ಬಾಬಾ ಬಾಬಾ…ಸೂಪರ್ ಬಾಬಾ…ಸಾಧುವಿನ ತಲೆಯ ಮೇಲೆ ಗಿರಗಿರ ತಿರುಗೋ ಸೋಲಾರ್ ಫ್ಯಾನ್ | ಖರೀದಿ ಮಾಡಿದ್ದಲ್ಲ, ಹೊಸ ಆವಿಷ್ಕಾರ

ಮಳೆ, ಗಾಳಿ, ಬಿಸಿಲು, ಬೆಂಕಿ…ಹೀಗೆ ಎಲ್ಲವುಗಳಿಂದ ರಕ್ಷಣೆ ಪಡೆಯಲು ಮನುಷ್ಯ ಅನೇಕ ತಂತ್ರಜ್ಞಾನಗಳನ್ನು ಕಂಡು ಹಿಡಿದಿದ್ದಾನೆ. ಅದರ ಬಳಕೆ ಆಗುತ್ತಲಿದೆ. ಆದರೆ ಮುಂದುವರಿದ ಈ ಜಗತ್ತಿನಲ್ಲಿ ಜನ ಸಾಮಾನ್ಯರು ಕೂಡಾ ಹಲವು ತಂತ್ರಜ್ಞಾನಗಳನ್ನು ಮಾಡುವಲ್ಲಿ ಸಫಲರಾಗಿದ್ದಾರೆ. ಹೌದು, ಇಲ್ಲೊಬ್ಬ ಸಾಧು,
ಸುಡುಸುಡೋ ಬಿಸಿಲಿನಿಂದ ರಕ್ಷಣೆ ಪಡೆಯೋಕೆ ಜಬರ್ ದಸ್ತ್ ಐಡಿಯಾ ಮಾಡಿದ್ದಾನೆ. ಮನುಷ್ಯನ ಅವಶ್ಯಕತೆಗಳೇ ಹೊಸ ಹೊಸ ಆವಿಷ್ಕಾರ ಹುಟ್ಟು ಹಾಕುತ್ತೆ ಅನ್ನೋದಕ್ಕೆ ಈ ವೀಡಿಯೋ ಕೂಡ ಒಂದು ಉತ್ತಮ ಉದಾಹರಣೆ.

 

ಬಿಸಿಲಿನಲ್ಲಿ ನಡೆದು ಸುಸ್ತಾಗುವವರಿಗೆ ಎಲ್ಲಾದರೂ ಕೊಂಚ ತಂಪಾದ ಗಾಳಿ ಸಿಕ್ಕರೆ ಆ ಕ್ಷಣಕ್ಕೆ ಅದೇ ಸ್ವರ್ಗ ಸುಖ. ಆದರೆ ಎಲ್ಲಾ ಸಮಯದಲ್ಲಿ ನೆರಳು-ಗಾಳಿ ಸಿಗಬೇಕಲ್ಲ. ಇಂಥ ಸಮಸ್ಯೆ ದೂರ ಮಾಡಲೆಂದೇ ಈಗ ಹೊಸ ಐಡಿಯಾ ಒಂದನ್ನು ಕಂಡು ಹಿಡಿದಿದ್ದಾರೆ ಈ ಸಾಧು ಅಜ್ಜ.

ಈ ಅಜ್ಜ ಸೂರ್ಯನ ಧಗಧಗಿಸೋ ಬೆಳಕು ಮುಖದ ಮೇಲೆ ಬೀಳದಿರುವಂತೆ ತಡೆಯಲು ಮತ್ತು ಗಾಳಿ ಮುಖದ ಮೇಲೆಯೇ ಸದಾ ಬೀಸುತ್ತಿರಲಿ ಅಂತಾನೇ ಫ್ಯಾನ್ ಒಂದನ್ನು ತಲೆಗೆ ಕಟ್ಟಿಕೊಂಡಿದ್ದಾರೆ. ಫ್ಯಾನ್ ದಿಕ್ಕು ಮುಖದ ಕಡೆ ಇದ್ದರೆ, ಸೋಲಾರ್ ಪ್ಲೇಟ್ ಹಿಂಭಾಗದಲ್ಲಿ ಇರುವಂತೆ ನೋಡಿಕೊಳ್ಳಲಾಗಿದೆ. ಈಗ ಸಾಧು ಅಜ್ಜನ ಈ ಸೂಪರ್ ಐಡಿಯಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಸನ್ಯಾಸಿ ವೀಡಿಯೋ, ಧರ್ಮೇಂದ್ರ ರಜಪೂತ್ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ” ಇದು ಸೌರಶಕ್ತಿಯ ಸರಿಯಾದ ಬಳಕೆ, ತಲೆಯ ಮೇಲೆ ಸೋಲಾರ್ ಪ್ಲೇಟ್ ಮತ್ತು ಫ್ಯಾನ್ ಹಾಕಿಕೊಂಡು ಸನ್ಯಾಸಿ ಬಾಬಾ ತಂಪಾದ ಗಾಳಿಯನ್ನ ಎಂಜಾಯ್” ಎಂಬ ಶೀರ್ಷಿಕೆ ನೀಡಲಾಗಿದೆ. ಈ ಐಡಿಯಾ ತಮಗೆ ಬಂದಿದ್ದಾದರೂ ಹೇಗೆ ಅಂತ ಕೇಳಿದರೆ ಈ ಸಾಧು ಸುಡೋ ಬಿಸಿಲು ಹಾಗೂ ಬಿಸಿ ಗಾಳಿಯಿಂದ ತಪ್ಪಿಸಿಕೊಳ್ಳಲು, ಹಾಗೂ ಖರ್ಚು ಕೂಡ ಇಲ್ಲ ಎನ್ನುವ ಕಾರಣಕ್ಕೆ ಇದನ್ನು ಮಾಡಿದೆ ಎಂದು ಹೇಳುತ್ತಾರೆ.

ಒಟ್ಟಿನಲ್ಲಿ ಬಾಬಾ ನ ಐಡಿಯಾ ಸಖತ್ ಸೂಪರ್. ಕಡಿಮೆ ಖರ್ಚಿನಲ್ಲೇ ಬಿಸಿಲು, ಬೆವರು, ಬಿಸಿ ಗಾಳಿ ತಪ್ಪಿಸಿಕೊಳ್ಳಲು ಮಾಡಿರೋ ಐಡಿಯಾ ನೋಡಿ ಎಲ್ಲರೂ ಖುಷಿ ಪಟ್ಟಿದಂತೂ ಸುಳ್ಳಲ್ಲ.

Leave A Reply

Your email address will not be published.