆ. ಮನೆ ಆಸ್ತಿ ಕೊಂಡುಕೊಳ್ಳುವ ಸಾಧ್ಯತೆ ಇದೆ. ಸ್ನೇಹಿತರೊಂದಿಗಿನ ಅನಾವಶ್ಯಕ ಚರ್ಚೆ ನಡೆಯುವುದು. ವ್ಯಾಪಾರದಲ್ಲಿ ಗೊಂದಲಗಳು ಇದ್ದರೂ ಸಹ ಉತ್ತಮ ಪ್ರಯತ್ನ ಅಗತ್ಯ.

ವೃಷಭ (Taurus)
ವೃಷಭ ರಾಶಿಯವರಿಗೆ ಮಂಗಳನ ಪ್ರವೇಶದಿಂದ ಶುಭವಾಗಲಿದೆ. ಆರ್ಥಿಕವಾಗಿ ಸುಧಾರಣೆ ಕಂಡು ಬರಲಿದೆ. ಆದರೆ ಈ ರಾಶಿಯವರು ಬಹಳ ಎಚ್ಚರದಿಂದ ಇರಬೇಕು ಯಾವುದೇ ವಿಭಾಗದಲ್ಲಿ ಕೆಲಸ ಕಾರ್ಯ ನಿರ್ವಹಿಸುವಾಗ ತೊಂದರೆಗಳು ಬಾರದಂತೆ ಏಕಾಗ್ರತೆ ಯಿಂದ ನಿಮ್ಮ ನೀವು ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಮುಂದಿನ ದಿನಾಂಕದಲ್ಲಿ 5,10,17,18,19,24,26 ಶುಭವಾಗಲಿದೆ. ದಿನಾಂಕ 1ರಿಂದ 15ರವರೆಗೆ ಯಾರೊಂದಿಗೂ ಜಗಳ ಅಥವಾ ವೈರತ್ವ ದಿಂದ ದೂರವಿರುವುದು ಉತ್ತಮ.

ಮಿಥುನ (Gemini )

ಮಿಥುನ ರಾಶಿಯವರು ಈ ತಿಂಗಳಿನಲ್ಲಿ ಎರಡು ವಿಚಾರದ ಬಗ್ಗೆ ಜಾಗೃತಿ ವಹಿಸಬೇಕಾಗುತ್ತೆ. ನಿಮ್ಮ ಅಗತ್ಯ ವಸ್ತು ಅಥವಾ ನಿಮಗೆ ನೆಚ್ಚಿನ ಅಂದರೆ ನೀವು ದಿನನಿತ್ಯ ಬಳಸುವ ಅಮೂಲ್ಯ ವಸ್ತು ಕಳೆದುಕೊಳ್ಳುವ ಸಾಧ್ಯತೆ ಇದೆ. ಮತ್ತು ಯಾವುದೇ ಹಣಕಾಸಿನ ವಿಚಾರದಲ್ಲಿ ಸಹಾಯ ಮಾಡದಿರಿ ಮುಂದೆ ದೊಡ್ಡ ದುಷ್ಪಪರಿಣಾಮವನ್ನು ಬೀರಬಹುದು. ಉತ್ತಮ ದಿನಗಳು 3,7,8,12,19,21,31 ನಿಮಗೆ ಶುಭದಿನ. ನಿಮಗೆ ಖರ್ಚು ವೆಚ್ಚಗಳು ಹೆಚ್ಚಾದರು ಸಹ ಹಿರಿಯರು ಪೂರ್ವಿಕರಿಂದ ಹಣಕಾಸು ಆಸ್ತಿ ವಿಚಾರದಲ್ಲಿ ಸಹಾಯ ದೊರೆಯಲಿದೆ.

