LIC Scheme : ತಿಂಗಳ 2000 ಉಳಿತಾಯದಿಂದ , 48 ಲಕ್ಷ ರೂ.ಗಳ ರಿಟರ್ನ್ಸ್ ಪಡೆಯಿರಿ!!!

ದುಡಿದ ಹಣವನ್ನು ನಿಶ್ಚಿತ ಠೇವಣಿ ಮೂಲಕ ಉಳಿತಾಯ ಮಾಡಿ ಭವಿಷ್ಯದಲ್ಲಿ ಹಣಕಾಸಿನ ತೊಡಕು ಉಂಟಾದಾಗ ನೆರವಾಗುತ್ತದೆ. ಕ್ರಮಬದ್ಧ ಉಳಿತಾಯವು ಘಟಕ-ಸಂಯೋಜಿತ, ವೈಯಕ್ತಿಕ ಪಿಂಚಣಿ ಯೋಜನೆಯು ವೃದ್ಯಾಪ್ಯದಲ್ಲಿ ದೊಡ್ಡ ಮಟ್ಟದಲ್ಲಿ ನೆರವಾಗುತ್ತದೆ. ಭಾರತದ ವಿಮಾ ಕ್ಷೇತ್ರದಲ್ಲಿ ಜೀವನ ವಿಮಾ ನಿಗಮವು ಬಹುಮುಖ್ಯ ಹಣಕಾಸು ಸಂಸ್ಥೆಯಾಗಿ ಹೊರಹೊಮ್ಮಿದೆ. ದೇಶವ್ಯಾಪಿ ಇದು ತನ್ನ ವಿಸ್ತಾರವನ್ನು ಹೊಂದಿದ್ದು, ಪ್ರತಿಯೊಂದು ಮನೆಮನೆಯಲ್ಲೂ ಪಾಲಿಸಿದಾರರಿದ್ದಾರೆಂದು ಹೇಳಬಹುದು. ಹೀಗಾಗಿ ಇದು ಹಣಕಾಸಿನ ಹೂಡಿಕೆಯಲ್ಲಿ ಜನರ ಜೀವನದ ಅವಿಭಾಜ್ಯ ಅಂಗವಾಗಿದೆ.

ಎಲ್‌ಐಸಿ (LIC) ತನ್ನ ಗ್ರಾಹಕರಿಗೆ ವಿಭಿನ್ನ ವಿಮಾ ಯೋಜನೆ (Insurance) ಗಳನ್ನು ತರುತ್ತದೆ. ಕೆಲವು ಯೋಜನೆಗಳು ಸೀಮಿತ ಅವಧಿಗೆ ಮೀಸಲಾಗಿದ್ದು, ಇನ್ನೂ ಕೆಲವು ಸ್ಕೀಮ್‌ಗಳು ದೀರ್ಘಾವಧಿಯವರೆಗೆ ನಡೆಸಲ್ಪಡುತ್ತವೆ.ಕೈಯಲ್ಲಿ ಹಣವನ್ನು ಇಟ್ಟುಕೊಂಡರೆ ನೀರಿನಂತೆ ಪೋಲಾಗಿ ಖರ್ಚಾಗುವ ಬದಲು, ಬ್ಯಾಂಕ್ ಇಲ್ಲವೇ ಇನ್ನುಳಿದ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದು ಉತ್ತಮ.ಭಾರತದಲ್ಲಿ ಎಲ್ಐಸಿ ವಿಮೆ ವ್ಯಕ್ತಿಯ ನಿಧನದ ನಂತರ ಅಥವಾ ಜೀವಿತಾವಧಿಯಲ್ಲಿ ಕುಟುಂಬದ ಸದಸ್ಯರಿಗೆ ಅಥವಾ ನಾಮಿನಿಗೆ ಸುರಕ್ಷತೆ, ಭದ್ರತೆ, ನಷ್ಟಭರ್ತಿ, ಪರಿಹಾರ ಒದಗಿಸುತ್ತದೆ. ಎಲ್ಐಸಿ ಏಜೆಂಟರ ಮೂಲಕ ಗ್ರಾಹಕರು ವಿಮೆಗಳ ಬಗ್ಗೆ ಮಾಹಿತಿ ನೀಡಿ ವಿಮೆಗಳ ಪ್ರಕಾರ, ಪ್ರಯೋಜನ ವಿಮಾ ಮೊತ್ತ, ಅವಧಿ, ಪರಿಹಾರ, ರಿಸ್ಕ್ ಕವರೇಜ್ ಇತ್ಯಾದಿ ಅನೇಕ ವಿವರಗಳನ್ನು ಪಡೆಯಬಹುದು. ಭಾರತದ ಜೀವ ವಿಮೆ (LIC)ನೀಡುವ ಯೋಜನೆಯಲ್ಲಿ ಹೂಡಿಕೆ ಮಾಡಿ, ದೊಡ್ಡ ಮೊತ್ತವನ್ನು ಅಗತ್ಯದ ಅನುಸಾರ ಪಡೆದುಕೊಳ್ಳಬಹುದು. ತಿಂಗಳಿಗೆ ಕನಿಷ್ಟ ರೂ.2,000 ಉಳಿತಾಯ ಮಾಡಿದರೂ ಕೂಡ ಎಲ್‌ಐಸಿ ಉಳಿತಾಯದ ಯೋಜನೆಯ ಮೂಲಕ ಉಳಿತಾಯದ ಜೊತೆಗೆ ಆರ್ಥಿಕ ಭದ್ರತೆ ನೀಡುವ ಈ ಯೋಜನೆಯೇ ಎಂಡೋಮೆಂಟ್ ಪಾಲಿಸಿ (LIC Endowment Policy).

