ಮಿತ್ತೂರು ಫ್ರೀಡಂ ಹಾಲ್ ನಲ್ಲಿ ಎನ್.ಐ‌.ಎ. ಪರಿಶೀಲನೆ

ಮಾಣಿ : ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಇತರ ಅಂಗ ಸಂಸ್ಥೆಗಳನ್ನು ಕೇಂದ್ರ ಸರಕಾರ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಪರಿಶೀಲನಾ ಕಾರ್ಯ ಮುಂದುವರಿಸಿದ್ದಾರೆ. ಪಿ.ಎಫ್.ಐ. ಮತ್ತು ಇತರ ಸಂಘಟನೆಗಳ ಮೇಲೆ ನಿಗಾ ಇರಿಸಿರುವ ಎನ್.ಐ.ಎ.ತಂಡ ಇದೀಗ ಪಿಎಫ್‌ಐ ಕಛೇರಿಗಳನ್ನು ಬಂದ್ ಮಾಡುವ ಕಾರ್ಯದಲ್ಲಿ ತೊಡಗಿದೆ.

 

ಅಲ್ಲದೆ, ಮುಖಂಡರನ್ನು ಕರೆಸಿ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದೆ. ಇತ್ತೇಚೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಲ್ಪಟ್ಟಿದ್ದ ಮಿತ್ತೂರು ಫ್ರೀಡಂ ಹಾಲ್ ಗೆ ಸೆ.30ರಂದು ಮತ್ತೆ ಭೇಟಿ ನೀಡಿರುವ ಎನ್.ಐ.ಎ. ಅಧಿಕಾರಿಗಳು ಪರಿಶೀಲನೆ ನಡೆಸಿ ಮಹಜರು ನಡೆಸುತ್ತಿದ್ದಾರೆ. ವಿಟ್ಲ ಪೊಲೀಸರು ಎನ್.ಐ.ಎ.ಗೆ ಸಾಥ್ ನೀಡಿದ್ದಾರೆ.

Leave A Reply

Your email address will not be published.