ಕಟಕ (cancer)

ಈ ರಾಶಿಯವರಿಗೆ ಗುರುಬಲ ಇರುವುದರಿಂದ ಹೊಸ ಉದ್ಯೋಗ ದೊರಕುವ ಭಾಗ್ಯ ಇದೆ ಜೊತೆಗೆ ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಪತಿ ಪತ್ನಿ ಅಥವಾ ಪ್ರೇಮಿಗಳ ನಡುವೆ ಒಳ್ಳೆಯ ಭಾಂಧವ್ಯ ಬೆಳೆಯುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯವಕಾಶ ದೊರೆತು ವಿದೇಶ ಪ್ರಯಾಣ ಸಾಧ್ಯ. ರಾಜಕೀಯವಾಗಿ ನಾಯಕತ್ವ ಸ್ಥಾನ ಪಡೆಯಲು ಅರ್ಹರಾಗುವಿರಿ.

ಸಿಂಹ (leo )

ಸಿಂಹ ರಾಶಿಯವರಿಗೆ ಮಂಗಳ ಗ್ರಹವು ಯೋಗಕಾರಕವಾಗಿದೆ. ಅಕ್ಟೋಬರ್ 16 ರಂದು ಹನ್ನೊಂದನೇ ಮನೆಯಲ್ಲಿ ಸಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಸಿಂಹ ರಾಶಿಯ ಜನರಿಗೆ ದೊಡ್ಡ ಮಟ್ಟದ ಲಾಭವಾಗಲಿದೆ. ಮಂಗಳ ಸಂಕ್ರಮಣದಿಂದ ಸಿಂಹ ರಾಶಿಯವರಿಗೆ ಆದಾಯ ಹೆಚ್ಚಾಗುವ ಸಾಧ್ಯತೆಗಳಿವೆ ಈ ರಾಶಿಯವರು ನಿಧಾನಗತಿಯಾದರೂ ಸಹ ಯಶಸ್ವಿ ಕಡೆಗೆ ಸಾಗುವುದು ಖಚಿತ. ಹಠಮಾರಿಯಾಗಿ ನಿಷ್ಠುರವಾಗಿ ಕೂಡಿದ ಮಾತಿನಿಂದ ಸ್ನೇಹಿತರು ದೂರ ಆಗಬಹುದು. ಸ್ತ್ರೀಯಾರಿಗೆ ಅನಾರೋಗ್ಯ ಕಂಡು ಬರುವ ಸಾಧ್ಯತೆ ಇರುವುದರಿಂದ ಅರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ದಿನಾಂಕ 5,7,4,12,17,22,24,26 ನಿಮಗೆ ಅನುಕೂಲಕರವಾದ ದಿನಗಳಾಗಿವೆ

ಕನ್ಯಾ (virgo)

ಕನ್ಯಾ ರಾಶಿಯವರಿಗೆ ಮಂಗಳ ಗೋಚರವು ಪ್ರಯೋಜನಕಾರಿಯಾಗಲಿದೆ. ನಾಲ್ಕನೇ ಮನೆಯ ಮೇಲೆ ದೃಷ್ಟಿ ಇರುವುದರಿಂದ ಆಸ್ತಿ ಅಥವಾ ವಾಹನಗಳನ್ನು ಖರೀದಿಸುವ ಸಾಧ್ಯತೆಗಳು ಕಂಡುಬರುತ್ತವೆ. ಆರ್ಥಿಕ ಪ್ರಗತಿಯೊಂದಿಗೆ ವ್ಯಾಪಾರ ಅಥವಾ ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗಲಿವೆ. ತೇಜಸ್ಸಿನಿಂದ ನೀವು ಮುಂದುವರಿಯಬೇಕು . ದಿನಾಂಕ 18ರಿಂದ 26 ರವರೆಗೆ ಅದ್ಭುತವಾದ ಕಾಲಾವಕಾಶ ಅಂದರೆ ನೀವು ಯಾವುದೇ ಕಾರ್ಯ ಗಳನ್ನು ಪ್ರಾರಂಭಿಸಲು ಇದು ಉತ್ತಮ ದಿನಗಳಾಗಿವೆ. ಮುಂದಿನ ಜೀವನದ ಬಗ್ಗೆ ಒಳ್ಳೆಯ ನಿರ್ಧಾರ ಕೈಗೊಳ್ಳುವಿರಿ. ದೂರ ಪ್ರಯಾಣ ಸಾಧ್ಯತೆ ಇದೆ. ಬಂಡವಾಳ ಹೂಡಿಕೆಗಳಲಿ ಬಹಳ ಎಚ್ಚರ ವಹಿಸಿ ಮುಂದುವರಿಯುವುದು ಶ್ರೇಷ್ಠ.

