Avatar Movie: ಅವತಾರ್ ಸಿನಿಮಾ ಮರು ಬಿಡುಗಡೆ | ಹಲವು ವಿಶೇಷತೆಗಳ ಜೊತೆಗೆ ಒಂದು ರಹಸ್ಯ ಕಾರಣವಿದೆ !!!

ಜೇಮ್ಸ್ ಕ್ಯಾಮೆರೂನ್ (James Cameron) ಹಾಲಿವುಡ್ ನ ಖ್ಯಾತ ನಿರ್ದೇಶಕ, ಬರಹಗಾರ ಮತ್ತು ನಿರ್ಮಾಪಕ. ಈಗ ಇವರು ‘ಅವತಾ‌ರ್’ಚಿತ್ರವನ್ನು ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆ (Re release) ಮಾಡಲು ಬಯಸಿದ್ದಾರೆ. ಅವತಾರ್ ಚಿತ್ರದ ಮುಂದುವರಿದ ಭಾಗ ಅಂದರೆ ಎರಡನೇ ಭಾಗವಾದ, ಅವತಾರ್: ‘ದಿ ವೇ ಆಫ್ ವಾಟರ್ ‘ (Avatar: The Way of Water) ಚಿತ್ರಕ್ಕೂ ಮೊದಲು ಅದರ ಹಿಂದಿನ ಅವತಾರ್ ಚಿತ್ರವನ್ನು ಜಾಗತಿಕವಾಗಿ ಮರುಬಿಡುಗಡೆ ಮಾಡಲು ಉತ್ಸುಕರಾಗಿದ್ದಾರೆ. ಅವತಾರ್‌ನ ಮುಂದುವರಿದ ಭಾಗ ಈ ವರ್ಷದ ಡಿಸೆಂಬರ್‌ನಲ್ಲಿ ಚಿತ್ರಮಂದಿರಗಳಿಗೆ ಬರಲಿದೆ.

 

ಪ್ರತಿಕಾಗೋಷ್ಟಿಯಲ್ಲಿ ಜೇಮ್ಸ್ ಅವರು ಚಿತ್ರದ ಕುರಿತು ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದು, ನಿಮಗೆಲ್ಲರಿಗೂ ಗೊತ್ತಿರುವಂತೆ ಚಿತ್ರವು ಬಿಡುಗಡೆಯಾಗಿ 12 ವರ್ಷಗಳು ಆಗಿದೆ. ಹಾಗಾಗಿ ನೀವು 22, 23 ವಯಸ್ಸಿನ ಒಳಗಿನವರಾಗಿದ್ದರೆ ಈ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಿರುವ ಸಾಧ್ಯತೆ ತುಂಬಾ ತುಂಬಾ ಕಡಿಮೆ. ನೀವು ಚಿತ್ರವನ್ನು ನೋಡೇ ಇಲ್ಲ ಎಂದೇ ಹೇಳಬಹುದು. ದೊಡ್ಡ ಪರದೆಯಲ್ಲಿ ಈ ಚಿತ್ರವನ್ನು ಸಿನಿ ವೀಕ್ಷಕರು ವೀಕ್ಷಿಸಬೇಕೆಂಬ ನಿಟ್ಟಿನಲ್ಲಿ ಈ ಚಿತ್ರವನ್ನು 3ಡಿಯಲ್ಲಿ ನಾವು ನಿರ್ಮಿಸಿದ್ದೆವು. ಈಗ ಅದೇ ಚಿತ್ರವನ್ನು ನಾವು 4ಕೆ ಮಾದರಿಯಲ್ಲಿ ಹೈ ಡೈನಾಮಿಕ್ ಶ್ರೇಣಿಯಲ್ಲಿ ಪ್ರತಿ ಸೆಕೆಂಡ್‌ಗೆ 48 ಪ್ರೇಮ್‌ನಂತೆ ಮರು ಮಾದರಿಗೊಳಿಸಿದ್ದೇವೆ ಎಂದು ಹೇಳಿದ್ದಾರೆ. ಚಿತ್ರದ ಆರಂಭದಲ್ಲಿ ಕಂಡುಬಂದದ್ದಕ್ಕಿಂತಲೂ ಸುಂದರವಾಗಿ ಮರುವಿನ್ಯಾಸಗೊಳಿಸಿದ ಮಾದರಿ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ 23, 2022 ರಂದು ಈ ಚಿತ್ರವು ಮರುಬಿಡುಗಡೆಯಾಗಲಿದೆ. 2009ರಲ್ಲಿ ತೆರೆಕಂಡ ಅವತಾರ್ ಚಿತ್ರ ಬಾಕ್ಸ್ ಆಫೀಸ್‌ನ ಅತ್ಯಂತ ಹೆಚ್ಚು ಗಳಿಕೆಯ ಚಿತ್ರವಾಗಿ ಹೆಸರು ಮಾಡಿತ್ತು. ಈ ಚಿತ್ರದ ಮರುಬಿಡುಗಡೆಯ ಕುರಿತು ಚಿತ್ರದ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಭಾರೀ ಉತ್ಸುಕರಾಗಿದ್ದಾರೆ.

