ಫುಡ್ ಪಾಯಿಸನ್ ಆದಾಗ ಹೀಗೆ ಮಾಡಿ ಸಾಕು !!!
ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿರಿಯರ ತನಕವೂ ಸಾಮಾನ್ಯವಾಗಿ ಹೊರಗಿನ ಐಟಮ್ ಗಳನ್ನು ಸೇವಿಸುವುದು ಸಾಮಾನ್ಯವಾಗಿದೆ. ಅದು ತಿನ್ನುವುದು ತಪ್ಪಲ್ಲ ಆದರೆ ಅತಿಯಾದರೆ ಅಮೃತವು ವಿಷ ಎಂಬಂತೆ ಜಾಸ್ತಿಯಾಗಿ ಹೊರಗಿನ ಪದಾರ್ಥಗಳನ್ನು ಸೇವಿಸಬಾರದು.
ಈ ಜಂಕ್ ಫುಡ್ ಮತ್ತು ಚಾಟ್ಸ್ ಗಳನ್ನು ತಿಂದು ಇತ್ತೀಚಿನ ದಿನಗಳಲ್ಲಿ ಫುಡ್ ಪಾಯಿಸನ್ ಅನ್ನುವ ರೋಗ ರುಜಿನಗಳಿಗೆ ಒಳಗಾಗ್ತಾ ಇದ್ದಾರೆ ಜನರು. ಇದಕ್ಕೆ ವಯಸ್ಸಿನ ಮಿತಿ ಇಲ್ಲದಂತೆ ರೋಗಕ್ಕೆ ತುತ್ತಾಗುತಿದ್ದಾರೆ. ಫುಡ್ ಪಾಯಿಸನ್ ಆಗುವ ಮೊದಲು ಹುಳಿ ತೇಗು, ವಾಕಳಿಕೆ ಬರುವ ಲಕ್ಷಣಗಳು ಕಾಣುತ್ತವೆ.
ಇದಕ್ಕೆ ವೈದ್ಯರ ಬಳಿ ಹೋಗದೇ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ.
ಮೊದಲ ಹಂತದಲ್ಲಿ ಹುಳಿ ಪದಾರ್ಥಗಳ ಜ್ಯೂಸ್ ಅಥವಾ ಹಣ್ಣನ್ನು ಸೇವಿಸಿ.
ಅರ್ಧ ಗಂಟೆಗೊಮ್ಮೆ ನೀರನ್ನು ಕುಡಿಯಿರಿ. ತೇಗು ಬರುವಷ್ಟು ನೀರು ಕುಡಿಯಬೇಕು.
ವ್ಯಾಯಾಮವನ್ನು ಮಾಡ್ಬೇಕು. ಆಗ ದೇಹಕ್ಕೆ ಚಲನ ವಲನಗಳು ದೊರೆಯುತ್ತವೆ. ಉತ್ತಮ ಇದು.
ಕೊನೆಯದಾಗಿ ಚೆನ್ನಾಗಿ ನಿದ್ರಿಸಬೇಕು ಹಾಗೂ ಹೊರಗಿನ ಪದಾರ್ಥಗಳನ್ನು ಸೇವಿಸದೇ ಮನೆಯಲ್ಲಿಯೇ ಪತ್ಯೆ ಮಾಡ್ಬೇಕು. ಅಂದ್ರೆ ಹಾಲು ಮೊಸರು ಅನ್ನ ಮಾತ್ರ ತಿನ್ನಬೇಕು.
ಇವಿಷ್ಟು ಫುಡ್ ಪಾಯಿಸನ್ ಆದಾಗ ತೆಗೆದುಕೊಳ್ಳುವ ಪ್ರಥಮ ಚಿಕಿತ್ಸೆ ಗಳಾಗಿವೆ. ಇದಾದ ನಂತರವೂ ಜೋರಾದರೆ ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗಲೇ ಬೇಕು.