ತುಲಾ (libra)

ಮಂಗಳ ಗ್ರಹ ಸಂಚಾರದಿಂದ ನಿಮಗೆ ಫಲಾಫಲಗಳು ಸಮನಾಗಿ ದೊರೆಯಲಿದೆ. ನಿಮ್ಮ ಜಾಣ್ಮೆಯಿಂದ ನೀವೇ ಜಾಗರೂಕರಾಗಿ ಫಲಗಳನ್ನು ಸರಿ ಹೊಂದಿಸಬೇಕು. ನಿಮ್ಮ ಭಾವನೆಗಳಿಗೆ ಧಕ್ಕೆ ಆಗದಂತೆ ವರ್ತನೆ ಉತ್ತಮ. ನಿಮ್ಮಿಂದ ನಿಮ್ಮ ಮನೆಗೆ ಒಳ್ಳೆಯ ಶುಭ ಸುದ್ದಿ ಕೇಳುವಿರಿ. ಊಹಿಸಲಾಗದ ಪಯಣ ನೀವು ಮಾಡುವ ಸಾಧ್ಯತೆ ಇದೆ. ದಿನಾಂಕ 3,10,12,17,21,31 ನಿಮಗೆ ಶುಭ ದಿನಗಳಾಗಿವೆ.

ವೃಶ್ಚಿಕ (scorpio)

ಸಾಹಸದ ಗುಣಗಳು ನಿಮಗೆ ಧೈರ್ಯ ನೀಡುವುದು ಆದರೆ ನೀವು ಗಳಿಸಿದ ಆದಾಯಕ್ಕಿಂತ ಹೆಚ್ಚು ದುಂದುವೆಚ್ಚ ಮಾಡುವಿರಿ ಅದರಿಂದ ನಿಮಗೆ ಹಣಕಾಸು ಪರಿಸ್ಥಿತಿ ಇಕ್ಕಟ್ಟಿನಲ್ಲಿ ಸಿಲುಕಿಸುವುದು. ಆರೋಗ್ಯದಲ್ಲಿ ಏರುಪೇರು ಆಗುವುದು. ಹೆಚ್ಚಿನ ಪ್ರಯಾಣ ಸಾಧ್ಯತೆ. ನಿಮಗೆ ಅನುಕೂಲ ದಿನಗಳು 3,5,12,19,23,31 ಆಗಿರುತ್ತದೆ.

ಧನುಸ್ಸು (sagittarius)
ಹಿರಿಯರಿಂದ ಕುಟುಂಬದವರಿಂದ ಹಣಕಾಸು ಸಿಗಲಿದೆ ಆದರೆ ನೀವು ಅದನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲ ಆಗುವಿರಿ. ಖರ್ಚಿನ ಮೇಲೆ ಹಿಡಿತವಿರಲಿ. ತೀರಾ ಆಲೋಚನೆಗಳು ನಿಮ್ಮ ಸಂತೋಷವನ್ನು ಹಾಳುಗೆಡವುತ್ತವೆ. ಸಂತಾನದ ಬಯಕೆಯುಳ್ಳವರಿಗೆ ಸಂತಾನ ಯೋಗವಿದೆ. ನಿಮ್ಮ ಪ್ರತಿಭೆ ಮತ್ತು ಕೀರ್ತಿ ಉನ್ನತ ಮಟ್ಟಕ್ಕೆ ಏರುವ ಸಾಧ್ಯತೆ ಇದೆ. 7,17,21,24,26 ನಿಮಗೆ ಶುಭ ದಿನಗಳಾಗಿವೆ.

