Eye Blinking : ನಿಮಗೂ ಕಣ್ಣಿನ ರೆಪ್ಪೆ ಪದೇ ಪದೇ ಬಡಿದುಕೊಳ್ಳುತ್ತಾ ? ಇದಕ್ಕೆ ಕಾರಣವೇನು? ಇದು ಸೂಚಿಸುವುದಾದರೂ ಏನು?
ಪ್ರತಿಯೊಬ್ಬರಿಗೂ ಅವರದ್ದೇ ಆದ ಆಚರಣೆಗಳು, ನಂಬಿಕೆಗಳು ಇರುವುದು ಸಹಜ. ನಮ್ಮ ಜೀವ ಹಾಗೂ ಜೀವನ ನಿಂತಿರುವುದೇ ಪ್ರಮುಖ ನಂಬಿಕೆಗಳ ಆಧಾರದ ಮೇಲೆ ಎಂದರೆ ತಪ್ಪಾಗಲಾರದು. ಯಾವುದೋ ಒಳ್ಳೆಯ ಕಾರ್ಯಕ್ಕೆ ಹೊರಟಾಗ ಬೆಕ್ಕು ಅಡ್ಡ ಬಂದರೆ, ಅಪಶಕುನವೆಂದು, ಸಾಧು, ಸಂತರ ದರ್ಶನವಾದರೆ ಶುಭವೆಂದು ನಂಬುವ ಪರಿಪಾಠ ಹೆಚ್ಚಿನ ಮಂದಿಗಿದೆ. ಈ ನಡುವೆ ಮುಂಜಾನೆಯ ಸ್ವಪ್ನ ನಿಜವಾಗುತ್ತದೆ ಜೊತೆಗೆ ಸ್ವಪ್ನದಲ್ಲೂ ಕೂಡ ಹುಲಿ, ದೇವರಿಗೆ ಸಂಬಂಧಿಸಿದನ್ನು ಕಂಡರೆ ಶುಭವೆಂದು, ಇನ್ನೂ ಕೆಲ ವಸ್ತುಗಳನ್ನು ಕಂಡರೆ ಅಶುಭ ಫಲ ಕೊಡುತ್ತದೆಂದು ನಂಬಲಾಗುತ್ತದೆ.
ಮಹಿಳೆಯರು ಹಾಗೂ ಪುರುಷರಲ್ಲಿ ಕಣ್ಣುಗಳ ರೆಪ್ಪೆ ಮಿಟುಕುವುದು ಅಥವಾ ಬಡಿದುಕೊಳ್ಳುವುದು ಕೆಲವು ಶುಭ, ಅಶುಭದ ಚಿಹ್ನೆಗಳಾಗಿವೆ ಎಂದು ನಂಬಲಾಗುತ್ತದೆ.
ವೈದ್ಯಕೀಯ ಕ್ಷೇತ್ರದಲ್ಲಿ ಅದೊಂದು ಆರೋಗ್ಯ ದೌರ್ಬಲ್ಯ ಎಂದು ಹೇಳಲಾಗುತ್ತದೆ. ಆದರೆ ಧಾರ್ಮಿಕ ನಂಬಿಕೆ ಮತ್ತು ದೃಷ್ಟಿಕೋನದಿಂದ ಅನಿರೀಕ್ಷಿತವಾಗಿ ಉಂಟಾಗುವುದು ಹಾಗೂ ಅಲ್ಪ ಕಾಲ ಮಾತ್ರ ಉಳಿದುಕೊಳ್ಳುವ ಕಣ್ಣಿನ ಹಾರುವಿಕೆಯು ಭವಿಷ್ಯದಲ್ಲಿ ಸಂಭವಿಸುವ ಶುಭ ಮತ್ತು ಅಶುಭ ಘಟನೆಗಳನ್ನು ಸೂಚಿಸುತ್ತದೆ ಎಂದು ಭಾವಿಸಲಾಗಿದೆ.