2009 ರಲ್ಲಿ ‘ಅವತಾರ್’ ಸಿನಿಮಾ ತೆರೆಗೆ ಬಂದಿತ್ತು. ಸಿನಿಮಾ ಬಿಡುಗಡೆಯಾದ ನಂತರ 1.90 ಲಕ್ಷ ಕೋಟಿ ಹಣ ಈ ಸಿನಿಮಾ ಗಳಿಸಿತ್ತು. ಅಷ್ಟು ಮಾತ್ರವಲ್ಲ ಕಳೆದ ವರ್ಷ ಚೀನಾದಲ್ಲಿ ಮರು ಬಿಡುಗಡೆಯಾಗಿತ್ತು. ಆಗ ಈ ಸಿನಿಮಾ ಅಲ್ಲಿಯೂ 470 ಕೋಟಿ ಗಳಿಸಿದ್ದು ನಿಜಕ್ಕೂ ಆಶ್ಚರ್ಯಕರ. ಅವತಾರ್ ಸಿನಿಮಾ ಸೃಷ್ಟಿಸಿದ ಹಲವು ಬಾಕ್ಸ್ ಆಫೀಸ್ ದಾಖಲೆಗಳು ಸುಮಾರು ಹತ್ತು ವರ್ಷಗಳ ಕಾಲ ಯಾವ ಸಿನಿಮಾನೂ ಮುರಿಯಲು ಸಾಧ್ಯವಾಗಿಲ್ಲ. ಈಗಲೂ ಕೆಲವು ದಾಖಲೆಗಳು ಹಾಗೆಯೇ ಇವೆಯೆಂದರೆ ನೀವು ನಂಬಲೇಬೇಕು.

‘ಅವತಾ‌ರ್’ ಸರಣಿಯ ಎರಡನೇ ಸಿನಿಮಾ ‘ಅವತಾರ್, ದಿ ವೇ ಆಫ್ ವಾಟರ್’ ಡಿಸೆಂಬರ್ ನಲ್ಲಿ ತೆರೆಗೆ ಬರುತ್ತಿದೆ. ಮೊದಲ ಸಿನಿಮಾದಲ್ಲಿದ್ದ ಕೆಲವು ಪಾತ್ರಗಳ ಜೊತೆಗೆ ಇನ್ನೂ ಕೆಲವು ಪಾತ್ರಗಳು ಇವೆ. ‘ಫಾಸ್ಟ್ ಆಂಡ್ ಪ್ಯೂರಿಯಸ್’ ಖ್ಯಾತಿಯ ವೇನ್ ಡೀಸೆಲ್, ‘ಟೈಟಾನಿಕ್’ ಸಿನಿಮಾ ನಾಯಕಿ ಕೇಟ್ ವಿನ್‌ಸೈಟ್ ಅವರುಗಳು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸಹ ಈ ಹಿಂದಿನ ಎಲ್ಲ ಬಾಕ್ಸ್ ಆಫೀಸ್ ದಾಖಲೆಗಳನ್ನು ಧೂಳಿಪಟ ಮಾಡುವ ಎಲ್ಲಾ ನಿರೀಕ್ಷೆ ಸಿನಿ ಪ್ರೇಕ್ಷಕರದ್ದು.

Leave A Reply

Your email address will not be published.