WhatsApp ನಲ್ಲಿ ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದ್ದರೆ…ಅವರಿಗೆ ಕರೆ ಹೋಗುವುದಾದರೂ ಏಕೆ?
ಮೆಟಾ-ಮಾಲೀಕತ್ವದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp ಬಳಕೆದಾರರ ಗೌಪ್ಯತೆಯನ್ನು ಕಾಪಾಡುವ ಶತ ಪ್ರಯತ್ನ ಮಾಡುತ್ತಲೇ ಇದೆ. ಹಲವಾರು ವೈಶಿಷ್ಟ್ಯಗಳನ್ನು ನೀಡುವ WhatsApp ಜನರ ಸುರಕ್ಷತೆಯ ಬಗ್ಗೆನೂ ಅಷ್ಟೇ ಕಾಳಜಿ ವಹಿಸಿ ಹೊಸ ವೈಶಿಷ್ಟ್ಯಗಳನ್ನು ಗಳನ್ನು ನೀಡುತ್ತದೆ. WhatsApp ನಲ್ಲಿ ಅಪ್ಲಿಕೇಷನ್ನಲ್ಲಿ ಬ್ಲಾಕ್ (Block) ಮಾಡುವ ಆಯ್ಕೆಯೂ ಕೂಡ ಒಂದು. ಅನಗತ್ಯ ಮೆಸೇಜುಗಳನ್ನು ಕಳುಹಿಸುವ, ಸಂದೇಶಗಳು ಬರೋದು ಬೇಡದಿದ್ದಲ್ಲಿ, ತಡೆಹಿಡಿಯುವ ಆಯ್ಕೆ ಇದಾಗಿದೆ. WhatsApp ನಲ್ಲಿ ಯಾವುದೇ ವ್ಯಕ್ತಿಯ ನಂಬರ್ ಬ್ಲಾಕ್ ಮಾಡಿದರೆ ಅವರ ಸಂದೇಶಗಳು, ಕರೆಗಳು ಸೇರಿದಂತೆ ಯಾವುದೇ ಅಪ್ಡೇಟ್ಗಳನ್ನು ಪಡೆಯಲು ಸಾಧ್ಯವಿಲ್ಲ.
ಯಾರಾದರೂ WhatsApp ನಲ್ಲಿ ನಮ್ಮನ್ನು ಬ್ಲಾಕ್ ಮಾಡಿದ್ದರೆ ತಿಳಿಯುವುದು ಹೇಗೆ ಎಂಬ ಪ್ರಶ್ನೆಯೊಂದು ಎಲ್ಲರ ಮನಸ್ಸಲ್ಲಿ ಮೂಡುವುದು ಸಹಜ. ಗೌಪ್ಯತೆಯ ಕಾರಣದಿಂದ WhatsApp ಬ್ಲಾಕ್ ಮಾಡಿರುವ ಬಗ್ಗೆ ಯಾವುದೇ ವ್ಯಕ್ತಿಗೆ ಸೂಚನೆ ನೀಡುವ ಕ್ರಮ ಇಲ್ಲ. ಹೀಗಾಗಿ ಯಾರಾದರೂ ನಮ್ಮನ್ನು ಬ್ಲಾಕ್ ಮಾಡಿದ್ದಾರಾ ಎಂದು ತಿಳಿಯುವುದು ಅಷ್ಟು ಸುಲಭವಿಲ್ಲ. ಹೀಗಿದ್ದರೂ ಕೆಲವು ಮಾರ್ಗಗಳ ಮೂಲಕ ನಿಮ್ಮ ನಂಬರ್ ಅನ್ನು ಯಾರಾದರೂ ಬ್ಲಾಕ್ ಮಾಡಿದ್ದಾರಾ ಎಂಬುದನ್ನು ಸುಲಭವಾಗಿ ತಿಳಿಯಬಹುದು.
ನೀವು ಯಾರಿಗಾದರೂ ಅಂದರೆ ಬ್ಲಾಕ್ ಮಾಡಿದವರಿಗೆ ಸಂದೇಶಗಳನ್ನು ಕಳುಹಿಸಲು ಸಾಧ್ಯವಿಲ್ಲ. ಸಂದೇಶಗಳನ್ನು ಕಳುಹಿಸಿದರೂ ಆ ವ್ಯಕ್ತಿಗೆ ನಿಮ್ಮ ಸಂದೇಶ ಡೆಲಿವರಿ ಆಗಿದೆ ಎಂಬ ಬಗ್ಗೆ ಎರಡು ಮಾರ್ಕ್ ಬೀಳುವುದಿಲ್ಲ. ನೀವು ಅವರ ಪ್ರೊಫೈಲ್ ಫೋಟೋವನ್ನು ನೋಡಲು ಸಾಧ್ಯವಿಲ್ಲದಿರುವುದು ಕೂಡ ಅವರು ನಿಮ್ಮನ್ನು ಬ್ಲಾಕ್ ಮಾಡಿರಬಹುದು ಎಂದು ಹೇಳಬಹುದು. ಈ ಎರಡು ಸೂಚನೆಗಳಿಂದಲೇ ನಿಮಗೆ ಅವರು ಬ್ಲಾಕ್ ಮಾಡಿದ್ದಾರಾ ಅಥವಾ ಇಲ್ಲವಾ ಎಂಬ ಬಗ್ಗೆ ಸ್ಪಷ್ಟತೆ ಸಿಗುತ್ತದೆ.
