EWS ಕೋಟಾದಡಿಯಲ್ಲಿ OBC ಅಭ್ಯರ್ಥಿಗಳ ನೇಮಕಾತಿ | ಕೇಂದ್ರದಿಂದ ಮಹತ್ವದ ಮಾಹಿತಿ

ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯ ನಡುವೆ, ಇಡಬ್ಲ್ಯೂಎಸ್ ಮೀಸಲಾತಿಗೆ(EWS Reservation) ಸಂಬಂಧಿಸಿದಂತೆ , ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಇಡಬ್ಲ್ಯೂಎಸ್ ಕೋಟಾದಲ್ಲಿ ನೇಮಕಾತಿ ಮಾಡುವ ವಿವರವನ್ನು ಬಿಡುಗಡೆ ಮಾಡಿದೆ. ಇದರನ್ವಯ, ರಾಜ್ಯದ ಇಡಬ್ಲ್ಯೂಎಸ್ ಪಟ್ಟಿಯಲ್ಲಿದ್ದು, ಆದರೆ ಕೇಂದ್ರ ಪಟ್ಟಿಯಲ್ಲಿ ಪರಿಗಣಿಸಲಾಗದಿದ್ದರೂ ಕೂಡ, ಒಬಿಸಿ ಸಮುದಾಯದ ಅಭ್ಯರ್ಥಿಗಳು ಭಾರತ ಸರ್ಕಾರವು ಬಿಡುಗಡೆ ಮಾಡಿದ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಿದ್ದು, ಅರ್ಹತೆ, ಅಗತ್ಯ ವಿವರಗಳನ್ನು ಒದಗಿಸಬೇಕಾಗುತ್ತದೆ.

 

ಇಡಬ್ಲ್ಯೂಎಸ್‌ನಲ್ಲಿ ಶೇಕಡಾ 10ರಷ್ಟು ಮೀಸಲಾತಿ ಅಡಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದು, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು EWS ಕೋಟಾದ ಮಾನದಂಡಗಳನ್ನ ಅರ್ಹತೆ ಪಡೆಯುವ ಕುರಿತು ಅನುಮಾನ ಬಗೆಹರಿಸಲು, ಪ್ರಶ್ನೆಗಳ ಪಟ್ಟಿಯ ಜೊತೆಗೆ ಉತ್ತರವನ್ನು ಕೂಡ ಬಿಡುಗಡೆ ಮಾಡಿದೆ.ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಇಡಬ್ಲ್ಯೂಎಸ್ ಕೋಟಾಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನ ವಿಚಾರಣೆ ನಡೆಸುತ್ತಿದ್ದು, EWS ಕೋಟಾದ ಸಾಂವಿಧಾನಿಕತೆಯ ಬಗ್ಗೆ ಈ ಅರ್ಜಿಗಳಲ್ಲಿ ಪ್ರಶ್ನೆಗಳು ತಲೆದೋರಿದ್ದು, ಇಲಾಖೆ ಹೇಗೆ ಸ್ಪಷ್ಟನೆ ನೀಡುತ್ತದೆ ಎಂದು ಕಾದು ನೋಡಬೇಕು.

ಈ ನಡುವೆ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯರು ಕೇಂದ್ರ ಸರ್ಕಾರದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗುವುದಿಲ್ಲ ಎಂದು ಸಿಬ್ಬಂದಿ ಇಲಾಖೆ ಹೇಳಿದೆ. ಇದಲ್ಲದೆ ಅವರು ಯಾವುದೇ ಸ್ಥಳದಲ್ಲಿ ವಾಸವಾಗಿದ್ದರೂ ಕೂಡ ನೇಮಕಾತಿ ಪ್ರಕ್ರಿಯೆಯಲ್ಲಿ ಇಡಬ್ಲ್ಯೂಎಸ್ ಕೋಟಾದ ಸೀಟುಗಳು ಖಾಲಿಯಾಗಿದ್ದರೆ , ಅವರು ಮುಂದಿನ ವರ್ಷಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

