‘ ಸೆಕ್ಸ್ ‘ ಎಂಬ ಖದೀಮ ಹುಟ್ಟಿದ ವರ್ಷ ಯಾವಾಗ ಗೊತ್ತಾ? ಕಾಮದ ‘ ಹ್ಯಾಪಿ ಬರ್ತ್ ಇಯರ್ ರಿವೀಲ್ !

‘ ಕಾಮ, ದ ಸೆಕ್ಸ್ ಹುಟ್ಟಿದ್ದು ಯಾವಾಗ ‘ ಎಂದು ಯಾರಾದರೂ ನಿಮ್ಮನ್ನು ಕೇಳಿದರೆ, ಅತ್ತಿತ್ತ ನೋಡಿ, ತುಸು ನಾಚಿಕೊಂಡು ” ನಾನು ಎಲಿಮೆಂಟರಿಯಲ್ಲಿದ್ದಾಗ….” ಅಂತ ನಿಮ್ಮ ಪರ್ಸನಲ್ ಪುರಾಣ ಬಿಚ್ಚುವ ಮೊದಲು….ಈ ಲೇಖನ ಓದಿ !

 

ಜೀವಿ ಎಂದ ಮೇಲೆ ಪ್ರತಿಯೊಂದು ಜೀವಿಯ ಅಂತರಾಳದಲ್ಲಿ ಕಾಮವೆಂಬುವುದು ಇದ್ದೆ ಇರುತ್ತದೆ. ಇದು ಕೇವಲ ಮನುಷ್ಯನಲ್ಲಿ ಮಾತ್ರವಲ್ಲದೆ ಸಕಲ ಜೀವ ಸಂಕುಲಗಳು ಕಾಮದಿಂದ ಲೈಂಗಿಕ ಕ್ರಿಯೆ ನಡೆಸಬೇಕೆಂಬ ಆಸೆಯನ್ನು ಹೊತ್ತುಕೊಂಡಿವೆ. ಆದರೆ ಲೈಂಗಿಕತೆಯು ಹೇಗೆ ಬಂದಿತು ಎಂಬುದರ ಬಗ್ಗೆ ಸಾಕಷ್ಟು ಜನರಿಗೆ ಕುತೂಹಲವಿರಬಹುದು. ನಾವು ಅದನ್ನು ಏಕೆ ಹೊಂದಲು ಪ್ರಾರಂಭಿಸಿದ್ದೇವೆ? ಈ ಸೆಕ್ಸ್ ಎಂಬ ಮಜಾಭರಿತ ವ್ಯವಹಾರ ಯಾವಾಗ ಶುರುವಾಯಿತು ?
ಎಂಬ ಪ್ರಶ್ನೆಗೆ ಉತ್ತರ ನೀವು ಅಂದುಕೊಂಡಷ್ಟು ನೇರವಾಗಿರದೇ ಇರಬಹುದು. ಆದರೆ ಈ ಪ್ರಶ್ನೆ ಹಾಕುವುದು ಅಗತ್ಯ ಅಲ್ಲವೇ? ಈಗ. ಪ್ರಶ್ನೆಯ ಬೆನ್ನಲ್ಲೇ ಉತ್ತರ ಸಿಕ್ಕಿದೆ ‘ ಈ ಜೀವ ಜಗತ್ತು ಸೆಕ್ಸ್ ಮಾಡಲು ಶುರು ಹಚ್ಕೊಂಡು ಬರೊಬ್ಬರಿ 385 ಮಿಲಿಯನ್ ವರ್ಷಗಳೇ ಸಂದಿವೆ.