ಮಹಿಳೆಯರ ಎಡಗಣ್ಣಿನ ರೆಪ್ಪೆ ಪದೇ ಪದೇ ಬಡೆದುಕೊಂಡರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮಹಿಳೆಯರಿಗೆ ಎಡಗಣ್ಣು ಸೆಳೆತವಾದರೆ ಜೀವನದಲ್ಲಿ ಆರ್ಥಿಕ ಸ್ಥಿತಿ, ಉದ್ಯೋಗ, ಶಿಕ್ಷಣ, ಕಲೆ, ಸಂಬಂಧ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಒಳ್ಳೆಯ ಸುದ್ದಿ ಅಥವಾ ಅನುಕೂಲಕರ ಪರಿಸ್ಥಿತಿಯನ್ನು ಎದುರಿಸುತ್ತಾರೆ ಎನ್ನಲಾಗುವುದು.
ಮತ್ತೊಂದೆಡೆ, ಪುರುಷರಿಗೆ ಎಡಗಣ್ಣು ಬಡಿದುಕೊಂಡರೆ ಅದನ್ನು ಅಶುಭ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದ್ದು, ವಿವಾದದ ಪರಿಸ್ಥಿತಿ ಉದ್ಭವಿಸಬಹುದು. ಅವರು ಕೈಗೊಳ್ಳುವ ಕೆಲಸ ಅಥವಾ ಸಂದರ್ಭಗಳು ಕಠಿಣ ಪರಿಶ್ರಮದಿಂದ ಕೂಡಿರುತ್ತದೆ. ಅಲ್ಲದೆ ಎಲ್ಲಾ ಸಂಗತಿಯಲ್ಲೂ ನೋವು ಹಾಗೂ ಸೋಲು ಎದುರು ನಿಂತಿರುತ್ತವೆ. ಈ ಬದಲಾವಣೆಯು ಭವಿಷ್ಯದಲ್ಲಿ ನಕಾರಾತ್ಮಕ ಸಂಗತಿಯಿಂದ ಕೂಡಿರುವುದನ್ನು ಸ್ಪಷ್ಟಪಡಿಸುವುದು.
ಮಹಿಳೆಯರ ಬಲಗಣ್ಣಿನ ರೆಪ್ಪೆ ಬಡಿದುಕೊಂಡರೆ ಒಳ್ಳೆಯ ಲಕ್ಷಣವಲ್ಲ. ಇದು ಅವರ ಕೆಲಸಗಳಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು. ಕುಟುಂಬದೊಂದಿಗೆ ಸಂಬಂಧಗಳು ಹದಗೆಡಬಹುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ದೊಡ್ಡ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತದೆ.
ಪುರುಷರ ಬಲಗಣ್ಣಿನ ರೆಪ್ಪೆ ಬಡೆದುಕೊಂಡರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕೈಗೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಹಾಗೂ ಉತ್ತಮ ಪ್ರಚಾರ ಪಡೆದುಕೊಳ್ಳುವರು. ಭವಿಷ್ಯದಲ್ಲಿ ಎದುರಾಗುವ ಪ್ರತಿಯೊಂದು ವಿಷಯದಲ್ಲೂ ಒಳ್ಳೆಯ ಹಾಗೂ ಅದೃಷ್ಟದ ಫಲ ದೊರೆಯುವುದು ಎನ್ನುವ ಧಾರ್ಮಿಕ ನಂಬಿಕೆಯನ್ನು ಪಡೆದುಕೊಂಡಿದೆ.
ಪುರುಷರಿಗೆ ಬಲಗಣ್ಣು ಹಾರಿದರೆ ಅದೃಷ್ಟದ ಸಂಗತಿಯಾಗಿದ್ದು, ಬಲ ಗಣ್ಣಿನ ಮೇಲ್ಭಾಗದ ರೆಪ್ಪೆ ಕುಣಿದರೆ ಹೃದಯದಲ್ಲಿ ಬಚ್ಚಿಟ್ಟುಕೊಂಡ ಆಸೆಗಳೆಲ್ಲವೂ ಸುಲಭವಾಗಿ ನೆರವೇರುವುದು ಎಂದು ಸೂಚಿಸುತ್ತದೆ. ಅದೇ ಬಲಗಣ್ಣಿನ ಕೆಳ ಭಾಗದಲ್ಲಿ ಸೆಳೆತ ಅಥವಾ ಕುಣಿತವನ್ನು ಅನುಭವಿಸಿದರೆ ಅದು ಅಶುಭ ಎಂದು ನಂಬಲಾಗುತ್ತದೆ. ಬಲಗಣ್ಣಿನ ಕೆಳ ಭಾಗದಲ್ಲಿನ ರೆಪ್ಪೆ ಸಾಮಾನ್ಯವಾಗಿ ಸ್ಥಿರತೆಯನ್ನು ಹೊಂದಿರುತ್ತದೆ.
