ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಿಂದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್!
ಕೊರೋನಾ ಅವಧಿಯಲ್ಲಿ ಮೋದಿ ಸರ್ಕಾರ ಬಡವರ ಸಹಾಯಕ್ಕಾಗಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಮೂಲಕ ಬಡವರಿಗೆ ಪ್ರತಿ ತಿಂಗಳು ಉಚಿತ ಪಡಿತರವನ್ನು ನೀಡಲಾಗುತ್ತದೆ. ಇದೀಗ ಸರಕಾರದಿಂದ ನೀಡುತ್ತಿರುವ ಉಚಿತ ಪಡಿತರದ ಪ್ರಯೋಜನವನ್ನು ಪಡೆದುಕೊಂಡವರಿಗೆ ಗುಡ್ ನ್ಯೂಸ್ ಇಲ್ಲಿದೆ.
ಹೌದು. ಇದೀಗ ಈ ಯೋಜನೆಯನ್ನು ಮತ್ತೆ ಮೂರು ಅಥವಾ ಆರು ತಿಂಗಳ ಕಾಲ ವಿಸ್ತರಿಸಲಾಗುತ್ತದೆ ಎಂದು ಹೇಳಲಾಗಿದೆ. ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಈ ಮಾಹಿತಿ ನೀಡಿದ್ದು, ಸೆಪ್ಟೆಂಬರ್ 30ರ ನಂತರ ಈ ಯೋಜನೆಯನ್ನು ಮುಂದಿನ ಮೂರು ಅಥವಾ ಆರು ತಿಂಗಳುಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಫಲಾನುಭವಿಗಳಿಗೆ ಸರಕಾರ ಸೆ.30ರವರೆಗೆ ಉಚಿತ ಪಡಿತರ ಸೌಲಭ್ಯ ಒದಗಿಸಲಿದ್ದು, ಫಲಾನುಭವಿಗಳು ಸೆಪ್ಟೆಂಬರ್ ತಿಂಗಳವರೆಗೆ ಪಡಿತರಕ್ಕಾಗಿ ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ. ಆದರೆ, ಸೆಪ್ಟೆಂಬರ್ ತಿಂಗಳ ನಂತರ, ಫಲಾನುಭವಿಗಳು ಸರ್ಕಾರ ನಿಗದಿಪಡಿಸಿದ ಶುಲ್ಕದ ಅಡಿಯಲ್ಲಿ ಮಾತ್ರ ಪಡಿತರ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಈ ಹಿಂದೆ ತಿಳಿಸಿತ್ತು. ಇದೀಗ ಮತ್ತೆ ಆರು ತಿಂಗಳವರೆಗೆ ವಿಸ್ತರಿಸೋ ನಿರ್ಧಾರ ಮಾಡಿದೆ. ಆದರೆ ಯಾವಾಗ ಈ ಕುರಿತಂತೆ ನಿರ್ಧಾರ ಹೊರಬೀಳಲಿದೆ ಎಂಬುದರ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.