ಗಂಡು ಹೆಣ್ಣುಗಳು ಸಂಗಾತಿಗಳಾಗಿ ಜೊತೆಯಾಗಿ ಏಕಾಂತದಲ್ಲಿರುವಾಗ ಇಬ್ಬರಲ್ಲೂ ಕಾಮಾಸಕ್ತಿ ಕೆರಳುತ್ತದೆ. ಇದರಿಂದಾಗಿ ಗಂಡು ಹೆಣ್ಣುಗಳು ಕಾಮ ಕ್ರೀಡೆಯಲ್ಲಿ ತೊಡಗಿಕೊಳ್ಳುತ್ತಾರೆ. ಒಬ್ಬರ ಮೈಯನ್ನು ಮತ್ತೊಬ್ಬರು ನಯವಾಗಿ ಉಜ್ಜುವುದು, ಮುತ್ತಿಡುವುದು, ನಾಲಿಗೆಯಲ್ಲಿ ನೆಕ್ಕುವುದು ಮಾಡುತ್ತಾ ಒಬ್ಬರ ಬಟ್ಟೆಗಳನ್ನು ಒಬ್ಬರು ಕಳಚಿಕೊಳ್ಳುತ್ತಾ ಬೆತ್ತಲಾಗಿ ನಿಲ್ಲುತ್ತಾರೆ. ಈ ಸಮಯದಲ್ಲಿ ಗಂಡು ಹೆಣ್ಣುಗಳಿಬ್ಬರ ದೇಹದಲ್ಲೂ ವಿವಿಧ ಗ್ರಂಥಿಗಳು ಸ್ರವಿಸಿ ದೇಹದಾದ್ಯಂತ ಹಲವಾರು ಹಾರ್ಮೋನ್ ಗಳ ಸಂಚಾರ ಆರಂಭವಾಗುತ್ತದೆ. ಈ ಕಾರಣದಿಂದ ದೇಹದಲ್ಲಿ ರಕ್ತಸಂಚಾರ ಅಧಿಕವಾಗುತ್ತದೆ ಹಾಗು ಇತರ ದೈಹಿಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇದು ನಾವಿವತ್ತು ಆಧುನಿಕ.ಮನುಷ್ಯ ಕಂಡು ಕೇಳಿದ, ಕದ್ದು ನೋಡಿದ, ಮನಸಾರೆ ಮಾಡುತ್ತಿರುವ ಕಾಮ ಕಲೆ.

ಇವತ್ತಿನ ಈ ಲೈಂಗಿಕತೆ ಶುರು ಆಗುವ ಮೊದಲು ಒಂದು ಸಮಯವಿತ್ತು. ಭೂಮಿಯು ಹೊಸದಾಗಿದ್ದಾಗ, ಎಲ್ಲಾ ಜೀವಿಗಳು ಅಲೈಂಗಿಕವಾಗಿ ಪುನರುತ್ಪಾದಿಸಲ್ಪಟ್ಟವು: ಲೈಂಗಿಕ ಪಾಲುದಾರರನ್ನು ಹುಡುಕುವ ಬದಲು, ವ್ಯಕ್ತಿಗಳು ತಮ್ಮ ಐಕ್ಯವನ್ನು ಶಾಶ್ವತಗೊಳಿಸಲು ತಮ್ಮ ಪ್ರತಿಗಳನ್ನು ಹುಟ್ಟುಹಾಕಿದರು. ಅದು ಈಗಿನ ಝೆರಾಕ್ಸ್ ಥರ. ಸ್ಪ್ಲಿಟ್ ಸೆಲ್ !! ಇದು ಸರಳವಾಗಿತ್ತು. ಇದು ಪರಿಣಾಮಕಾರಿಯಾಗಿತ್ತು ಕೂಡಾ. ಸೆಕ್ಸ್ ನಲ್ಲಿ ಕೂಡುವುದು ಇದ್ದರೆ, ಅಲೈಂಗಿಕ ವಿಧಾನದಲ್ಲಿ ಕಳೆಯುವುದು ನಡೆಯುತ್ತಿದ್ದು. ಒಂದು ಇದ್ದದ್ದು ಒಡೆದು ಟಿಸಿಲಾಗಿ ಎರಡಾಗುವ ವಿಧಾನ ಅದು.

ಅಲ್ಲಿ ಪ್ರತಿಯೊಬ್ಬ ಸದಸ್ಯರು ಸಂತಾನೋತ್ಪತ್ತಿ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರು ಮತ್ತು ಅವರ ಯಾವುದೇ ಸಂಗಾತಿಯ ಸಹಾಯವಿಲ್ಲದೆ ಹಾಗೆ ಮಾಡಿದರು. ಜೀವನವು ತಿನ್ನುವುದು, ತಿನ್ನುವುದನ್ನು ತಪ್ಪಿಸುವುದು ಮತ್ತು ಸಾಂದರ್ಭಿಕವಾಗಿ ನಿಮ್ಮ ಡಿಎನ್‌ಎಯನ್ನು ಕಾಪಿ-ಪೇಸ್ಟ್ ಮಾಡುವ ಮೂಲಕ ನಿಮ್ಮನ್ನು ಎರಡಾಗಿ ವಿಭಜಿಸಲು ಕುದಿಯಿತು. ನಂತರ ಕೆಲವು ಪ್ರೊಕಾರ್ಯೋಟ್‌ಗಳು ಡಿಎನ್‌ಎಯನ್ನು ನೊಣದಲ್ಲಿ ಪರಸ್ಪರ ವಿನಿಮಯ ಮಾಡಿಕೊಳ್ಳಲು ಕಲಿತವು, ಇದು ಅವರ ಜಾತಿಗಳು ಹೊಸ ರೀತಿಯಲ್ಲಿ ತಳಿಶಾಸ್ತ್ರವನ್ನು ಹೊಂದಿಕೊಳ್ಳಲು ಮತ್ತು ಸಂಯೋಜಿಸಲು ಸಹಾಯ ಮಾಡಿತು. 

