ಬೆಳ್ತಂಗಡಿ : ರಸ್ತೆಯಲ್ಲಿ ವಿಷ ಸೇವಿಸಿ ಬಿದ್ದಿದ್ದ ಅಪರಿಚಿತ ಮಹಿಳೆ | ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಪೊಲೀಸರಿಗೆ ಮಾಹಿತಿ

Share the Article

ಬೆಳ್ತಂಗಡಿ : ಅಪರಿಚಿತ ಮಹಿಳೆಯೋರ್ವರೂ ಧರ್ಮಸ್ಥಳ ಹೈಸ್ಕೂಲ್ ನ ರಸ್ತೆ ಬಳಿ ವಿಷ ಸೇವಿಸಿ ನರಳಾಡುತಿದ್ದ ಘಟನೆ ನಡೆದಿದೆ.

ಸುಮಾರು ಅಂದಾಜು 75 ರಿಂದ 80 ವರ್ಷದ ಮಹಿಳೆ ವಿಷ ಸೇವಿಸಿದ್ದು ನರಳಾಡುತಿದ್ದರು. ಈ ವೇಳೆ, ಶೌರ್ಯಾ ವಿಪತ್ತು ನಿರ್ವಹಣಾ ಧರ್ಮಸ್ಥಳ ಘಟಕದ ಸಂಯೋಜಕರಾದ ಸ್ನೇಕ್ ಪ್ರಕಾಶ್ ಮತ್ತು ರವೀಂದ್ರ ನಾಯ್ಕ ಇವರು ಗಮನಿಸಿದ್ದಾರೆ.

ಬಳಿಕ ತಕ್ಷಣ ಪೊಲೀಸ್ ಸ್ಟೇಷನ್ ಗೆ ವಿಷಯ ತಿಳಿಸಿದ್ದಾರೆ. ನಂತರ 108 ಗೆ ಕರೆ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿ ಕೊಡಲಾಗಿದೆ.

Leave A Reply