ರಾಜ್ಯದ ಅಡಕೆ ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ

ನೆರೆಯ ಭೂತಾನ್ ದೇಶದಿಂದ ಅಡಕೆ ಆಮದು ಬಗ್ಗೆ ಆತಂಕ ಬೇಡ ಎಂದು ಹೇಳುವ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜ್ಯದ ಅಡಕೆ ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಈ ಮೂಲಕ ರಾಜ್ಯದ ಅಡಕೆ ಬೆಳೆಗಾರರಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಸಿಹಿ ಸುದ್ದಿ ನೀಡಿದ್ದಾರೆ.

 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವರು, “ಪ್ರಸ್ತುತ ನಮ್ಮ ದೇಶದಿಂದ ಭೂತಾನ್ ದೇಶಕ್ಕೆ, ಸಂಸ್ಕರಿತ ಅಡಕೆ ಉತ್ಪನ್ನಗಳು, ಆಮದು ಪ್ರಮಾಣಕ್ಕಿಂತ ಹೆಚ್ಚು ರಫ್ತು ಆಗುತ್ತಿದ್ದು, ಭೂತಾನ್ ನಿಂದ ಕೇವಲ ಹಸಿ ಅಡಕೆಗೆ ಮಾತ್ರ ಅನುಮತಿ ನೀಡಲಾಗಿದೆ” ಎಂದು ಹೇಳಿದ್ದಾರೆ.

ನೆರೆಯ ಪುಟ್ಟ ದೇಶ ಭೂತಾನ್ ನಿಂದ 17 ಸಾವಿರ ಟನ್ ಹಸಿ ಅಡಕೆ ಆಮದು ಮಾಡಿಕೊಳ್ಳಲು ಅವಕಾಶ ನೀಡಿದ ಕೇಂದ್ರದ ನಿರ್ಧಾರದಿಂದ, ದೇಶಿಯ ಅಡಕೆ ಮಾರುಕಟ್ಟೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ನೆರೆಯ ಭೂತಾನ್ ದೇಶವು, ಭಾರತದ ಪರಂಪರಾಗತ ಮಿತ್ರ ದೇಶವಾಗಿದ್ದು, ಉಭಯ ದೇಶಗಳ ನಡುವೆ ಉತ್ತಮ ವಾಣಿಜ್ಯ ವಹಿವಾಟು ನಡೆಸಲಾಗುತ್ತಿದೆ, ಎಂಬುದನ್ನು ಸಚಿವರು, ನೆನಪಿಸಿದರು.

ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ಸಚಿವರು, ಅಡಕೆ ಮಾರುಕಟ್ಟೆಯಲ್ಲಿ, ಸ್ಥಿರತೆಯನ್ನು ಕಾಯ್ದು ಕೊಳ್ಳಲು, ಕೇಂದ್ರ ಸರಕಾರದ ಜೊತೆಗೆ ಸತತ ಸಂಪರ್ಕದಲ್ಲಿದೆ. ಭೂತಾನ್ ಅಡಕೆ ಆಮದು ವಿಚಾರವಾಗಿಯೂ, ಮಾತುಕತೆ ನಡೆಸಲಾಗುವುದು, ಬೆಳೆಗಾರರಿಗೆ, ಯಾವುದೇ ಗೊಂದಲ ಆತಂಕ ಬೇಡ, ಎಂದು ಸಚಿವರು ಹೇಳಿದ್ದಾರೆ. ಈ ವಿಚಾರ ಕುರಿತು, ಕೇಂದ್ರಕ್ಕೆ ಮನವರಿಕೆ ಮಾಡಿ ಕೊಡಲು, ಲೋಕ ಸಭಾ ಸದಸ್ಯರ ನೇತೃತ್ವದಲ್ಲಿ, ನಿಯೋಗವೊಂದನ್ನು ಕೊಂಡೊಯ್ಯಲಾಗುವುದು ಎಂದೂ ಸಚಿವರು ಹೇಳಿದರು.

Leave A Reply

Your email address will not be published.