Virat Kohli: RCB…RCB ಎಂದು ಘೋಷಣೆ ಕೂಗಿದ ಅಭಿಮಾನಿಗಳ ವಿರುದ್ಧ ಸಿಟ್ಟಾದ ಕೊಹ್ಲಿ | ಸನ್ನೆ ಮೂಲಕ ಖಡಕ್ ಉತ್ತರ ನೀಡಿದ ವಿರಾಟ್

ಭಾರತ-ಆಸ್ಟ್ರೇಲಿಯಾ ನಡುವಣ ಟಿ20 ಸರಣಿಯು ಮುಕ್ತಾಯದ ಹಂತ ತಲುಪಿದೆ. ಈ ಸರಣಿಯ ಮೊದಲ ಪಂದ್ಯ ಆಸ್ಟ್ರೇಲಿಯಾ ಪಾಲಾದರೆ, ನಾಗ್ಪುರದಲ್ಲಿ ನಡೆದ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಗಳಿಸಿದೆ. ಹೈದರಾಬಾದ್ ಗೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟಿ20 ಪಂದ್ಯವಾಡಲು ಬಂದಿದೆ‌. ಮೂರು ಪಂದ್ಯಗಳ ಈ ಸರಣಿಯು 1-1 ಅಂತರದಿಂದ ಸಮಬಲ ಹೊಂದಿದೆ.

 

ಈ ಸಮಯದಲ್ಲಿ ಮೈದಾನದ ಡ್ರೆಸ್ಸಿಂಗ್ ರೂಮ್​ ಬಾಲ್ಕನಿಯಲ್ಲಿ ಕಾಣಿಸಿಕೊಂಡ ಕೊಹ್ಲಿಯನ್ನು ಕಂಡ ಕೊಹ್ಲಿ ಅಭಿಮಾನಿಗಳು ಆರ್​ಸಿಬಿ ತಂಡದ ಘೋಷವಾಕ್ಯ ಕೂಗಿದ್ದರು. ಆದರೆ ಅಭಿಮಾನಿಗಳು ಆರ್​ಸಿಬಿ ಎನ್ನುತ್ತಿದ್ದಂತೆ ಅತ್ತ ಕೊಹ್ಲಿ ತುಸು ಕೋಪಗೊಂಡ ಪ್ರಸಂಗ ನಡೆಯಿತು.

ಆರ್ ಸಿಬಿ ಘೋಷವಾಕ್ಯ ಮೊಗಳುತ್ತಿದ್ದಂತೆ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಜೆರ್ಸಿ ಮೇಲಿರುವ ಲೋಗೋವನ್ನು ತೋರಿಸಿದರು. ಈ ಮೂಲಕ ನಾನು ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ ಹೊರತು ಐಪಿಎಲ್ ಫ್ರಾಂಚೈಸಿ ಅಲ್ಲ ಎಂದು ಅಭಿಮಾನಿಗಳಿಗೆ ಸನ್ನೆ ಮೂಲಕ ತಿಳಿಸಿದರು.

ಕೊಹ್ಲಿಯ ಸನ್ನೆಯನ್ನು ಕಂಡ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಅಭಿಮಾನಿಗಳು ಕೂಡಲೇ ಆರ್​ಸಿಬಿ ಘೋಷಣೆಗಳನ್ನು ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯ ಪಕ್ಕದಲ್ಲೇ ಇದ್ದ ಮತ್ತೋರ್ವ ಆರ್​ಸಿಬಿ ಆಟಗಾರ ಹರ್ಷಲ್ ಪಟೇಲ್ ನಗುತ್ತಾ ಇರುವುದು ಕಾಣುತ್ತದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿರಾಟ್ ಕೊಹ್ಲಿಯ ನಡೆಗೆ ಹಲವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟಿ20 ಪಂದ್ಯವಾಡಲು ಹೈದರಾಬಾದ್​ಗೆ ಬಂದಿದೆ. ಈ ಮೂರು ಪಂದ್ಯಗಳ ಈ ಸರಣಿಯು 1-1 ಅಂತರದಿಂದ ಸಮಬಲ ಆಗಿದ್ದು, 3ನೇ ಟಿ20 ಪಂದ್ಯವು ಫೈನಲ್ ಫೈಟ್ ಕೊಡುವುದರಲ್ಲಿ ಎರಡು ಮಾತಿಲ್ಲ.

Leave A Reply

Your email address will not be published.