Bigg Boss: ಅ.1 ರಿಂದ ‘ಬಿಗ್ ಬಾಸ್’ ರಿಯಾಲಿಟಿ ಶೋ ನಲ್ಲಿ ಮಹತ್ತರ ಬದಲಾವಣೆ | ಹೊಸ ಸುದ್ದಿ !!!

Bigg Boss 16 : ಹೊಸ ಹೊಸ ಪ್ರಯೋಗಗಳನ್ನು ಬಿಗ್ ಬಾಸ್ ಮನೆಯಲ್ಲಿ ಮಾಡಲಾಗುತ್ತಿದೆ. ಈ ಬಾರಿ ಇನ್ನಷ್ಟು ಹೊಸತನ ಪರಿಚಯ ಮಾಡಲಾಗುತ್ತಿದೆ. ಹಾಗಾಗಿ ವೀಕ್ಷಕರ ಕೌತುಕ ಹೆಚ್ಚಿದೆ.

ಹಲವಾರು ಪ್ರೇಕ್ಷಕರಿಗೆ ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ ಮೇಲೆ ಬಹಳ ಆಸಕ್ತಿ ಹೊಂದಿದ್ದಾರೆ.

ಯಾವುದೇ ಬೇರೆಲ್ಲ ಶೋಗಗಳಿಂತಲೂ ಈ ಶೋ ಸಖತ್ ಭಿನ್ನವಾಗಿರುತ್ತದೆ. ಹಿಂದಿ, ಕನ್ನಡ, ತಮಿಳು ಮುಂತಾದ ಭಾಷೆಗಳಲ್ಲಿ ಬಿಗ್ ಬಾಸ್‌ಶೋ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್ (Salman Khan), ಕನ್ನಡದಲ್ಲಿ ಕಿಚ್ಚ ಸುದೀಪ್, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ, ತಮಿಳಿನಲ್ಲಿ ಕಮಲ್ ಹಾಸನ್….ಹೀಗೆ ಸ್ಟಾರ್ ಹೀರೋಗಳು ಈ ಕಾರ್ಯಕ್ರಮದ ನಿರೂಪಣೆ ಮಾಡುವಲ್ಲಿ ಸಕ್ರಿಯರಾಗಿದ್ದಾರೆ. ಹಾಗೆನೇ ಬಿಗ್ ಬಾಸ್ ನ ಪ್ರತಿ ಸೀಸನ್‌ನಲ್ಲೂ ಒಂದಷ್ಟು ಹೊಸತನವನ್ನು ಪರಿಚಯ ಮಾಡಲಾಗುತ್ತದೆ. ಈ ಬಾರಿ ‘ಹಿಂದಿ ಬಿಗ್ ಬಾಸ್ 16’ (Bigg Boss 16) ತುಂಬ ಡಿಫರೆಂಟ್ ಆಗಿರಲಿದೆ. ಇದರ ಸ್ವರೂಪವೇ ಬದಲಾಗಲಿದೆ ಎಂಬುದಕ್ಕೆ ಹೊಸ ಪ್ರೋಮೋ ಮೂಲಕ ತಿಳಿಸಿದ್ದಾರೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಹಲವು ವರ್ಷಗಳಿಂದ ಸಲ್ಮಾನ್ ಖಾನ್ ಅವರು ಹಿಂದಿ ಬಿಗ್ ಬಾಸ್ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ 16ನೇ ಸೀಸನ್ ಶುರುವಾಗಲಿದೆ. ಕಲರ್ಸ್ ಟಿವಿಯಲ್ಲಿ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಈ ವರ್ಷದ ಕಾರ್ಯಕ್ರಮ ಪೂರ್ತಿ ಭಿನ್ನವಾಗಿರಲಿದೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಈಗ ಬಂದಿರೋ ಹೊಸ ಪ್ರೋಮೋದಲ್ಲಿ ಸಲ್ಮಾನ್ ಖಾನ್ ಅವರು ಮೊಗ್ಯಾಂಬೋ ಅವತಾರ ತಾಳಿದ್ದಾರೆ. ‘ಮೊಗ್ಯಾಂಬೋಗೆ ಇನ್ಮುಂದೆ ಖುಷಿ ಆಗುವುದಿಲ್ಲ. ಯಾಕೆಂದರೆ ಇನ್ಮುಂದೆ ಎಲ್ಲರಿಗೂ ಭಯ ಆಗಲಿದೆ. ಆ ಬಾರಿ ಆಟ ಬದಲಾಗಲಿದೆ. ಈಗ ಸ್ವತಃ ಬಿಗ್ ಬಾಸ್ ಆಟ ಆಡ್ತಾರೆ’ ಎಂದು ಸಲ್ಮಾನ್ ಖಾನ್ ಹೇಳಿರುವ ಪ್ರೋಮೋ ಸಖತ್ ವೈರಲ್ ಆಗಿದೆ. ಅಕ್ಟೋಬರ್ 1ರಂದು ಈ ಶೋ ಪ್ರಸಾರ ಆರಂಭಿಸಲಿದೆ.

ಕಿರುತೆರೆ, ಸಿನಿಮಾ, ಸೋಶಿಯಲ್ ಮೀಡಿಯಾ ಮುಂತಾದ ಕ್ಷೇತ್ರಗಳಿಂದ ವಿವಿಧ ಬಗೆಯ ವ್ಯಕ್ತಿತ್ವ ಇರುವ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಯಾರೆಲ್ಲ ಬಿಗ್ ಬಾಸ್ ಶೋಗೆ ಬರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಸಲ್ಮಾನ್ ಖಾನ್ ಅವರು ಸಿನಿಮಾ ಕೆಲಸಗಳ ನಡುವೆ ಬಿಗ್ ಬಾಸ್ ನಿರೂಪಣೆಗೆ ಸಮಯ ಮೀಸಲಿಡುವ ಸಲ್ಮಾನ್, ಇವರು ಇದ್ದಾರೇ ಎಂಬ ಕಾರಣಕ್ಕೆ ಇವರ ನಿರೂಪಣಾ ಶೈಲಿಗೆ ಅಭಿಮಾನಿಗಳು ಮಾರು ಹೋಗಿದ್ದರಿಂದ ಪ್ರತಿ ಬಾರಿಗೂ ಸಲ್ಮಾನ್ ಬಿಗ್ ಬಾಸ್ ನ ನಿರೂಪಣಾ ಹೊಣೆ ಹೊತ್ತಿದ್ದಾರೆ.

Leave A Reply

Your email address will not be published.