ಯುವಕರ ನಡುವೆ ಭಾರೀ ಗಲಾಟೆ | ಓರ್ವನ ಕೈ ಕತ್ತರಿಸಿದ ದುಷ್ಕರ್ಮಿಗಳು

ಯುವಕರ ಮಧ್ಯೆ ಜಗಳ ಪ್ರಾರಂಭವಾಗಿದ್ದು, ಈ ಗಲಾಟೆಯಲ್ಲಿ ಓರ್ವನ ಕೈ ಕಟ್ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಪೂಜಿ ನಗರದಲ್ಲಿ ನಡೆದಿದೆ. ಈ ಮಾರಾಮರಿಯಲ್ಲಿ ಓರ್ವನ ಬಲಭಾಗದ ಕೈ ಕಟ್ ಮಾಡಿರುವ ಪ್ರಕರಣ ನಿನ್ನೆ ರಾತ್ರಿ ನಡೆದಿದೆ.

 

ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಪೂಜಿನಗರದ ಶೋಭಾ ಟೆಂಟ್ ಬಳಿ ಐವರು ಯುವಕರ ತಂಡ ಓರ್ವನ ಕೈ ಕತ್ತರಿಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

ಶೇಬ್ (20) ಎಂಬ ಯುವಕನೇ ಹಲ್ಲೆಗೊಳಗಾದ ಯುವಕ. ರಾತ್ರಿ 8 ಗಂಟೆ ಸುಮಾರಿಗೆ ಬಾಪೂಜಿ ನಗರದ ಶೋಭಾ ಟೆಂಟ್ ಬಳಿ ಈ ಪ್ರಕರಣ ನಡೆದಿದೆ. ಮುಬಾರಕ್, ಸಮೀರ್ ಸೇರಿದಂತೆ ಐವರು ಯುವಕರು ಶೇಬ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಆದರೆ ಹಲ್ಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಇನ್ನು, ಹಲ್ಲೆಗೊಳಗಾದ ಯುವಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಬ್ಯಾಟರಾಯನಪುರ ಪೊಲೀಸರು, ಗಾಯಾಳು ಹೇಳಿಕೆ ದಾಖಲಿಸಿಕೊಂಡು ಹಲ್ಲೆ ಮಾಡಿದವರ ಪತ್ತೆಗೆ ಬಲೆ ಬೀಸಿದ್ದಾರೆ.

Leave A Reply

Your email address will not be published.