Shocking News : ಜಾತ್ರೆಗೆಂದು ಹೋದ 15 ರ ಬಾಲೆಯ ಮೇಲೆ ಸಾಮೂಹಿಕ ಅತ್ಯಾಚಾರ, ಕಾಮುಕರಿಂದ ಬಚಾವಾಗಲು ಬೆತ್ತಲೆಯಾಗಿ ರಾತ್ರಿ ಓಡಿಕೊಂಡು ಬಂದ ಪುಟ್ಟ ಪೋರಿಯ ವೀಡಿಯೋ ವೈರಲ್
ಉತ್ತರ ಪ್ರದೇಶದಲ್ಲಿ ಪ್ರತಿವರ್ಷ ಇಡೀ ದೇಶದಲ್ಲೇ ಅತಿ ಹೆಚ್ಚು ಅತ್ಯಾಚಾರದ ಪ್ರಕರಣಗಳು (Rape Cases) ನಡೆಯುತ್ತಾ ಇರುತ್ತದೆ. ಹಾಗಾಗಿ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ರಾಜ್ಯವೆಂದರೆ ಅದು ಉತ್ತರ ಪ್ರದೇಶ (Uttar Pradesh)ವೆಂದು ಹೇಳಬಹುದು. ಈಗ ಇದೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ.
ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ಜಾತ್ರೆಗೆ ತೆರಳಿದ್ದ 15 ವರ್ಷದ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಆಕೆಯ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಸಾಮೂಹಿಕ ಅತ್ಯಾಚಾರದಿಂದ ಹೈರಾಣಾದ ಬಾಲಕಿ ತನ್ನ ಪ್ರಾಣ ಉಳಿಸಿಕೊಳ್ಳಲು ರಸ್ತೆಯಲ್ಲಿ ನಗ್ನವಾಸ್ಥೆಯಲ್ಲಿಯೇ ಓಡಿಕೊಂಡು ಹೋಗಿದ್ದಾಳೆ. ಜನ ನೋಡುತ್ತಿದ್ದಾರೆ ಎನ್ನುವ ಪರಿವೆಯೇ ಇಲ್ಲದೇ ಆಘಾತ ಸ್ಥಿತಿಯಲ್ಲಿ ಓಡಿಕೊಂಡು ಹೋಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅತ್ಯಾಚಾರ ಮಾಡಿದ ಕಾಮುಕರು, ಬಾಲಕಿಯ ಬಟ್ಟೆಯನ್ನು ಕಸಿದುಕೊಂಡಿದ್ದು ಮಾತ್ರವಲ್ಲದೇ, ಬಾಲಕಿಯನ್ನು ಬೆತ್ತಲೆಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಂತೆ ಮಾಡಿದ್ದಾರೆ. ರಸ್ತೆಯಲ್ಲಿ ರಾತ್ರಿ ವೇಳೆ ಆ ಬಾಲಕಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಸವಾರರು, ಕಾರು ಚಾಲಕರು ತಮ್ಮ ವಾಹನವನ್ನು ನಿಲ್ಲಿಸಿ ಆಕೆಯನ್ನೇ ನೋಡುತ್ತಿರುವ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದೆ.
ಈ ಘಟನೆ ನಡೆದ 15 ದಿನಗಳಾಗಿದೆ. ಅನಂತರ ಈ ವೀಡಿಯೋ ಬಹಿರಂಗವಾಗಿದೆ. ನಿಜಕ್ಕೂ ಈ ಘಟನೆ ಆಘಾತ ತರುವಂಥದ್ದು. 30 ಸೆಕೆಂಡುಗಳ ಈ ವಿಡಿಯೋದಲ್ಲಿ 15 ವರ್ಷದ ಹುಡುಗಿ ರಸ್ತೆಯಲ್ಲಿ ನಗ್ನವಾಗಿ ನಡೆಯುತ್ತಿದ್ದಾಳೆ. ಸಾಕಷ್ಟು ರಕ್ತಸ್ರಾವವಾಗುತ್ತಿದ್ದಾಗ ಆ ಬಾಲಕಿ ನಗ್ನ ಸ್ಥಿತಿಯಲ್ಲಿಯೇ ರಸ್ತೆಯಲ್ಲಿ ನಡೆದುಕೊಂಡು ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ತನ್ನ ಮನೆಗೆ ತಲುಪಿದ್ದಾಳೆ.
