ನೀವು ತೇಗುವಾಗ ಕೆಟ್ಟ ವಾಸನೆ ಬರ್ತಾ ಇದ್ಯ? ಹೀಗೆ ಮಾಡಿ ಸಾಕು
ಸಣ್ಣ ಮಗುವಿನಿಂದ ದೊಡ್ಡವರ ತನಕವೂ ತೇಗುವುದು ಸಾಮಾನ್ಯ. ಇದು ಆರೋಗ್ಯಕರವಾದ ವಿಚಾರ ಎಂದೇ ಹೇಳಬಹುದು. ಯಾಕೆಂದ್ರೆ ಊಟ ಆಗಿ ಅದು ಜೀರ್ಣವಾಗಲು ಆರಂಭವಾಗಿದೆ ಎಂದು ತಿಳಿಯುವುದೇ ತೇಗು ಬಂದಾಗ. ಅದೇ ತೇಗುವ ದುರ್ವಾಸನೆ ಬರುವಾಗ ನಮ್ಮ ಪ್ರಾಣಕ್ಕೆ ಅಭಯ ತರುವ ಹಾಗೆ. ಇದಕ್ಕಾಗಿ ಏನು ಮಾಡಬೇಕೆಂದು ತಿಳಿಯೋಣ.
- ಊಟ ಆದ ನಂತರ ಸೋಂಪನ್ನು ತಿನ್ನಬೇಕು. ಇದರಿಂದ ಬಾಯಿ ವಾಸನೆ ಹಾಗೂ ದುರ್ವಾಸನೆ ತೇಗನ್ನು ಕೂಡ ತಡೆಯಬಹುದು. ಏಕೆಂದರೆ ಸೋಂಪು ಜೀರ್ಣಕ್ರಿಯೆಗೆ ಸಾಕಷ್ಟು ಸಹಕಾರವಾಗಿದೆ.
- ಬಿಸಿನೀರಿಗೆ ತುಳಸಿ ಎಲೆಯನ್ನು ಹಾಕಿ ಕುಡಿಯಬೇಕು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಜೀರ್ಣಕ್ರಿಯೆಯು ಇನ್ನಷ್ಟು ಹೆಚ್ಚುತ್ತದೆ. ಹಾಗೂ ಎದೆ ಉಬ್ಬಸವನ್ನು ಕೂಡ ಇದು ತಡೆಯುತ್ತದೆ ಎನ್ನಬಹುದು.
- ಆಗಾಗ ದುರ್ವಾಸನೆ ಬರುವುದು ಇದು ಕರುಳಿನ ಸಹಲಕ್ಷಣಗಳು (IBS), ಗ್ಯಾಸ್ಟ್ರೋ-ಓಸೋಫೇಜಿಲ್ ರಿಫ್ಲಕ್ಸ್ ಕಾಯಿಲೆ (GORD) ಎಂದೂ ಕರೆಯಲಾಗುತ್ತದೆ. ಆಸಿಡ್ ರಿಫ್ಲಕ್ಸ್ ಎಂದರೆ ಹೊಟ್ಟೆಯ ಆಮ್ಲವು ಜೀರ್ಣಾಂಗ ವ್ಯವಸ್ಥೆಯ ಕೆಳಗಿನ ಭಾಗದಿಂದ ಗಂಟಲಿಗೆ ಮತ್ತೆ ಹರಿಯುತ್ತದೆ.
- ಕಾಫಿ ಮತ್ತು ಟೀಯನ್ನು ದಿನೇ ದಿನೇ ಕಡಿಮೆ ಮಾಡಲು ಪ್ರಯತ್ನಿಸಲೇಬೇಕು. ಗ್ರೀನ್ ಟೀ ಅನ್ನು ಕುಡಿದರೆ ದುರ್ವಾಸನೆ ಅಂತಹ ತೇಗು ಬರುವುದು ಕಡಿಮೆಯಾಗುತ್ತದೆ.
- ಈ ದುರ್ವಾಸನೆ ಬರುವ ತೇಗನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಲೇಬಾರದು. ಯಾಕೆಂದರೆ ಇದೊಂದು ಮಾರಣಾಂತಕ ಕಾಯಿಲೆ. ಮನೆಯಲ್ಲೇ ಇರುವ ವಸ್ತುಗಳನ್ನು ಉಪಯೋಗಿಸುವುದರ ಜೊತೆಗೆ ಇದನ್ನು ಆದಷ್ಟು ಬೇಗ ಕಡಿಮೆ ಮಾಡಿಕೊಳ್ಳಿ.