EWS ಅಭ್ಯರ್ಥಿಗಳ ಮೂಲಕವೂ ಈ ಖಾಲಿ ಹುದ್ದೆಗಳನ್ನು ತುಂಬಲು ನಿರಂತರ ಪ್ರಯತ್ನ ನಡೆಸಬೇಕಾಗಿದ್ದು, ಇನ್ನೂ ಹುದ್ದೆಗಳು ಭರ್ತಿಯಾಗದೆ ಉಳಿದಿದ್ದರೆ, ಅವುಗಳನ್ನು ಕಾಯ್ದಿರಿಸದ ವರ್ಗದ ಹುದ್ದೆಗಳಾಗಿ ಭರ್ತಿ ಮಾಡಬಹುದಾಗಿದೆ. ಆದರೆ, ಇಡಬ್ಲ್ಯೂಎಸ್ ಅಭ್ಯರ್ಥಿಗಳೇ ಲಭ್ಯವಿಲ್ಲದ್ದುದರಿಂದ , ಪರಿಗಣಿಸಿದ ಸಂಖ್ಯೆಗಿಂತ ಸಾಮಾನ್ಯ ವರ್ಗದಲ್ಲಿ ಹೆಚ್ಚಿನ ಅವಕಾಶ ನೀಡಲು ಸಾಧ್ಯವಿದೆಯೇ ಎಂದು ನೋಡಿ, ಅರ್ಜಿಗಳ ಸಂಖ್ಯೆ ಹೆಚ್ಚು ಬಂದರೆ, ಅರ್ಹತೆಯ ಆಧಾರದಲ್ಲಿ ಅರ್ಜಿಯನ್ನು ಕಡಿಮೆ ಮಾಡಲಾಗುತ್ತದೆ.

ಸಿಬ್ಬಂದಿ ಇಲಾಖೆಯ ಪ್ರಕಾರ, ಈಗ ವಸತಿ ಪ್ಲಾಟ್ ಅಥವಾ ಫ್ಲಾಟ್’ನ್ನ EWSಗಾಗಿ ವಾಣಿಜ್ಯ ಆಸ್ತಿ ಎಂದು ಕರೆಯಲಾಗಿದ್ದು, EWS ನೇಮಕಾತಿಗೆ ಸಂಬಂಧಿಸಿದಂತೆ 31 ಜನವರಿ 2019 ರಂದು ನೀಡಲಾದ ಮೆಮೊರಾಂಡಮ್‌ನಲ್ಲಿ ಇದನ್ನು ಪರಿಗಣಿಸಲಾಗಿಲ್ಲ. ಇದರೊಂದಿಗೆ, ಪ್ರಸ್ತುತ, 5 ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಕೃಷಿಭೂಮಿಯನ್ನೂ ಹೊಂದಿರುವ ,1000 ಚದರ ಅಡಿ ಅಥವಾ ಅದಕ್ಕಿಂತ ಹೆಚ್ಚಿನ ವಸತಿ ಫ್ಲಾಟ್, ಪುರಸಭೆಯ ಪ್ರದೇಶದಲ್ಲಿ 100 ಚದರ ಗಜಗಳು ಅಥವಾ ಹೆಚ್ಚಿನ ಭೂಮಿ ಅಥವಾ ಪುರಸಭೆಯ ಮಿತಿಯ ಹೊರಗೆ 200 ಚದರ ಗಜಗಳ ವಸತಿ ಪ್ಲಾಟ್ ಇರುವ ಕುಟುಂಬವನ್ನು EWS ಅರ್ಜಿ ಸಲ್ಲಿಸಲು ಪರಿಗಣಿಸಲಾಗದು.

EWS ಮಾನದಂಡಗಳಿಗೆ ಅರ್ಹತೆ ಪಡೆಯುವ ಕುಟುಂಬವು ಅಜ್ಜಿಯರು ಅಥವಾ ಯಾವುದೇ ಒಡಹುಟ್ಟಿದವರು ಅಥವಾ 18 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳನ್ನ ಒಳಗೊಂಡಿರುವುದಿಲ್ಲ ಎಂದು ಸಿಬ್ಬಂದಿ ಇಲಾಖೆ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ, ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮುನ್ನ ಹಿಂದಿನ ವರ್ಷದ ಮಾಸಿಕ ಪಿಂಚಣಿ, ವೇತನ, ಕೃಷಿ, ವ್ಯಾಪಾರ ಹಾಗೂ ವೃತ್ತಿಪರ ಆದಾಯವೂ ಮಾಸಿಕ ಆದಾಯಕ್ಕೆ ಸೇರ್ಪಡೆ ಮಾಡಬೇಕಾಗುತ್ತದೆ. EWS ಮಾನದಂಡಗಳಿಗೆ ಅನುಸಾರ ಅರ್ಜಿಯನ್ನು ಪರಿಗಣಿಸಿ , ನೇಮಕಾತಿ ಮಾಡಲಾಗುತ್ತದೆ ಹಾಗಾಗಿ ಮೇಲೆ ತಿಳಿಸಿದ ಅಂಶಗಳನ್ನು ಗಮನಿಸಿ, ಮಾಹಿತಿ ಕಲೆ ಹಾಕಿ ಅರ್ಜಿ ಸಲ್ಲಿಸುವುದು ಉತ್ತಮ.

Leave A Reply

Your email address will not be published.