ಕೋಪ ನಿಮಗೆ ಹೆಚ್ಚು ಬರ್ತಾ ಇದ್ಯಾ? ಹಾಗಾದ್ರೆ ಜಸ್ಟ್ ಹೀಗೇ ಮಾಡಿ
ಕೋಪ ಎಂಬುದು ಒಂದು ಕ್ಷಣಕ್ಕೆ ಬಂದು ಹೋಗುತ್ತೆ. ಆ ಸಮಯದಲ್ಲಿ ನಾವು ನಮ್ಮ ಮಾತು ಮತ್ತು ನಡವಳಿಕೆಯ ಮೇಲೆ ಆದಷ್ಟು ಹಿಡಿತವನ್ನು ಇಟ್ಟುಕೊಳ್ಳಬೇಕು. ಇಲ್ಲದಿದ್ದಲ್ಲಿ ಜೀವನದಲ್ಲಿ ಏನನ್ನಾದರೂ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಬಹುದು.
ಒಂದು ಸಿಟ್ಟು ಬಂದ್ರೆ ಕೆಲ ಜನ ತಮಗೆ ತಾವೇ ಏನಾದ್ರೂ ಪೆಟ್ಟು, ನೋವು ಮಾಡಿಕೊಳ್ತಾರೆ. ಇನ್ನು ಕೆಲ ಜನ ವಸ್ತುಗಳ ಮೇಲೆ ಸಿಟ್ಟನ್ನು ತೋರಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಸಿಟ್ಟನ್ನು ನಿಯಂತ್ರಣವಾಗಿ ಇಟ್ಟುಕೊಳ್ಳದಿದ್ದರೆ ಏನನ್ನಾದರೂ ಕಳೆದುಕೊಳ್ಳಬೇಕಾಗುತ್ತದೆ. ‘ಒಡೆದ ಕನ್ನಡಿ ಜೋಡಿಸಲಾಗದು’ , ‘ ಮಾತು ನುಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು’ ಎಂಬ ಗಾದೆಗಳ ಮಾತು ಸುಳ್ಳಲ್ಲ. ಸಿಟ್ಟಲ್ಲಿ ಒಮ್ಮೆ ಆಡಿದ ಮಾತು ಎಂದಿಗೂ ಕ್ಷಮೆಯನ್ನು ಕೇಳಿದರು ಸರಿ ಆಗದು.
ಸಿಟ್ಟು ಬಂದಾಗ ಹೇಗೆ ನಿಯಂತ್ರಿಸಬೇಕು?
ಸಿಟ್ಟನ್ನು ಒಮ್ಮೆಗೆ ನಮಗೆ ನಿಯಂತ್ರಿಸಲು ಅಸಾಧ್ಯ ಆದರೆ, ಹಂತ ಹಂತದಲ್ಲಿ ನಿಯಂತ್ರಿಸಬಹುದು. ಧ್ಯಾನವನ್ನು ಮಾಡ್ಬೇಕು. ಇದರಿಂದ ಸಿಟ್ಟು ನಿಯಂತ್ರಣ ಆಗೋದಿಲ್ಲ ಎಂದು ಅದೆಷ್ಟೋ ಜನ ನಂಬಿರುತ್ತಾರೆ. ಆದರೆ ನಿಜಕ್ಕೂ ಇದರಿಂದ ನೂರಕ್ಕೆ ನೂರರಷ್ಟು ಮತ್ತು ಮನಸ್ಸನ್ನು ನಿಯಂತ್ರಣಕ್ಕೆ ತರಬಹುದು ಮತ್ತು ಏಕಾಗ್ರತೆಯೂ ಕೂಡ ಹೆಚ್ಚಿಸುತ್ತದೆ.
ಸಿಟ್ಟು ಬಂದ ಕೂಡಲೇ ಶಾಂತರಾಗಿ ಸ್ವಲ್ಪ ದೂರ ನಡೆಯಿರಿ. ದೇಹದಲ್ಲಿರುವ ಸ್ನಾಯುಗಳಿಗೆ ವ್ಯಾಯಾಮ ನೀಡಿದಾಗ ಮನಸ್ಸು ಮತ್ತು ಸಿಟ್ಟು ಕಂಟ್ರೋಲ್ ಗೆ ಬರುತ್ತದೆ. ನಿರ್ಜೀವ ವಸ್ತುಗಳಿಗೆ ಜೋರಾಗಿ ಹೊಡೆಯಿರಿ. ನಿರ್ಜೀವ ವಸ್ತುಗಳೆಂದರೆ ಕಲ್ಲು, ಬಂಡೆ, ಕಂಬ ಹೀಗೆ ವಸ್ತುಗಳ ಮೇಲೆ ಕೋಲಿನ ತೆಗೆದುಕೊಂಡು ಸಿಟ್ಟು ಹೋಗುವ ತನಕ ಜೋರಾಗಿ ಹೊಡೆಯಿರಿ ಆಗ ಖಂಡಿತವಾಗಿಯೂ ಸಿಟ್ಟು ಹೋಗೇ ಹೋಗುತ್ತದೆ. ಇದೆಲ್ಲವನ್ನು ಒಮ್ಮೆ ನೀವು ಟ್ರೈ ಮಾಡಲೇಬೇಕು.