ಈ ಪಾಲಿಸಿಯು ವಿಮೆ ಮತ್ತು ಹೂಡಿಕೆ ಎರಡನ್ನೂ ಹೊಂದಿದೆ. ಇದನ್ನು ತೆಗೆದುಕೊಳ್ಳುವ ಪಾಲಿಸಿದಾರರಿಗೆ ಒಂದು ನಿರ್ದಿಷ್ಟ ಅವಧಿಗೆ ಅಪಾಯದ ವ್ಯಾಪ್ತಿ ಸಿಗುತ್ತದೆ ಮತ್ತು ಈ ಅವಧಿ ಮುಗಿದ ನಂತರ, ಬೋನಸ್ ಜೊತೆಗೆ ನಿರ್ದಿಷ್ಟ ಮೊತ್ತವನ್ನು ಅವರಿಗೆ ಹಿಂತಿರುಗಿಸಲಾಗುತ್ತದೆ. ಅಂತಹ ಅನೇಕ ಪಾಲಿಸಿಗಳು ಅನಾರೋಗ್ಯದ ಸಮಯದಲ್ಲಿ ಸಹ ಪಾವತಿಸುತ್ತವೆ. ಮತ್ತೊಂದೆಡೆ, ಪಾಲಿಸಿ ಹೊಂದಿರುವವರು ಸತ್ತರೆ, ಪಾಲಿಸಿ ಮೊತ್ತದ ಮುಖಬೆಲೆಯನ್ನು ನಾಮಿನಿಗೆ ಪಾವತಿಸಲಾಗುತ್ತದೆ.

8 ವರ್ಷದಿಂದ 55 ವರ್ಷದೊಳಗಿನ ಯಾರಾದರೂ ಎಲ್‌ಐಸಿ ಹೊಸ ದತ್ತಿ ಯೋಜನೆಗೆ ಸೇರಬಹುದಾಗಿದೆ. ಕನಿಷ್ಠ 12 ವರ್ಷಗಳಿಂದ 35 ವರ್ಷಗಳ ಅವಧಿಯನ್ನು ತೆಗೆದುಕೊಳ್ಳಬಹುದು. ಕನಿಷ್ಠ ವಿಮಾ ಮೊತ್ತ ರೂ.1,00,000. ರೈಡರ್ ಆಯ್ಕೆಗಳಿದ್ದು, ಎಲ್‌ಐಸಿ ಅಪಘಾತ ಮರಣ ಮತ್ತು ಅಂಗವೈಕಲ್ಯ ಪ್ರಯೋಜನ ರೈಡರ್, ಎಲ್‌ಐಸಿ ಅಪಘಾತ ಪ್ರಯೋಜನ ರೈಡರ್, ಎಲ್‌ಐಸಿ ಹೊಸ ಟರ್ಮ್ ಅಶ್ಯೂರೆನ್ಸ್ ರೈಡರ್, ಎಲ್‌ಐಸಿ ನ್ಯೂ ಕ್ರಿಟಿಕಲ್ ಇಲ್ನೆಸ್ ಬೆನಿಫಿಟ್ ರೈಡರ್, ಎಲ್‌ಐಸಿ ಪ್ರೀಮಿಯಂ ವೇವರ್ ಬೆನಿಫಿಟ್ ರೈಡರ್ ಆಯ್ಕೆ ಮಾಡಬಹುದು. ಒಟ್ಟು ಮೊತ್ತದ ಬದಲಿಗೆ ಡೆತ್ ಬೆನಿಫಿಟ್ ಅನ್ನು ಕಂತುಗಳಲ್ಲಿ ತೆಗೆದುಕೊಳ್ಳಬಹುದು. ತಿಂಗಳಿಗೆ ಕನಿಷ್ಠ ರೂ.5,000, ಮೂರು ತಿಂಗಳಿಗೆ ರೂ.15,000, ಆರು ತಿಂಗಳಿಗೆ ರೂ.25,000 ಮತ್ತು ವರ್ಷಕ್ಕೆ ರೂ.50,000 ತೆಗೆದುಕೊಳ್ಳಬಹುದು.

