ರಶ್ಮಿಕಾ ಮಂದಣ್ಣ ಆಸ್ಪತ್ರೆಗೆ ದಾಖಲು

ಕೊಡಗಿನ ಕುವರಿ, ರಶ್ಮಿಕಾ ಮಂದಣ್ಣ ಸದ್ಯ ಹಲವಾರು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟಿ. ಬಾಲಿವುಡ್ ಮತ್ತು ಸೌತ್ ಎರಡೂ ಚಿತ್ರರಂಗದಲ್ಲಿ ರಶ್ಮಿಕಾ ಸಿನಿಮಾಗಳನ್ನು ಮಾಡುತ್ತಿರುವ ಜನಪ್ರಿಯ ನಟಿ. ಸ್ಯಾಂಡಲ್ ವುಡ್ ನಲ್ಲಿ ತನ್ನ ಸಿನಿ ಜರ್ನಿ ಆರಂಭಿಸಿದ ಈ ನಟಿ ಸದ್ಯ ತೆಲುಗು, ತಮಿಳು ಮತ್ತೆ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗು ಸಿನಿಮಾರಂಗದಲ್ಲಿ ರಾತ್ರೋ ರಾತ್ರಿ ಸ್ಟಾರ್ ಆಗಿ ಅನೇಕ ಅಭಿಮಾನಿಗಳನ್ನು ಸಂಪಾದಿಸಿರುವ ರಶ್ಮಿಕಾ ಇದೀಗ ಹಿಂದಿಯಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಮುಂಬೈ, ಹೈದರಾಬಾದ್, ಚೆನ್ನೈ ಅಂತ ಸದಾ ಓಡಾಡುತ್ತಿರುತ್ತಾರೆ.

 

ಆದರೆ ಈಗ ಬಂದಿರೋ ಸುದ್ದಿ ಪ್ರಕಾರ ಕಳೆದ ಕೆಲವು ಕೆಲವು ದಿನಗಳಿಂದ ರಶ್ಮಿಕಾ ಮಂಡಿ ನೋವಿನಿಂದ ಬಳಲುತ್ತಿದ್ದು, ಭಾರತದ ಟಾಪ್ ಆರ್ಥೋಪಿಡಿಕ್ ಭೇಟಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಆರ್ಥೋಪಿಡಿಕ್ ಅವರೇ ಬಹಿರಂಗ ಪಡಿಸಿದ್ದಾರೆ.

ತನ್ನ ಬ್ಯುಸಿ ಶೆಡ್ಯೂಲ್ ಗಳ ಮಧ್ಯೆ, ಸಮಯ ತೆಗೆದುಕೊಂಡು ವೈದ್ಯರನ್ನು ಭೇಟಿಯಾಗಿದ್ದಾರೆ. ಹೈದರಾಬಾದ್ ನಲ್ಲಿರುವ ಪ್ರಸಿದ್ಧ ಆರ್ಥೋಪಿಡಿಕ್ ಡಾ.ಗುರುವ ರೆಡ್ಡಿ ಅವರ ಆಸ್ಪತ್ರೆಯಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕಂಡಿದ್ದಾರೆ. ವೈದ್ಯರ ಪಕ್ಕ ನಿಂತು ಪೋಸ್ ನೀಡಿರುವ ರಶ್ಮಿಕಾ ಫೋಟೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ. ರಶ್ಮಿಕಾ ಅವರನ್ನು ಭೇಟಿಯಾದ ಬಗ್ಗೆ ಸ್ವತಃ ಡಾ.ಗುರುವ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ರಶ್ಮಿಕಾ ಮಂಡಿನೋವಿನಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಆತಂಕ ಪಡುವ ಅವಶ್ಯಕತೆ ಇಲ್ಲ, ಶೀಘ್ರದಲ್ಲೇ ಗುಣಮುಖ ಆಗುತ್ತಾರೆ ಎಂದು ವೈದ್ಯರು ಅಭಿಮಾನಿಗಳಿಗೆ ತಿಳಿಸಿದ್ದಾರೆ.

Leave A Reply

Your email address will not be published.