ಈ ಘಟನೆಯಿಂದ 15 ವರ್ಷದ ಬಾಲಕಿ ಸಂಪೂರ್ಣ ಆಘಾತಕ್ಕೊಳಗಾಗಿದ್ದಳು. ಅವಳಿಗೆ ಮೈಮೇಲೆ ಬಟ್ಟೆ ಇಲ್ಲ ಅನ್ನುವ ಸ್ಥಿತಿಯಲ್ಲಿ ಆಕೆ ಇರಲಿಲ್ಲ. ಹಾಗಾಗಿ ಆಘಾತ ಸ್ಥಿತಿಯಲ್ಲಿ ಆಕೆ ಮನೆಗೆ ಸೇರಿದ್ದಾಳೆ. ಅತ್ಯಾಚಾರ ನಡೆದ ಸ್ಥಳದಿಂದ 2 ಕಿಲೋಮೀಟರ್ ದೂರದಲ್ಲಿರುವ ತನ್ನ ಮನೆಗೆ ಆಕೆ ನಡೆದುಕೊಂಡೇ ಹೋಗಿದ್ದಾಳೆ. ಕಾಮುಕರು ತನ್ನ ತೀಟೆ ತೀರಿಸಿದ ನಂತರ ಆ ಪುಟ್ಟ ಬಾಲಕಿಯ ಮೈಮೇಲೆ ಸಣ್ಣ ತುಂಡು ಬಟ್ಟೆಯನ್ನೂ ಬಿಡದೇ ಹಾಗೇ ಹೊಗೋ ಹಾಗೇ ಮಾಡಿದ್ದಾರೆ. ಈ ನಗ್ನ ಸ್ಥಿತಿಯಲ್ಲಿ ಕಾರಿನಿಂದ ಹೊರಗೆ ಎಸೆದಿದ್ದಾರೆ. ಅಲ್ಲಿಂದ ಆಕೆ ನಡೆದುಕೊಂಡು, ಓಡಿಕೊಂಡು ಮನೆ ತಲುಪಿದ್ದಾಳೆ.
ದಾರಿಹೋಕರು ಆ ಹುಡುಗಿಗೆ ಸಹಾಯ ಮಾಡದೇ ಕೇವಲ ಮೂಕ ಪ್ರೇಕ್ಷಕರಂತೆ ನಿಂತುಕೊಂಡು ನೋಡಿದ್ದಾರೆ. ಸಹಾಯ ಮಾಡಲು ಮುಂದಾಗದೇ ಹೋದರೂ, ಬಾಲಕಿ ನಗ್ನವಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆದರೆ, ಇದ್ಯಾವುದರ ಪರಿವೆಯೂ ಇಲ್ಲದ ಆ ಬಾಲಕಿ ಆಘಾತದಿಂದ ತನ್ನಷ್ಟಕ್ಕೆ ತಾನು ಮೈಮೇಲೆ ಪ್ರಜ್ಞೆ ಇಲ್ಲದಂತೆ ನಡೆದುಕೊಂಡು ಹೋಗುತ್ತಲೇ ಇದ್ದಳು.
ಮನೆಗೆ ಬಂದ ಬಾಲಕಿ ಮನೆ ಮಂದಿಗೆ ವಿಷಯ ತಿಳಿಸಿದ್ದಾಳೆ. ಈಗ ಮನೆಯವರು ನೀಡಿದ ದೂರಿನ ಆಧಾರದಲ್ಲಿ ಸೆಪ್ಟೆಂಬರ್ 7ರಂದು ಎಫ್ಐಆರ್ ದಾಖಲಿಸಲಾಗಿದೆ. ಅನಂತರ ಆರೋಪಿಯನ್ನು ಬಂಧಿಸಲಾಗಿದೆ. ಈಗ ಆರೋಪಿಗಳು ಬಾಲಕಿ ಹಾಗೂ ಆಕೆಯ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.