ಈ ಯೋಜನೆಯ ಪ್ರಯೋಜನಗಳು: ಉದಾಹರಣೆಗೆ, 30 ವರ್ಷ ವಯಸ್ಸಿನ ವ್ಯಕ್ತಿಯು 35 ವರ್ಷಗಳ ಪಾಲಿಸಿ ಅವಧಿಯೊಂದಿಗೆ ರೂ.1,00,000 ಮೊತ್ತದ ವಿಮಾ ಮೊತ್ತದೊಂದಿಗೆ ಪಾಲಿಸಿಯನ್ನು ತೆಗೆದುಕೊಂಡರೆ, ವಾರ್ಷಿಕ ಪ್ರೀಮಿಯಂ ರೂ.2,881 + ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ. ಮೆಚ್ಯೂರಿಟಿ ಪ್ರಯೋಜನಗಳು ಮೆಚ್ಯೂರಿಟಿಯಲ್ಲಿ ರೂ.2,49,000 ವರೆಗೆ ಬರುತ್ತವೆ.18 ವರ್ಷ ವಯಸ್ಸಿನ ವ್ಯಕ್ತಿಯು ರೂ.10 ಲಕ್ಷದ ವಿಮಾ ಮೊತ್ತ ಮತ್ತು 35 ವರ್ಷಗಳ ಅವಧಿಯೊಂದಿಗೆ ಈ ಪಾಲಿಸಿಯನ್ನು ತೆಗೆದುಕೊಂಡರೆ, ವಾರ್ಷಿಕ ಪ್ರೀಮಿಯಂ ರೂ.24,391 ಆಗಿರಬೇಕು. ಅಂದರೆ ರೂ.2,079 ಮಾಸಿಕ ಪ್ರೀಮಿಯಂ ಕಟ್ಟಬೇಕು. ಮೆಚ್ಯೂರಿಟಿಯ ಸಮಯದಲ್ಲಿ ರೂ.48 ಲಕ್ಷಕ್ಕಿಂತ ಹೆಚ್ಚಿನ ಆದಾಯ ಗಳಿಸಬಹುದು.

ಎಲ್‌ಐಸಿ ಹಲವು ಯೋಜನೆಗಳ ಮುಖೇನ ಜನರಿಗೆ ನೆರವಾಗುತ್ತಿರುವ ವಿಚಾರ ಎಲ್ಲರಿಗೂ ತಿಳಿದಿರುವಂತದ್ದೇ!! ಎಲ್ಐಸಿ ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ಅವರ ಅನುಕೂಲದ ಜೊತೆಗೆ ಅವಶ್ಯಕತೆಯ ಅನುಸಾರ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಬೇಕಾದ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.ಎಲ್‌ಐಸಿಯ ಈ ಯೋಜನೆಯಲ್ಲಿ 8 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ದಿನಕ್ಕೆ 29 ರೂಪಾಯಿ ಠೇವಣಿ ಮಾಡಿದರೆ, ಮೆಚ್ಯೂರಿಟಿಯಲ್ಲಿ 4 ಲಕ್ಷ ರೂ.ಗಳನ್ನು ಪಡೆಯಬಹುದು. 20 ವರ್ಷಗಳವರೆಗೆ ತಿಂಗಳಿಗೆ 899 ರೂ. (ದಿನಕ್ಕೆ 29 ರೂ.) ಠೇವಣಿ ಇಟ್ಟರೆ, ಮೊದಲ ವರ್ಷದಲ್ಲಿ ಕೇವಲ 10,959 ರೂ. ಗಳಾಗಿ,ಅದೇ 20 ವರ್ಷ ಠೇವಣಿ ಇಟ್ಟರೆ 20 ವರ್ಷಗಳಲ್ಲಿ ಒಟ್ಟು 2 ಲಕ್ಷ 14 ಸಾವಿರ ರೂ. ಇದರಲ್ಲಿ ಪಾಲಿಸಿಯ ಮುಕ್ತಾಯದ ಮೇಲೆ 3 ಲಕ್ಷ 97 ಸಾವಿರ ರೂಪಾಯಿಗಳನ್ನು ಪಡೆಯಬಹುದು.

ಹೂಡಿಕೆ ಮಾಡುವಾಗ ಅಧಿಕ ಲಾಭ ಪಡೆಯುವ ಉದ್ದೇಶದ ಜೊತೆಗೆ ಭದ್ರತೆಯು ಅವಶ್ಯಕವಾಗಿದೆ. ಹಾಗಾಗಿ, ಎಲ್ ಐ ಸಿಯಲ್ಲಿ ಹೂಡಿಕೆ ಮಾಡುವಾಗ ಏಜೆಂಟರ ಮೂಲಕ ಮಾಹಿತಿ ಪಡೆದು ಅಗತ್ಯತೆಯ ಜೊತೆಗೆ ಪಾವತಿಯ ಬಗ್ಗೆ ಮಾಹಿತಿ ಪಡೆದು ಠೇವಣಿ ಮಾಡುವುದು ಉತ್ತಮ.

Leave A Reply

Your email address will not be published.