ಗುಡ್ ನ್ಯೂಸ್: ಸರಕಾರದಿಂದ ಪ್ರತಿ ಕುಟುಂಬಕ್ಕೆ ಉಚಿತ ಗ್ಯಾಸ್ ಸಿಲಿಂಡರ್ ಘೋಷಣೆ

ದೀಪಾವಳಿ ಸಡಗರದ ಹಬ್ಬ. ಸಂತೋಷ ಸಂಭ್ರಮವನ್ನು ಹೊತ್ತು ತರುವ ಹಬ್ಬ. ಹಾಗೆನೇ ಇಲ್ಲೊಂದು ಸರಕಾರ ಜನತೆಗೆ ಖುಷಿಯ ಸುದ್ದಿ ನೀಡಿದೆ. ದೀಪಾವಳಿಯಂದು ಭರ್ಜರಿ ಸಿಹಿ ಸುದ್ದಿ ನೀಡಿದೆ.

 

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ ದೀಪಾವಳಿಯಂದು ಬಡ ಕುಟುಂಬಗಳಿಗೆ ಉಡುಗೊರೆ ನೀಡಲು ಸಿದ್ಧತೆ ನಡೆಸುತ್ತಿದೆ. ದೀಪಾವಳಿ ಸಮಯ ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲವನ್ನು ಒದಗಿಸುವುದಾಗಿ ಸರ್ಕಾರ ಘೋಷಿಸಿದೆ.

ಪ್ರತಿ ಕುಟುಂಬಕ್ಕೆ ಒಂದು ಸಿಲಿಂಡರ್’ನ್ನ ಉಚಿತವಾಗಿ ನೀಡಲಾಗುವುದು ಎಂದು ಹೇಳಿವೆ. ವಾಸ್ತವವಾಗಿ, ಬಿಜೆಪಿ 2022ರ ವಿಧಾನಸಭಾ ಚುನಾವಣೆಯಲ್ಲಿ ತನ್ನ ನಿರ್ಣಯ ಪತ್ರದಲ್ಲಿ ದೀಪಾವಳಿ ಮತ್ತು ಹೋಳಿಯಂದು ಉಚಿತ ಗ್ಯಾಸ್ ಸಿಲಿಂಡಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ಇದೀಗ ಆ ಭರವಸೆ ಈಡೇರುವ ಸನಿಹಕ್ಕೆ ಬಂದಿದೆ.

Leave A Reply

Your email address will not be published.