ಅದು ಹೀಗೆ ಪ್ರಾರಂಭ ಆಗಿ 385 ಮಿಲಿಯನ್ ವರ್ಷಗಳೇ ಆಗಿವೆ. ಈಗ ಲೈಂಗಿಕ ಕ್ರಿಯೆ ಕೇವಲ ಸಂತಾನೋತ್ಪತ್ತಿ ಗೆ ಇರುವ ಸಾಧನವಲ್ಲ. ದೇಹದ ಸುಖಕ್ಕಾಗಿ ಆಚರಿಸುವ ದೊಡ್ಡ ಕ್ರೀಡೆ ಕೂಡಾ. ಅಷ್ಟೇ ಅಲ್ಲದೆ ಇಂದು ಸೆಕ್ಸ್ ಅನ್ನುವುದೊಂದು ಮನರಂಜನೆಯ ವ್ಯಾಪಾರಿ ಸರಕು ಸಹ !

ಸುಮಾರು 385 ದಶಲಕ್ಷ ವರ್ಷಗಳ ಹಿಂದೆ ಸ್ಕಾಟ್ಲೆಂಡ್‌ನಲ್ಲಿ ಅಸಹ್ಯಕರವಾದ, ದೀರ್ಘಾವಧಿಯ ಅಳಿವಿನಂಚಿನಲ್ಲಿರುವ ಮೀನುಗಳ ಗುಂಪಿನಿಂದ ಲೈಂಗಿಕ ಸಂಭೋಗವು ಪ್ರವರ್ತಕವಾಗಿದೆ ಎಂದು ಆಸ್ಟ್ರೇಲಿಯಾದ ವಿಜ್ಞಾನಿಗಳು ವರದಿ ಮಾಡಿದ್ದಾರೆ.

ಅದೇನೇ ಇರಲಿ ಸೆಕ್ಸ್ ಭಾರೀ ಹಳೆಯದು. ಅಂತದನ್ನು ಜೀವಿ ಆಚರಿಸುತ್ತಾ ಬರ್ತಿದೆ. ಅದಕ್ಕಾಗೇ ಜೀವರಾಶಿ ಭೂಮಿ ಮೇಲೆ ಉಲ್ಕೊಂಡಿದೆ. ಇಂತಹ ಸೆಕ್ಸ್ ಅನ್ನು ದಿನಂಪ್ರತಿ ಮಾಡುವುದರಿಂದ ಆಗುವ ಉಪಯೋಗಗಳು ಅನೇಕ.

ಸಂಶೋಧಕರ ಪ್ರಕಾರ ಪ್ರತಿದಿನ ಲೈಂಗಿಕ ಕ್ರಿಯೆ ಮಾಡುವುದರಿಂದ ಶಾರೀರಿಕವಾಗಿ ಆರೋಗ್ಯವಾಗಿರುವ ಜೊತೆ ಅನೇಕ ರೋಗಗಳು ನಿಮ್ಮ ಹತ್ತಿರವೂ ಸುಳಿಯೋದಿಲ್ಲ.
ಇತ್ತೀಚಿನ ಒಂದು ಅಧ್ಯಯನದಲ್ಲಿ ವಾರಕ್ಕೆರಡು ಬಾರಿ ಲೈಂಗಿಕ ಚಟುವಟಿಕೆಯಲ್ಲಿ ಭಾಗವಹಿಸುವ ಪುರುಷರಲ್ಲಿ ಹೃದಯಸ್ತಂಭದನ ಸಾಧ್ಯತೆ ಕಡಿಮೆ ಇರುತ್ತದೆಯಂತೆ.

ಈ ಜಗತ್ತಿನಲ್ಲಿ ಲೈಂಗಿಕ ಕ್ರಿಯೆ ಇಲ್ಲದೆ ಇರುತ್ತಿದ್ದರೆ ಹೇಗೆ ಇರುತ್ತಿತ್ತು? ಯೋಚನೆ ಮಾಡಿದರೆ ನಿಮಗೆ ಆತಂಕ ಹುಟ್ಟುವುದಂತು ನಿಜ. ಲೈಂಗಿಕ ಕ್ರಿಯೆಯಿಂದ ಇಷ್ಟೆಲ್ಲಾ ಉಪಯೋಗವಿರುವಾಗ ನಾವ್ಯಾಕೆ ಸೆಕ್ಸ್ ಗೆ ಒಂದು ಸ್ಪೆಷಲ್ ಥ್ಯಾಂಕ್ಸ್ ಹೇಳಬಾರದು, ಅಲ್ಲವೇ?

Leave A Reply

Your email address will not be published.