ಕಬ್ಬಿಣದ ಬಾಗಿಲು ತುಕ್ಕು ಹಿಡಿದಿದೆಯೇ ? ಹಾಗಾದರೆ ಈ ರೀತಿ ತೆಗೆಯಿರಿ
ಮನೆಯನ್ನು ಸುಂದರವಾಗಿ ಇಡಲು ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಹರಸಾಹಸ ಪಡುವುದು ಸಾಮಾನ್ಯ. ಮನೆಯ ಗೇಟ್ ಕಬ್ಬಿಣದಾಗಿದ್ದರೆ, ಮಳೆಗೆ ತುಕ್ಕು ಹಿಡಿದು ಮನೆಯ ಗೇಟಿನ ಬಾಗಿಲು ಬೇಗ ಹಾಳಾಗುತ್ತವೆ.
ಗಾಳಿ ಮತ್ತು ನೀರಿಗೆ ಒಡ್ಡಲಾಗುವ ಕಬ್ಬಿಣಕ್ಕೆ ತುಕ್ಕು ಹಿಡಿಯುತ್ತದೆ. ಕಸ ಮತ್ತು ಧೂಳಿನ ಸಂಯೋಜನೆಯಿಂದ ತುಕ್ಕು ಉಂಟಾಗಿ, ಕಬ್ಬಿಣದ ಮೇಲ್ಮೈ ಮೇಲೆ ಒಂದೇ ಒಂದು ಹನಿ ನೀರು ಬಿದ್ದು, ನಿಂತರೂ ಕೂಡ ತುಕ್ಕು ಹಿಡಿಯುವ ಪ್ರತಿಕ್ರಿಯೆ ಆರಂಭವಾಗುತ್ತದೆ. ಸ್ವಲ್ಪ ಸಮಯದ ನಂತರ ನೀರಿನಲ್ಲಿರುವ ಆಮ್ಲಜನಕದೊಂದಿಗೆ ಕಬ್ಬಿಣ ಪ್ರತಿಕ್ರಿಯಿಸಿ ನೀರಿನ ಹನಿಯಲ್ಲಿ ಉತ್ಪತ್ತಿಯಾದ ಕಬ್ಬಿಣದ ಆಕ್ಸೈಡ್ ಅದಕ್ಕೆ ಕೆಂಪು ಮಿಶ್ರಿತ ಕಂದು ಬಣ್ಣದ ಕೊಡುತ್ತದೆ. ಹೀಗಾಗಿ, ನೀರಿನ ಹನಿ ಆವಿಯಾದ ಮೇಲೂ ತುಕ್ಕು ಹಿಡಿದ ಬಣ್ಣ ಹಾಗೆಯೇ ಉಳಿದುಬಿಡುತ್ತದೆ.
ಮನೆಯ ಗೇಟ್ ತುಕ್ಕು ಹಿಡಿದು ಹೋಗುವುದನ್ನು ತಪ್ಪಿಸಲು ಟಿಪ್ಸ್ :
ಕಬ್ಬಿಣದ ಬಾಗಿಲಿನಲ್ಲಿ ಉಂಟಾದ ತುಕ್ಕನ್ನು ನಿವಾರಿಸಲು ಸ್ಯಾಂಡ್ ಪೇಪರ್ ನ್ನು ಬಳಸಬಹುದು. ಇದರಿಂದ ಕಬ್ಬಿಣದ ಬಾಗಿಲನ್ನು ಉಜ್ಜಿದರೆ ತುಕ್ಕು ಸುಲಭವಾಗಿ ಹೋಗುತ್ತದೆ. ಲೋಹದಿಂದ ತುಕ್ಕನ್ನು ತೆಗೆದುಹಾಕಲು ತಂಪು ಪಾನೀಯಗಳನ್ನು ಸಹ ಬಳಸಬಹುದು. ಕೊಕೊ-ಕೋಲಾ ಕಾರ್ಬೋನೇಟ್ ಅನ್ನು ಹೊಂದಿರುವುದರಿಂದ ಇದನ್ನು ತುಕ್ಕು ಹಿಡಿದಿರುವ ಸ್ಥಳದಲ್ಲಿ ಪಾನೀಯವನ್ನು ಹಾಕಿ ಸ್ವಲ್ಪ ಹೊತ್ತು ಬಿಟ್ಟು ಬಟ್ಟೆಯಿಂದ ಸ್ವಚ್ಛ ಮಾಡಿದರೆ ಕಲೆ ಮಾಯವಾಗುತ್ತವೆ. ತುಕ್ಕು ತೆಗೆಯಲು ವಿನೆಗರ್ ಅನ್ನು ಸ್ಪ್ರೇ ಬಾಟಲಿನಲ್ಲಿ ತುಂಬಿಸಿ ತುಕ್ಕು ಹಿಡಿದಿರುವ ಸ್ಥಳದಲ್ಲಿ ಸಿಂಪಡಿಸಿ ಸ್ವಲ್ಪ ಹೊತ್ತು ಬಿಟ್ಟು ಸ್ಯಾಂಡ್ ಪೇಪರ್ ನಿಂದ ಉಜ್ಜಿ ಬಟ್ಟೆಯಿಂದ ಒರೆಸಿದರೆ ತುಕ್ಕು ಹಿಡಿದ ಜಾಗದ ಕಲೆ ಮಾಯವಾಗುತ್ತದೆ.
ಒಂದು ಪಾತ್ರೆಯಲ್ಲಿ ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ ಅದನ್ನು ತುಕ್ಕು ಹಿಡಿದ ಸ್ಥಳದಲ್ಲಿ ಹಾಕಿ ಬ್ರಷ್ ಸಹಾಯದಿಂದ ಅದನ್ನು ಸ್ವಚ್ಚಗೊಳಿಸಿದರೆ ತುಕ್ಕಿನ ಕಲೆಗಳು ಮಾಯವಾಗಿ ಹೊಳಪು ಹೆಚ್ಚುವುದು. ಈ ಸರಳ ವಿಧಾನಗಳನ್ನು ಅನುಸರಿಸಿ ಮನೆಯ ಗೇಟ್ ತುಕ್ಕು ಹಿಡಿಯುವುದನ್ನು ತಪ್ಪಿಸಬಹುದು.