Decoction of OMA seed : ಮಕ್ಕಳಿಗೆ ಹೆಚ್ಚಾಗಿ ಕಾಡುವ ಜಂತುಹುಳು, ಕ್ರಿಮಿಹುಳು ನಿವಾರಣೆಗೆ ಸುಲಭ ಮನೆ ಮದ್ದು ಇಲ್ಲಿದೆ!!!

ಮಕ್ಕಳ ಆರೋಗ್ಯ ನೋಡಿಕೊಳ್ಳುವುದು ಸವಾಲಿನ ವಿಷಯವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಜಂತು ಹುಳುಗಳ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಯಾವುದೇ ವಯಸ್ಸಿನ ಜನರಲ್ಲಿ ಸಂಭವಿಸಬಹುದಾದ ಸಾಮಾನ್ಯ ವಿಷಯವಾಗಿದ್ದು, ಚಿಕ್ಕ ಮಕ್ಕಳಿಗೆ ಮತ್ತು ಬೆಳೆಯುತ್ತಿರುವ ವಯಸ್ಸಿನ ಮಕ್ಕಳಿಗೆ ಹೆಚ್ಚು ಹಾನಿ ಉಂಟುಮಾಡುತ್ತದೆ.

 

ಇದರಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗಿ ಕ್ರಮೇಣ ದೇಹದ ಎಲ್ಲಾ ಪೌಷ್ಟಿಕಾಂಶ ಕಡಿಮೆಯಾಗುತ್ತದೆ. ಹೊಟ್ಟೆಯಲ್ಲಿ ಹುಳುಗಳಿಗೆ ಮುಖ್ಯ ಕಾರಣ ನೈರ್ಮಲ್ಯದ ಕೊರತೆ. ಹೊಟ್ಟೆ ಹುಳದಿಂದ ವಾಕರಿಕೆ ಶುರುವಾಗಿ ವಾಂತಿಯು ಆಗುವ ಸಾಧ್ಯತೆಯಿದ್ದು, ಕ್ರಿಮಿಯಿಂದಾಗಿ ತುರಿಕೆಯಂತಹ ಸಮಸ್ಯೆಗಳು ಶುರುವಾಗುತ್ತದೆ. ಈ ಸಮಸ್ಯೆಗೆ ಮನೆಯಲ್ಲಿಯೇ ಔಷಧವನ್ನು ನಾವು ತಯಾರಿಸಿಕೊಳ್ಳಬಹುದಾಗಿದೆ. ದಿನನಿತ್ಯ ಬಳಸುವ ಆಹಾರ ಪದಾರ್ಥದಿಂದಲೇ ಹೊಟ್ಟೆ ಹುಳಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ತುಳಸಿ ಎಲೆಗಳ ಸೇವನೆ ಅಥವಾ ತುಳಸಿ ಸಾರದ ಸೇವನೆ ಹೊಟ್ಟೆಹುಳುಗಳನ್ನು ಕೊಲ್ಲಲು ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಓಮದ ಕಾಳಿನ ಕಷಾಯ ಮಾಡಿ ಕುಡಿಯುವುದರಿಂದ ಮಕ್ಕಳು ಸುಲಭವಾಗಿ ಜಂತುಹುಳಗಳ ಸಮಸ್ಯೆಯಿಂದ ಪಾರಾಗಬಹುದು. ಇದಲ್ಲದೆ ಮಕ್ಕಳಲ್ಲಿ ಹೊಟ್ಟೆ ಹಸಿವು ಉಂಟಾಗುತ್ತದೆ. ಹಾಗೆ ಶೀತ, ಜ್ವರದಂತಹ ಅಲರ್ಜಿ ಸಮಸ್ಯೆಯನ್ನು ತಡೆಗಟ್ಟಲು ಇದು ಸಹಕಾರಿಯಾಗಿದೆ.