ಇನ್ನೂ ಮುಂದುವರಿದರೆ, WhatsApp ಚಾಟ್ ವಿಂಡೋದಲ್ಲಿ ನಿಮ್ಮನ್ನು ಬ್ಲಾಕ್ ಮಾಡಿರಬಹುದಾದ ಲಾಸ್ಟ್ ಸೀನ್ ಅಥವಾ ಆನ್ಲೈನ್ ಸ್ಟೇಟಸ್ ನೋಡಿ. ಇಲ್ಲಿ ಯಾವುದೇ ಅಪ್ಡೇಟ್ ಇಲ್ಲ ಎಂದಾದಲ್ಲಿ ಅವರು ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂದು ತಿಳಿಯಬಹುದು. ಆದರೆ, ಅವರು ತಮ್ಮ ಲಾಸ್ಟ್ ಸೀನ್ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದ್ದರೆ ಇದು ಲಭ್ಯವಿಲ್ಲ. ಅಷ್ಟು ಮಾತ್ರವಲ್ಲದೇ ಇನ್ನೊಂದು ವಿಧಾನದಿಂದ ಈ ರೀತಿ ಕಂಡು ಹಿಡಿಯಬಹುದು. ನೀವು WhatsApp ನಲ್ಲೊಂದು ಗ್ರೂಪ್ ಕ್ರಿಯೇಟ್ ಮಾಡಿ. ಆ ಗ್ರೂಪ್ ಗೆ ಹೊಸ ಸದಸ್ಯರನ್ನು ಸೇರಿಸುವ ಅವಕಾಶ ಇರುತ್ತದೆ. ಇಲ್ಲಿ ನಿಮ್ಮನ್ನು ಬ್ಲಾಕ್ ಮಾಡದವರ ಕಾಂಟ್ಯಾಕ್ಟ್ ಲಿಸ್ಟ್ ಮಾತ್ರ ನಿಮಗೆ ದೊರೆಯುತ್ತದೆ.
ಇನ್ನೂ ಒಂದು ಸಂಶಯವೇನೆಂದರೆ, ನಮ್ಮನ್ನು ಬ್ಲಾಕ್ ಮಾಡಿರುವ ನಂಬರ್ಗೆ ವಾಟ್ಸಾಪ್ ಕರೆ ಮಾಡಿದರೆ ರಿಂಗ್ ಆಗುತ್ತದೆ ಹೇಗೆ ಎಂದು. ಹಾಗಾಗಿ, ಇದು ನಿಮಗೆ ತಿಳಿದಿರಲಿ. ನಿಮ್ಮನ್ನು ಬ್ಲಾಕ್ ಮಾಡಿದವರಿಗೆ ನೀವು ವಾಟ್ಸಾಪ್ ಕಾಲ್ ಮಾಡಲು ಹೋದಾಗ, ಕಾಲ್ ಕನೆಕ್ಟ್ ಆಗುತ್ತಿದೆ ಎಂದು ತೋರಿಸುತ್ತದೆ. ಅಂದರೆ, ಕರೆ ಮಾಡಿದಾಗ ರಿಂಗ್ ಆಗುವುದನ್ನು ನಿಮಗೆ ಕಾಣುತ್ತದೆ. ಆದರೆ, ನಿಮ್ಮನ್ನು ಬ್ಲಾಕ್ ಮಾಡಿದವರಿಗೆ ನೀವು ವಾಟ್ಸಾಪ್ ಕಾಲ್ ಮಾಡಲು ಪ್ರಯತ್ನಿಸಿದಾಗ ಕಾಲ್ ಕನೆಕ್ಟ್ ಆಗಿರುವುದಿಲ್ಲ ಅಥವಾ ಈ ಬಗ್ಗೆ ಯಾವುದೇ ಅಪ್ಡೇಟ್ ಆ ವ್ಯಕ್ತಿಗೆ ತಲುಪಿರುವುದಿಲ್ಲ.