SSLC PUC ಪರೀಕ್ಷೆ ಏಕೀಕೃತ ವ್ಯವಸ್ಥೆ – ಸರಳ ಕ್ರಮ ಅನುಸರಣೆ

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರೌಢಶಿಕ್ಷಣದ ಹೊಣೆಯನ್ನು ಹೊತ್ತಿದ್ದು, ಜೊತೆಗೆ ಪಿಯು ಶಿಕ್ಷಣದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡಿರುವ ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿನ ಪರೀಕ್ಷಾ ಶಾಖೆಗಳನ್ನು ವಿಲೀನಗೊಳಿಸಿ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ’ಯನ್ನು ಅಸ್ತಿತ್ವಕ್ಕೆ ತರಲು ಸರ್ಕಾರ ನಿರ್ಧಾರ ಕೈಗೊಂಡಿದೆ.

 

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ತಿದ್ದುಪಡಿ) ಈ ಎರಡೂ ಮಂಡಳಿಗಳನ್ನು ವಿಲೀನಗೊಳಿಸಬೇಕೆಂಬ ವಿಧೇಯಕಕ್ಕೆ ಅನುಮತಿ ನೀಡಿ ಅನುಮೋದನೆ ಅಂಗೀಕರಿಸಿದೆ. ಈ ಬೇಡಿಕೆಗೆ ಪೂರಕವಾಗಿ ಮೊದಲ ಹಂತದ ನಡೆಯಾಗಿ, ಇದೀಗ ಪರೀಕ್ಷಾ ಶಾಖೆಗಳನ್ನು ವಿಲೀನಗೊಳಿಸಲಾಗಿದ್ದು, ಹೊಸ ಶಿಕ್ಷಣ ನೀತಿಯನ್ನು ಜಾರಿ ಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಾರ್ಯರೂಪಕ್ಕೆ ತರುವ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.

ಇದರ ಜೊತೆಗೆ ಹೀಗೆ ವಿಲೀನ ಮಾಡುವುದರ ಪ್ರತಿಫಲವಾಗಿ ವಿಲೀನದ ಸಾಧಕ-ಬಾಧಕಗಳ ಪರಿಶೀಲನೆ ಮಾಡುವ ಅಗತ್ಯವಿರುವುದರಿಂದ ಸಮಿತಿಯೊಂದನ್ನು ರಚಿಸಿ, ಸಮಿತಿ ನೀಡುವ ವರದಿ ಆಧರಿಸಿ ಹೊಸ ಮಂಡಳಿಯ ರಚನೆ ಮತ್ತು ಕಾರ್ಯಗಳು ನಡೆಯುತ್ತಿರುವ ವೈಖರಿಯ ಬಗ್ಗೆ ಮಾಹಿತಿ ಕಲೆ ಹಾಕುವ ಪ್ರಕ್ರಿಯೆಗೆ ಮುಂದಾಗಿದೆ.

2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ’ ಏಕೀಕೃತ ವ್ಯವಸ್ಥೆ ಅನುಷ್ಠಾನಕ್ಕೆ ತರಲಿದ್ದು, ಇದರ ಮೂಲಕ ಹೆಸರನ್ನು ಒಳಗೊಂಡ ಅಂಕಪಟ್ಟಿಗಳು ದೊರೆಯಲಿವೆ. ಈ ಹಿಂದೆ 2020ರಲ್ಲಿಯೇ ಎರಡೂ ಮಂಡಳಿಗಳನ್ನು ವಿಲೀನಗೊಳಿಸುವ ಹಾಗೂ ಪರೀಕ್ಷಾ ವಿಭಾಗಗಳನ್ನು ಒಗ್ಗೂಡಿಸುವ ಪ್ರಸ್ತಾಪ ವನ್ನು ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಮುಂದಿಟ್ಟಿದ್ದರೂ ಕೂಡ ಕಾರ್ಯರೂಪಕ್ಕೆ ಬರಲು ವಿಳಂಬವಾಗಿದೆ.

ಕೇಂದ್ರದಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್​ಇ) ಎಸ್​ಎಸ್​ಎಲ್​ಸಿ ಜತೆಗೆ ಪಿಯು ಶಿಕ್ಷಣವನ್ನು ನೋಡಿಕೊಳ್ಳುತ್ತಿದೆ. ಇನ್ನೂ ಕೆಲ ರಾಜ್ಯಗಳಲ್ಲಿ 10ನೇ ತರಗತಿಯ ನಂತರದ ಶಿಕ್ಷಣವನ್ನು 11 ಮತ್ತು 12ನೇ ತರಗತಿಯೆಂದೇ ಪರಿಗಣಿಸಲಾಗುತ್ತಿದ್ದು, ಇದೇ ವಿಧಾನವನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಚಿಂತನೆ ನಡೆಯುತ್ತಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ) ಅನುಸಾರವಾಗಿ ಶಿಕ್ಷಣವನ್ನು ಎಲ್​ಕೆಜಿಯಿಂದ 2ನೇ ತರಗತಿ, 3ರಿಂದ 5ನೇ ತರಗತಿ, 6ರಿಂದ 8ನೇ ತರಗತಿ ಹಾಗೂ 9ರಿಂದ 12ನೇ ತರಗತಿ ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಈಗಾಗಲೆ, ಪದವಿ ಕಾಲೇಜುಗಳ ಶಿಕ್ಷಣದ ಗುಣಮಟ್ಟವನ್ನೂ ಪರಿಗಣಿಸಿ, ಗ್ರೇಡಿಂಗ್ ನೀಡಲು ವಿಶ್ವವಿದ್ಯಾನಿಲಯಗಳಲ್ಲಿ ನ್ಯಾಕ್ ವ್ಯವಸ್ಥೆ ಅನುಷ್ಠಾನದಲ್ಲಿದೆ. ಇದೇ ಮಾದರಿಯನ್ನು ಉದ್ದೇಶಿತ ಏಕೀಕೃತ ಮಂಡಳಿಯಡಿ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳ ಗುಣಮಟ್ಟ ಪರಿಶೀಲಿಸಲು ‘ಸ್ಕೂಲ್ ಎಕ್ಸಾಮಿನೇಷನ್ ಆಂಡ್ ಅಸೆಸ್​ವೆುಂಟ್’ ಹೆಸರಿನ ಮಂಡಳಿ ರಚಿಸಿ, ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಿಗೆ ಗ್ರೇಡಿಂಗ್ ನೀಡುವ ಯೋಚನೆಯನ್ನು ನಡೆಸಲಾಗಿದೆ. ಅನುಷ್ಠಾನಕ್ಕೆ ತರುವಾಗ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಾದ ಅವಶ್ಯಕತೆಯೂ ಇದೆ.

ಸರ್ಕಾರದ ವೆಚ್ಚ ಇಳಿಸುವುದರ ಜೊತೆಗೆ ಆಡಳಿತಾತ್ಮಕ ಅನುಕೂಲವಾಗುವ ರೀತಿಯಲ್ಲಿ ಇಲಾಖೆಗಳನ್ನು ವಿಲೀನಗೊಳಿಸುವ ಕುರಿತು ಮಾಜಿ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಸಮಿತಿ ಈಗಾಗಲೇ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಈ ಶಿಫಾರಸುಗಳನ್ನು ಪರಿಶೀಲನೆಗಾಗಿ ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿದ್ದು,ಆ ಸಮಿತಿಯ ವರದಿ ಇನ್ನೂ ಕಾರ್ಯಹಂತದಲ್ಲಿದ್ದು, ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

Leave A Reply

Your email address will not be published.