ಒಂದು ಪಾತ್ರೆಯ ಮೇಲೆ ಹಸಿ ಓಮದ ಕಾಳನ್ನು ಹಾಕಿ ಚೆನ್ನಾಗಿ ಹುರಿದು ಓಮದ ಕಾಳು ಕಪ್ಪಾದ ಮೇಲೆ ಒಂದು ಲೋಟ ನೀರನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಹಾಕಿದ ಒಂದು ಲೋಟ ನೀರು ನಾಲ್ಕು ಟೇಬಲ್‌ ಸ್ಪೂನ್‌ ಆದ ಮೇಲೆ ತಣಿಸಿ ಮಕ್ಕಳಿಗೆ ಕುಡಿಸಬೇಕು. ಈ ಕಷಾಯವನ್ನು ಹೆಚ್ಚಾಗಿ ಬೆಳಗ್ಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಎರಡರಿಂದ ನಾಲ್ಕು ಚಮಚ ದೊಡ್ಡ ಮಕ್ಕಳಿಗೆ ಕೊಟ್ಟರೆ ಹೆಚ್ಚು ಸೂಕ್ತವಾಗಿರುತ್ತದೆ.
ಬೆಳುಳ್ಳಿಮತ್ತು ಜೇನುತುಪ್ಪದ ಮಿಶ್ರಣವನ್ನು ಚಿಕ್ಕ ಮಕ್ಕಳಿಗೆ ಒಂದು ಚಮಚ ಕೂಡಿಸಬೇಕು ಹೀಗೆ ಮಾಡಿ ಕುಡಿಸುವುದರಿಂದ ಹೊಟ್ಟೆಯಲ್ಲಿನ ಜಂತು ಹುಳ ಸಮಸ್ಯೆ ನಿವಾರಣೆಯಾಗುತ್ತದೆ .

ಅರಿಶಿನದಲ್ಲಿ ‘ ಕರ್ಕ್ಯುಮಿನ್ ‘ ಎಂಬ ಅಂಶ ಇರುವ ಕಾರಣ ಇದು ಆಂಟಿ – ಸೆಪ್ಟಿಕ್ ಮತ್ತು ಆಂಟಿ – ಮೈಕ್ರೋಬಿಯಲ್ ಗುಣ ಲಕ್ಷಣಗಳನ್ನು ಹೊಂದಿದೆ. ಒಂದು ಗ್ಲಾಸ್ ಮಜ್ಜಿಗೆಗೆ 1 ಟೇಬಲ್ ಚಮಚ ಅರಿಶಿನ ಹಾಕಿ ಮಧ್ಯಾಹ್ನದ ಸಮಯದಲ್ಲಿ ಊಟ ಮಾಡಿದ ನಂತರ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಜಂತು ಹುಳುಗಳು ನಾಶವಾಗುತ್ತವೆ.
1 ಟೇಬಲ್ ಚಮಚ ಕೊಬ್ಬರಿ ತುರಿಯನ್ನು ಮುಂಜಾನೆಯ ಉಪಹಾರದಲ್ಲಿ ಸೇವಿಸುವ ಆಹಾರ ಪದಾರ್ಥದ ಜೊತೆಗೆ ಮಿಶ್ರಣ ಮಾಡಿ ಸೇವಿಸುವುದರಿಂದ ಜಂತು ಹುಳುಗಳಿಂದ ಪರಿಹಾರ ಪಡೆಯಬಹುದು. ಲವಂಗದಲ್ಲಿ ಆಂಟಿ – ಮೈಕ್ರೋಬಿಯಲ್ ಗುಣ ಲಕ್ಷಣಗಳು ಸಾಕಷ್ಟಿದ್ದು, ಆರೋಗ್ಯ ಪ್ರಯೋಜನಗಳು ಕೂಡ ಅಷ್ಟೇ ಇವೆ. ರಾತ್ರಿ ಮಲಗುವ ಸಮಯದಲ್ಲಿ ಊಟ ಮಾಡಿದ ನಂತರ 2 – 3 ಲವಂಗಗಳನ್ನು ಒಂದು ಕಪ್ ನೀರಿನಲ್ಲಿ ಚೆನ್ನಾಗಿ ಹತ್ತು ನಿಮಿಷಗಳ ಕಾಲ ಕುದಿಸಿ ಆರಿದ ಮೇಲೆ ಸೇವನೆ ಮಾಡುವುದರಿಂದ ಜಂತು ಹುಳುಗಳು ನಾಶವಾಗುತ್ತವೆ. ಹೀಗೆ ಸರಳ ವಿಧಾನಗಳನ್ನು ಮಾಡಿ ಹೊಟ್ಟೆ ಹುಳದ ಸಮಸ್ಯೆಯಿಂದ ಪಾರಾಗಬಹುದು.

Leave A Reply

Your email address will not be published.