ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಜಿ ಆಹ್ವಾನ | ಯಾರು ಅರ್ಜಿ ಸಲ್ಲಿಸಬಹುದು?
ರಾಜ್ಯದ ಹಲವು ಜಿಲ್ಲೆಗಳ ತಾಲ್ಲೂಕಿನಲ್ಲಿ ವಿವಿಧ ಕಾರಣಗಳಿಂದ ನವೀಕರಣಗೊಳ್ಳದೇ ರದ್ದಾಗಿರುವ ನ್ಯಾಯಬೆಲೆ ಅಂಗಡಿ ಕೇಂದ್ರಗಳಿಗೆ ಹೊಸದಾಗಿ ಅಂಗಡಿ ಮಂಜೂರು ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ (Chikkaballapur) ಗೌರಿಬಿದನೂರು (Gauribidanur) ತಾಲ್ಲೂಕಿನಲ್ಲಿ ಕೆಲವು ನ್ಯಾಯಬೆಲೆ ಅಂಗಡಿ ಪ್ರಾಧಿಕರಣದಾರರು ಪಡಿತರ ಎತ್ತುಗಳಿಯಲ್ಲಿ ವಿಫಲ/ಪಡಿತರ ದುರುಪಯೋಗ/ಸಂಘಗಳ ಋಣ ಸಮಾಪನೆ ಪ್ರಾಧಿಕರಣದಾರರ ನಿಧನ/ಪ್ರಾಧಿಕರಣದಾರರ ರಾಜಿನಾಮೆಗಳಂತಹ ವಿವಿಧ ಕಾರಣಗಳಿಂದ ಅಥವಾ ನವೀಕರಣಗೊಳ್ಳದೇ ಕೆಲವು ನ್ಯಾಯಬೆಲೆ ಅಂಗಡಿಗಳ ಪ್ರಾಧಿಕರಣಗಳು ರದ್ದಾಗಿರುವ ನ್ಯಾಯಬೆಲೆ ಅಂಗಡಿ ಕೇಂದ್ರಗಳಿಗೆ ಹೊಸದಾಗಿ ನ್ಯಾಯಬೆಲೆ ಅಂಗಡಿ (Fair Price Shop) ಮಂಜೂರು ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಗೌರಿಬಿದನೂರು ತಾಲ್ಲೂಕಿನ ಕೋನಾಪುರ, ಜಿ.ಕೊತ್ತೂರು, ಚೋಳಶೆಟ್ಟಹಳ್ಳಿ, ಗುಟ್ಟೇನಹಳ್ಳಿ, ನ್ಯಾಮಗೊಂಡ್ಲು, ಗುಂಡ್ಲಹಳ್ಳಿ ಗ್ರಾಮಗಳಲ್ಲಿ ನ್ಯಾಯಬೆಲೆ ಕೇಂದ್ರಗಳನ್ನು ತೆರೆಯಲು ಅರ್ಹ ಸಂಸ್ಥೆಗಳು, ಸಂಘಗಳು, ವ್ಯಕ್ತಿಗಳು, ವಿಕಲಚೇತನರು ಹಾಗೂ ತೃತೀಯ ಲಿಂಗಿಗಳು ತಾಲ್ಲೂಕು ಕಚೇರಿಯ ಆಹಾರ ಶಾಖೆಯಲ್ಲಿ ಅರ್ಜಿಗಳನ್ನು ಪಡೆದು ಅಕ್ಟೋಬರ್ 27 ರ ಸಂಜೆ 5:30 ಗಂಟೆಯೊಳಗೆ ನಿಗದಿತ ಅರ್ಜಿ ನಮೂನೆ ‘ಎ’ ರಲ್ಲಿ ಭರ್ತಿ ಮಾಡಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಉಪನಿರ್ದೇಶಕರ ಕಚೇರಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾಡಳಿತ ಭವನ, ಚಿಕ್ಕಬಳ್ಳಾಪುರ ಇಲ್ಲಿ ಸಲ್ಲಿಸತಕ್ಕದ್ದು,ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾಡಳಿತ ಭವನ, ಚಿಕ್ಕಬಳ್ಳಾಪುರ ದೂರವಾಣಿ ಸಂಖ್ಯೆ: 08156-277 007 ಗೆ ಸಂಪರ್ಕಿಸಬಹುದು
ಮಂಜೂರಾದ ನ್ಯಾಯಬೆಲೆ ಅಂಗಡಿ ಕೇಂದ್ರಗಳು:
ಗೌರಿಬಿದನೂರು ತಾಲ್ಲೂಕಿನ ಕೋನಾಪುರ, ಜಿ.ಕೊತ್ತೂರು, ಚೋಳಶೆಟ್ಟಹಳ್ಳಿ, ಗುಟ್ಟೇನಹಳ್ಳಿ, ನ್ಯಾಮಗೊಂಡ್ಲು, ಗುಂಡ್ಲಹಳ್ಳಿ ಗ್ರಾಮಗಳಲ್ಲಿ ನ್ಯಾಯಬೆಲೆ ಕೇಂದ್ರಗಳನ್ನು ತೆರೆಯಲು ಅರ್ಹ ಸಂಸ್ಥೆಗಳು, ಸಂಘಗಳು, ವ್ಯಕ್ತಿಗಳು, ವಿಕಲಚೇತನರು ಹಾಗೂ ತೃತೀಯ ಲಿಂಗಿಗಳು ತಾಲ್ಲೂಕು ಕಚೇರಿಯ ಆಹಾರ ಶಾಖೆಯಲ್ಲಿ ಅರ್ಜಿಗಳನ್ನು ಪಡೆದು ಅಕ್ಟೋಬರ್ 27 ರ ಸಂಜೆ 5:30 ಗಂಟೆಯೊಳಗೆ ನಿಗದಿತ ಅರ್ಜಿ ನಮೂನೆ ‘ಎ’ ರಲ್ಲಿ ಭರ್ತಿ ಮಾಡಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಉಪನಿರ್ದೇಶಕರ ಕಚೇರಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾಡಳಿತ ಭವನ, ಚಿಕ್ಕಬಳ್ಳಾಪುರ ಇಲ್ಲಿ ಸಲ್ಲಿಸತಕ್ಕದ್ದು,