ಭಟ್ಕಳ : ಗುಳ್ಮಿ ಕ್ರಾಸ್ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಶಂಕೆಯ ಹಿನ್ನಲೆಯಿಂದ ದಾಳಿ ಮಾಡಿದ ಪೊಲೀಸರ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಆರೋಪಿ ಪೋಲಿಸರ ವಶವಾಗಿದ್ದಾನೆ.
ಬಂಧಿತ ಆರೋಪಿ ಸಯ್ಯದ್ ಮೂಸಾ.
ಹೆಬಳೆ ಪಂಚಾಯತ್ ವ್ಯಾಪ್ತಿ ಯ ತಲ್ಹಾ ಸ್ಟ್ರೀಟ್ ನಿವಾಸಿಯಾದ ಈತ, ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ. ಇದನ್ನು ಪತ್ತೆ ಮಾಡಿದ ಭಟ್ಕಳ ಡಿ.ವೈ.ಎಸ್.ಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ಭಟ್ಕಳ ಗ್ರಾಮೀಣ ಠಾಣೆಯ ಪಿ.ಎಸ್.ಐ ಭರತ್ ಪ್ರಕರಣ ದಾಖಲಿಸಿದ್ದು, ಪಿ.ಎಸ್.ಐ ಭರತ್, ಭಟ್ಕಳ ಗ್ರಾಮೀಣ ಠಾಣೆ ಹವಾಲ್ದಾರ್ ದೀಪಕ್ ನಾಯ್ಕ, ಪ್ರಭಾರ ಕಂದಾಯ ನಿರೀಕ್ಷಕ ಶಂಭು ಉಪಸ್ಥಿತರಿದ್ದರು.
ಆರೋಪಿ ಒಟ್ಟು ಸುಮಾರು 2,500 ರೂಪಾಯಿ ಬೆಲೆಬಾಳುವ 209 ಗ್ರಾಂ ತೂಕದ ಒಣಗಿದ ಗಾಂಜಾವನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾಗ ನಗದು ಹಣ 200 ರೂಪಾಯಿ ಹಾಗೂ ಆರೋಪಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
