LPG Subsidy : ಎಲ್‌ಪಿಜಿ ಸಬ್ಸಿಡಿ ಸರಕಾರದಿಂದ ಹೊಸ ನಿಯಮ

ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿಗೆ (LPG Subsidy) ಕುರಿತಂತೆ ಸರಕಾರದ ಹೊಸ ನಿಯಮವೊಂದನ್ನು ಪ್ರಕಟಿಸಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆ 1000ಕ್ಕೆ ತಲುಪಿದ್ದು, ಈ ಕುರಿತೇ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಎಲ್‌ಪಿಜಿ ಸಿಲಿಂಡರ್ ಹಣದುಬ್ಬರ ಏರುತ್ತಿರುವ ಬಗ್ಗೆ ಸರಕಾರ ಹೊಸ ನಿಯಮ ಜಾರಿಗೆ ಮುಂದಾಗಿದೆ.

ಎಲ್‌ಪಿಜಿ ಸಿಲಿಂಡರ್‌ಗಳ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ನಿಯಮಗಳನ್ನು ಜಾರಿಗೆ ತರಲಿದೆ. ಒಂದು ಸರಕಾರ ಸಬ್ಸಿಡಿ ರಹಿತ ಸಿಲಿಂಡರ್‌ಗಳನ್ನು ಪೂರೈಸಬೇಕು. ಅಥವಾ ಕೆಲವು ಆಯ್ದ ಗ್ರಾಹಕರು ಸಹ ಸಬ್ಸಿಡಿಯ ಲಾಭವನ್ನು ನೀಡಬೇಕು. ಅನುದಾನ ನೀಡುವ ಬಗ್ಗೆ ಸರಕಾರ ಇದುವರೆಗೆ ಯಾವುದೇ ಸ್ಪಷ್ಟ ನಿಲುವನ್ನು ಕೈಗೊಂಡಿಲ್ಲ. ಸದ್ಯದ ಮಾಹಿತಿಯ ಪ್ರಕಾರ 10 ಲಕ್ಷ ಆದಾಯ ಎಂಬ ನಿಯಮ ಜಾರಿಯಲ್ಲಿದ್ದು, ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಹಾಯಧನದ ಲಾಭ ದೊರೆಯಲಿದೆ.

ಉಳಿದ ಜನರಿಗೆ ಸಬ್ಸಿಡಿ ಕೊನೆಗೊಳ್ಳುವ ಸಾಧ್ಯತೆಯಿದೆ. ಕಳೆದ ಹಲವು ತಿಂಗಳುಗಳಿಂದ ಎಲ್‌ಪಿಜಿ ಮೇಲಿನ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗಿದೆ. ಕೊರೊನಾ ವೈರಸ್ ಸೋಂಕಿನ ಆರ್ಭಟದ ವೇಳೆಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಹಾಗೂ ಅಡುಗೆ ಅನಿಲದ ಬೆಲೆಗಳಲ್ಲಿ ನಿರಂತರವಾಗಿ ಕುಸಿತ ಆಗಿದೆ. ದೇಶದಾದ್ಯಂತ ಇದುವರೆಗೆ ಸಂಪೂರ್ಣವಾಗಿ ಸಬ್ಸಿಡಿ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿಲ್ಲ. ಜನವರಿ 2015 ರಲ್ಲಿ ಎಲ್‌ಪಿಜಿ ಸಬ್ಸಿಡಿ ವ್ಯವಸ್ಥೆಯನ್ನು ಸರಕಾರ ಜಾರಿಗೆ ತಂದಿತ್ತು. ಇದರ ಅಡಿಯಲ್ಲಿ ಗ್ರಾಹಕರು ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್‌ನ ಪೂರ್ಣ ಮೊತ್ತವನ್ನು ಪಾವತಿ ಮಾಡಬೇಕು. ನಂತರದಲ್ಲಿ ಗ್ರಾಹಕರ ಖಾತೆಗಳಿಗೆ ಸಬ್ಸಿಡಿ ಹಣವನ್ನು ಸರಕಾರ ವರ್ಗಾವಣೆ ಮಾಡುತ್ತಿತ್ತು.

ಸೆಪ್ಟೆಂಬರ್ 1 ರಂದು ಸರ್ಕಾರವು ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 25 ರೂ.ಗಳಷ್ಟು ಏರಿತ್ತು. ಗೃಹ ಬಳಕೆಯ14.2 ಕೆಜಿ ಸಿಲಿಂಡರ್ ಗಳ ಮೇಲೆ ದರ ಏರಿಕೆ ಮಾಡಿರುವುದರಿಂದ ದೆಹಲಿಯಲ್ಲಿ ಸಿಲಿಂಡರ್ ಬೆಲೆಯಲ್ಲಿ 884.50 ರೂ.ಗೆ ಏರಿಕೆಯಾಗಿತ್ತು. ಪ್ರಸ್ತುತ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ಮುಂಬೈನಲ್ಲಿ 884.50 ಮತ್ತು ಚೆನ್ನೈನಲ್ಲಿ 900.50 ರೂ.ಇದೆ.

ಡಿಬಿಟಿಎಲ್ ( DBTL ) ಯೋಜನೆಯ ಅನ್ವಯ ಸಬ್ಸಿಡಿ ಹಣವನ್ನು ನೇರವಾಗಿ ಗ್ರಾಹಕರ ಖಾತೆಗಳಿಗೆ ಸರಕಾರ ಪಾವತಿಯನ್ನು ಮಾಡುತ್ತದೆ. ಈ ಮರುಪಾವತಿ ನೇರವಾಗಿ ಬ್ಯಾಂಕ್ ಖಾತೆಗೆ ಹಾಕುವುದರಿಂದ ಗ್ರಾಹಕರಿಗೆ ಅನುಕೂಲವಾಗಿತ್ತು. ಶೀಘ್ರದಲ್ಲಿಯೇ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

Leave A Reply

Your email address will not be published.