ಮಹಿಳೆಯರಿಗೆ ಎಡಗಣ್ಣು ಹಾರಿದರೆ ಶುಭ ಸೂಚಕ. ಆದರೆ ಎಡ ಗಣ್ಣಿನ ರೆಪ್ಪೆಯ ಸಂಪೂರ್ಣ ಮೇಲ್ಭಾಗದಲ್ಲಿ ಹಾರುವಿಕೆ ಉಂಟಾದರೆ ಅದು ಅಶುಭ ಸಂಕೇತ. ಅದು ಯಾರಿಂದಲೋ ದ್ವೇಷವನ್ನು ಅನುಭವಿಸುವುದನ್ನು ಸೂಚಿಸುತ್ತದೆ. ದ್ವೇಷವನ್ನು ಹೆಚ್ಚಿಸುವುದರ ಜೊತೆಗೆ ಸಮಸ್ಯೆಗಳು ಸಹ ದ್ವಿಗುಣವಾಗುತ್ತದೆ ಎನ್ನುವುದನ್ನು ಸೂಚಿಸುವುದು. ಎಡ ಗಣ್ಣಿನ ಕೆಳ ಭಾಗದಲ್ಲಿ ಹಾರುವಿಕೆ ಅಥವಾ ಸೆಳೆತವನ್ನು ಅನುಭವಿಸಿದರೆ ಅವರ ಮೇಲೆ ದೂರು, ಅಪಪ್ರಚಾರ ಉಂಟಾಗಬಹುದು.
ಕಣ್ಣು ಅತ್ಯಂತ ಸೂಕ್ಷ್ಮ ಅಂಗಗಳಲ್ಲಿ ಒಂದಾಗಿದ್ದು, ಪರಿಸರದಲ್ಲಿ ಉಂಟಾಗುವ ವ್ಯತ್ಯಾಸ ಅಥವಾ ಬದಲಾವಣೆಯು ಕಣ್ಣುಗಳ ಮೇಲೆ ಗಂಭೀರವಾದ ಪ್ರಭಾವವನ್ನು ಬೀರುತ್ತವೆ. ನಮ್ಮ ದೇಹ ಹಾಗೂ ಆರೋಗ್ಯದಲ್ಲಿ ಉಂಟಾಗುವ ತೊಂದರೆ ಅಥವಾ ನ್ಯೂನ್ಯತೆಗಳಿಂದ ಅಂಗಗಳಲ್ಲಿ ಅನಾರೋಗ್ಯ ಪೀಡಿತರಾಗುವ ಸಾಧ್ಯತೆ ಹೆಚ್ಚಿದೆ. ಕಣ್ಣಿಗೆ ಸಂಬಂಧಿಸಿದ ಕೆಲವು ಆರೋಗ್ಯ ಸಮಸ್ಯೆಗಳಾದ ಕಣ್ಣುಗಳ ಸೆಳೆತ ಅಥವಾ ಕಣ್ಣಿನ ರೆಪ್ಪೆಯು ಬಡಿದುಕೊಳ್ಳುವುದು ಸ್ನಾಯುವಿನ ಅಸ್ವಸ್ಥತೆಗೆ ಕಾರಣವಾಗಿದೆ. ಒತ್ತಡ, ನಿದ್ರೆಯ ಕೊರತೆ, ಆಯಾಸ ಇತ್ಯಾದಿಗಳು ಕಣ್ಣು ಸೆಳೆತಕ್ಕೆ ಕಾರಣ ಎನ್ನಲಾಗುತ್ತದೆ.
Wow, amazing weblog layout! How lengthy have you ever been running a blog for?
you made blogging glance easy. The overall look of your web site is fantastic, as smartly as the content material!
You can see similar here najlepszy sklep