ಒಂಟಿ ಮನೆ, ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ಗೆ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಲ್ಯಾಣ ಕಾರ್ಯಕ್ರಮಗಳಡಿಯಲ್ಲಿ ಒಂಟಿ ಮನೆ, ವಿದ್ಯಾರ್ಥಿಗಳಿಗ ಲ್ಯಾಪ್ ಟ್ಯಾಪ್ ಗೆ ಸೇರಿ ವಿವಿಧ ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಇದೀಗ ಅರ್ಜಿ ಸಲ್ಲಿಕೆ ಅವಧಿಯನ್ನು ಅ.19 ರವರೆಗೆ ವಿಸ್ತರಿಸಲಾಗಿದೆ.

ಈ ಸಂಬಂಧ ಅರ್ಜಿಗಳನ್ನು ಸಲ್ಲಿಸಲು ದಿನಾಂಕ: 19-09-2022 ರನ್ನು ಕೊನೆ ದಿನಾಂಕವಾಗಿ ನಿಗಧಿಪಡಿಸಿರುವುದನ್ನು ಮುಂದುವರೆಸಿ ದಿನಾಂಕ: 19-10-2022ರವರೆಗೆ ವಿಸ್ತರಿಸಿದೆ. ಈ ಮೂಲಕ ಅರ್ಜಿ ದಾರರಿಗೆ ಮತ್ತಷ್ಟು ಸಮಯ ದೊರೆತಂತಾಗಿದೆ.

ಪಾಲಿಕೆಯ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಹೊಂದಿರುವವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ರೂ .5.00 ಲಕ್ಷಗಳ ಸಹಾಯಧನ ನೀಡುತ್ತಿದೆ. ಜೊತೆಗೆ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೊತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅನುಕೂಲವಾಗಲು ಉಚಿತ ಲ್ಯಾಪ್‌ಟಾಪ್ ಕೂಡ ನೀಡುತ್ತಿದೆ. ಅಂಧರಿಗೆ ಸ್ಮಾರ್ಟ್ ಸ್ಟಿಕ್. ಅಂಧ ವಿದ್ಯಾರ್ಥಿಗಳಿಗೆ ಎಜುಕೇಷನಲ್ ಲ್ಯಾಪ್‌ಟಾಪ್. ಹಿರಿಯ ನಾಗರೀಕರಿಗೆ ಮಡಚುಬಹುದಾದ ವೀಲ್ ಚೇರ್ ಲಭ್ಯವಾಗಲಿದೆ.

ಆಸ್ತಕರು ಪಾಲಿಕೆಯ ವೆಬ್ ಜಾಲತಾಣವಾದ https://welfare.bbmpgov.in/ ಮುಖಾಂತರ ಉಚಿತವಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ. ಅಥವಾ ಬೆಂಗಳೂರು ಒನ್ ಕೇಂದ್ರದಲ್ಲಿ ರೂ. 30/- ಶುಲ್ಕವನ್ನು ಪಾವತಿಸಿ ಆನ್‌ಲೈನ್ ಮೂಖೇನ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

Leave A Reply

Your email address will not be published.