Good News : LPG ಸಿಲಿಂಡರ್ ಬೆಲೆಯಲ್ಲಿ 25 ರೂ.ಇಳಿಕೆ

ಇಂದು ಸಿಲಿಂಡರ್ ಗಳ ಹೊಸ ದರಗಳನ್ನು ಬಿಡುಗಡೆ ಮಾಡಲಾಗಿದೆ. ಗ್ರಾಹಕರಿಗೆ ಗುಡ್ ನ್ಯೂಸ್ ಎಂದೇ ಹೇಳಬಹುದು. ಎಲ್ ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಆದರೆ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. 19 ಕೆಜಿ ಕಮರ್ಷಿಯಲ್ ಗ್ಯಾಸ್ (Commercial Gas) ಸಿಲಿಂಡರ್ ಇಂದಿನಿಂದ 25.50 ರೂ.ಗಳಷ್ಟು ಇಳಿಕೆಯಾಗಿದೆ.

 

ಜಾಗತಿಕ ಇಂಧನ ಬೆಲೆಯಲ್ಲಿ ಏರಿಕೆಯೊಂದಿಗೆ ನೈಸರ್ಗಿಕ ಅನಿಲದ ಬೆಲೆ ಶುಕ್ರವಾರ ದಾಖಲೆಯ ಶೇಕಡಾ 40 ರಷ್ಟು ಏರಿಕೆಯಾಗಿದೆ. ಇದು ದೇಶದಲ್ಲಿ ವಿದ್ಯುತ್‌ ಉತ್ಪಾದನೆ, ರಸಗೊಬ್ಬರ ತಯಾರಿಕೆ ಮತ್ತು ಚಾಲನೆಯಲ್ಲಿ ಬಳಸುವ ಅನಿಲವನ್ನು ದುಬಾರಿಯಾಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ (ಪಿಪಿಎಸಿ) ಹೊರಡಿಸಿದ ಆದೇಶದ ಪ್ರಕಾರ, ಹಳೆಯ ಅನಿಲ ಕ್ಷೇತ್ರಗಳಿಂದ ಉತ್ಪಾದಿಸಲಾದ ಅನಿಲಕ್ಕೆ ಪಾವತಿಸುವ ದರವನ್ನು ಪ್ರಸ್ತುತ ಪ್ರತಿ ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್ಟೆ (ಎಂಬಿಟಿಯು) 6.1 ಡಾಲರ್ನಿಂದ 8.57 ಡಾಲರ್ಗೆ ಹೆಚ್ಚಿಸಲಾಗಿದೆ.

ದೆಹಲಿಯಲ್ಲಿ ಎಲ್ ಪಿಜಿ (LPG) ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 1859.50 ರೂ.ಗೆ ಇಳಿದಿದೆ. ಈ ಮೊದಲು ಇದು 1885 ರೂ.ಗೆ ಲಭ್ಯವಿತ್ತು. ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು ಸತತ ಆರನೇ ತಿಂಗಳು ಕಡಿಮೆ ಮಾಡಲಾಗಿದೆ. ಇದರ ಬೆಲೆ ಮೇ ತಿಂಗಳಲ್ಲಿ 2,354ರೂ.ಗೆ ತಲುಪಿತು ಆದರೆ ಅಂದಿನಿಂದ ಅದನ್ನು ನಿರಂತರವಾಗಿ ಕಡಿತಗೊಳಿಸಲಾಗಿದೆ.

ಕೋಲ್ಕತಾದಲ್ಲಿ 19 ಕೆಜಿ ತೂಕದ ಸಿಲಿಂಡರ್ ಬೆಲೆ ಈಗ 1995.50 ರೂ.ಗಳಿಂದ 1959.00 ರೂ., ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1811.50 ರೂ.ಗೆ ಮತ್ತು ಚೆನ್ನೈನಲ್ಲಿ 2009 ರೂ.ಗೆ ಇಳಿದಿದೆ. ಆದಾಗ್ಯೂ, 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಇದರ ಬೆಲೆಯನ್ನು ಜುಲೈ 6 ರಂದು 50ರೂ.ಗಳಷ್ಟು ಹೆಚ್ಚಿಸಲಾಯಿತು. 14.2 ಕೆಜಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ದೆಹಲಿಯಲ್ಲಿ 1053 ರೂ., ಮುಂಬೈನಲ್ಲಿ 1052.50 ರೂ., ಕೋಲ್ಕತಾದಲ್ಲಿ 1079 ರೂ.. ಚೆನ್ನೈನಲ್ಲಿ 1068.50 ರೂ.ಗೆ ಲಭ್ಯವಿದೆ. ಇದರ ಬೆಲೆಯನ್ನು ಮೇ ತಿಂಗಳಲ್ಲಿ ಎರಡು ಬಾರಿ ಹೆಚ್ಚಳ ಮಾಡಲಾಯಿತು. ಮೇ 7 ರಂದು, ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 50 ರೂ.ಗಳಷ್ಟು ಹೆಚ್ಚಿಸಲಾಯಿತು.

Leave A Reply

Your email address will not be published.