ಹುಡುಗಿಯರ ಗರ್ಬಾ ನೃತ್ಯ ಸ್ಥಳಕ್ಕೆ ಇಣುಕಿ ನೋಡಲು ಬಂದಿದ್ದ ಮುಸ್ಲಿಂ ಯುವಕರಿಗೆ ಭಜರಂಗದಳ ಕಾರ್ಯಕರ್ತರಿಂದ ಹಲ್ಲೆ, ವಿಡಿಯೋ ವೈರಲ್ !

Share the Article

ನವರಾತ್ರಿ ಉತ್ಸವ ಗುಜರಾತಿನಲ್ಲಿ ನಡೆಯುವ ಮಹಾ ದೊಡ್ಡ ಸಂಭ್ರಮ. ಆಗ ಜರುಗುವ ಗರ್ಬಾ ನೃತ್ಯ ಸ್ಥಳದಲ್ಲಿ ನಾಲ್ವರು ಮುಸ್ಲಿಂ ಯುವಕರು ಪ್ರತ್ಯಕ್ಷರಾಗಿದ್ದಾರೆ. ಅವರ ಮೇಲೆ ಭಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನವರಾತ್ರಿ ಹಿನ್ನೆಲೆಯಲ್ಲಿ ಅಹಮದಾಬಾದ್ ನ ಸಿಂಧು ಭವನ ರಸ್ತೆಯಲ್ಲಿ ಗರ್ಭಾ ನಡೆದಿತ್ತು. ಸ್ಥಳದಲ್ಲಿ ಇತರ ಧರ್ಮದ ಜನರು ಬರದಂತೆ ಭಜರಂಗದಳದ ಸ್ವಯಂಸೇವಕರು ಕಟ್ಟೆಚ್ಚರ ನಡೆಸಿದ್ದರು. ಈ ವೇಳೆ ಮುಸ್ಲಿಂ ಯುವಕರು ಅಲ್ಲಿ ಇಣುಕಿ ನೋಡಲು ಬಂದಿದ್ದರು. ಆಗ ಅವರ ಮೇಲೆ ಬಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಗುಜರಾತ್ ವಿಹೆಚ್ ವಿ ವಕ್ತಾರ ಹಿತೇಂದ್ರ ಸಿನ್ಹಾ ರಜಪೂತ್ ಅವರು ಹಲ್ಲೆಯನ್ನು ಸಮರ್ಥಿಸಿಕೊಂಡಿದ್ದಾರೆ. ಲವ್ ಜಿಹಾದ್ ತಡೆಯುವ ಉದ್ದೇಶದಿಂದ ನಮ್ಮ ಸ್ವಯಂಸೇವಕರು ಅವರನ್ನು ಹಿಡಿದು ಥಳಿಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಹಿಂದುಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಅದು ಮಹಿಳೆಯರು ನೃತ್ಯ ಮಾಡುವ ಸಂದರ್ಭ ಅಲ್ಲಿಗೆ ಬರುವ ಅಗತ್ಯ ಏನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.

ಭಜರಂಗದಳದ ಕಾರ್ಯಕರ್ತರು ಲವ್ ಜಿಹಾದ್ ವಿರುದ್ಧದ ಸಂದೇಶಗಳನ್ನು ಪ್ರದರ್ಶಿಸುವ ಫಲಕಗಳನ್ನು ಹಿಡಿದಿದ್ದಾರೆ. ಅಲ್ಲದೇ ಯುವಕರು, ಮುಸ್ಲಿಂರ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ. ಇನ್ನು ಅಲ್ಲಿ ಸಿಕ್ಕ ಮುಸ್ಲಿಂ ಯುವಕರ ಹಣೆಗೆ ಬಲವಂತವಾಗಿ ತಿಲಕ ಇಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

Leave A Reply