ಮಕರ (capricorn)

ಮಕರ ರಾಶಿಯವರು ಈ ತಿಂಗಳು ಸಮಾಯೋಚಿತ ನಿರ್ಧಾರ ಕೈಗೊಳ್ಳುವುದು ಉತ್ತಮ. ವ್ಯಾಪಾರ ಕ್ಷೇತ್ರದಲ್ಲಿ ನಿಮಗೆ ಯಶಸ್ಸು ಇದೆ ಆದರೆ ನಿಮ್ಮ ಶ್ರಮ ಅಗತ್ಯ. ಕೈಕಾಲು ಸುಸ್ತು ಕಂಡು ಬರುವುದು ಆರೋಗ್ಯದ ಕಡೆ ಗಮನ ವಹಿಸಬೇಕು. ವಿರುದ್ಧ ಲಿಂಗದ ಕಡೆಯಿಂದ ಅಪಾಯ ಇದೆ ಆದ್ದರಿಂದ ವಿರುದ್ಧ ಲಿಂಗದವರ ಜೊತೆಗೆ ಜಗರುಕರಾಗಿ ವಹಿವಾಟು ನಡೆಸುವುದು ಸೂಕ್ತ. ವಾಹನ ಸಂಚಾರದ ಬಗ್ಗೆ ಎಚ್ಚರ ಇರಲಿ.

ಕುಂಭ (aquarius)

ಕುಂಭ ರಾಶಿಯ ತೃತೀಯ ಮತ್ತು ಹತ್ತನೇ ಮನೆಗಳಿಗೆ ಮಂಗಳ ಅಧಿಪತಿ ಆಗಿರುತ್ತಾನೆ ಆದರೆ ಸಂಕ್ರಮಣದ ನಂತರ ಮಂಗಳನು ಐದನೇ ಮನೆಯಲ್ಲಿರುತ್ತಾನೆ. ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಮಕ್ಕಳು ಅರೋಗ್ಯದ ಕಡೆ ಗಮನ ಇರಲಿ ಹಾಗೂ ಶಿಕ್ಷಣ, ಬುದ್ಧಿವಂತಿಕೆ, ಪ್ರೀತಿ ಸಂಬಂಧಗಳು ಗಟ್ಟಿಯಾಗಲಿವೆ ಸಂಕ್ರಮಣದಲ್ಲಿ ಮಂಗಳವು ಧನಾತ್ಮಕತೆಯನ್ನು ನೀಡುತ್ತದೆ ಅಂದರೆ ಆರ್ಥಿಕವಾಗಿ ಮುನ್ನಡೆ ಸಾಧಿಸಲಿದ್ದೀರಿ.

ಮೀನ (Pisces)
ಸಮಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡದೆ ಇದ್ದಲ್ಲಿ ನೀವು ಮತ್ತೆ ಚಿಂತಿಸಿ ಫಲವಿಲ್ಲ. ಮಾತಿನಲ್ಲಿ ಹಿಡಿತವಿರಲಿ ನಿಮ್ಮ ಮಾತೇ ನಿಮಗೆ ಕೆಲವು ಸಮಯ ಆಯುಧ ಆಗಿರುತ್ತದೆ. ಇನ್ನೂ 5,12,21,22 ನಿಮಗೆ ಶುಭ ದಿನವಾಗಿದೆ. ಅನಿರೀಕ್ಷಿತ ಧನ ಲಾಭ ಸಾಧ್ಯತೆ ಇದೆ. ಕೆಲವೊಂದು ಗೌಪ್ಯತೆಯ ವಿಚಾರಗಳು ನಿಮ್ಮಲ್ಲೇ ಇರಲಿ. ಗುರು ಮೀನ ರಾಶಿಯ ಅಧಿಪತಿ ಆದರೂ ಸಹ ನೀವು ಆರೋಗ್ಯದ ವಿಚಾರದಲ್ಲಿ ಎಚ್ಚರದಿಂದ ಇರಬೇಕು. ನೂತನ ವಾಹನ ಯೋಗ ಪ್ರಾಪ್ತಿ ಇದೆ.

Leave A Reply

Your email address will not be published.