ಗೆಜ್ಜೆಗಿರಿಯಲ್ಲಿ ನವರಾತ್ರಿ ಮಹೋತ್ಸವ,ಶಾಸಕರಾದ ಸಂಜೀವ ಮಠಂದೂರು ಚಾಲನೆ!!

ಅಕ್ಟೊಬರ್ 26 ಇಂದು ಬೆಳ್ಳಿಗೆ 7:30ಕ್ಕೆ ಗೆಜ್ಜೆಗಿರಿಯಲ್ಲಿ ನಡೆಯುವ ದಸರಾ ಉತ್ಸವ ಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ಚಾಲನೆ ನೀಡುತ್ತಾರೆ, ಹಾಗೂ ತಮ್ಮ ಅನುದಾನದಿಂದ ಕೋಟಿ ಚೆನ್ನಯ ಮೂಲಸ್ಥಾನ ಗರಡಿಗೆ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಲಿದ್ದಾರೆ.

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲ ಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಮಹೋತ್ಸವ ಅಕ್ಟೋಬರ್ 26 ಬೆಳಿಗ್ಗೆ ಗಣಪತಿ ಹವನ ಹಾಗೂ ತೆನೆ ಕಟ್ಟುವ ಮೂಲಕ ಸಂಭ್ರಮದಿಂದ ಪ್ರಾರಂಭಗೊಂಡು,
ನವರಾತ್ರಿಗೆ ಮಹಾ ಮಾತೆ ದೇಯಿ ಬೈದೆತಿಗೆ ವಿಶೇಷ ಅಲಂಕಾರ ಪೂಜೆ ನಡೆಯಲಿದೆ.

ಮಧ್ಯಾಹ್ನ 12.30 ಕ್ಕೆ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ಜರಗಲಿವೆ, ಭಕ್ತರಿಗೆ ನವರಾತ್ರಿ ವಿಶೇಷ ಸೇವೆಗಳಾಗಿ ಮಹಾ ಮಾತೆ ದೇಯಿ ಬೈದೆತಿಗೆ ಹೂವಿನ ಅಲಂಕಾರ ಮತ್ತು ಅನ್ನದಾನ ಸೇವೆ ಹಾಗೂ ನವರಾತ್ರಿ ಪೂಜಾ ಸೇವೆ ಮಾಡುವ ಅವಕಾಶ ಇದೆ.

ವಿಜಯ ದಶಮಿಯ ಪರ್ವ ದಿನವಾಗಿದ್ದು ಅಂದು ಸರಸ್ವತಿ ಪೂಜೆ ಹಾಗೂ ಪೂರ್ವಾಹ್ನ 8 ಘಂಟೆಯಿಂದ ಮಧ್ಯಾಹ್ನ ದವರೆಗೆ ಪುಟಾಣಿ ಗಳಿಗೆ ಅಕ್ಷರಾಭ್ಯಾಸ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರಾದ ಪೀತಾಂಬರ ಹೆರಾಜೆ ತಿಳಿಸಿದ್ದಾರೆ.

ನವರಾತ್ರಿ ದಿನಗಳಲ್ಲಿ ವಿವಿಧ ಭಜನಾ ತಂಡಗಳಿಂದ ಶ್ರೀ ಕ್ಷೇತ್ರದಲ್ಲಿ ನಿರಂತರ ಭಜನಾ ಸಂಕೀರ್ತನೆ ನಡೆಯಲಿರುವುದು.

Leave A Reply

Your email address will not be published.