ಡಿಸೆಂಬರ್ ನಿಂದಲೇ ಆರಂಭವಾಗಲಿದೆ ಶಾಲೆಗಳಲ್ಲಿ `ನೈತಿಕ ಶಿಕ್ಷಣ’ -ಬಿ.ಸಿ.ನಾಗೇಶ್
ಬೆಂಗಳೂರು : ನೈತಿಕ ಶಿಕ್ಷಣದ ಕುರಿತು ಮಾತಾನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ರಾಜ್ಯದ ಶಾಲೆಗಳಲ್ಲಿ ಡಿಸೆಂಬರ್ ನಿಂದ ನೈತಿಕ ಶಿಕ್ಷಣವನ್ನು ರಾಜ್ಯ ಸರ್ಕಾರ ಜಾರಿಗೆ ತರಲಿದೆ ಎಂದು ಹೇಳಿದ್ದಾರೆ.
ಈ ಕುರಿತು ಎಂಎಲ್ ಸಿ ಎಂ.ಕೆ.ಪ್ರಾಣೇಶ್ ವಿಧಾನಪರಿಷತ್ ನಲ್ಲಿ ಪ್ರಶ್ನೆಸಿದಾಗ, ಉತ್ತರಿಸಿದ ಸಚಿವ ಬಿ.ಸಿ.ನಾಗೇಶ್, ಭಗವದ್ಗೀತೆಯನ್ನು ಸ್ವತಂತ್ರ ಕಲಿಕಾ ಘಟಕವನ್ನಾಗಿ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಆದರೆ ಅದನ್ನು ನೈತಿಕ ಶಿಕ್ಷಣದಲ್ಲಿ ಸೇರಿಸಲಾಗುವುದು. ಈ ಶೈಕ್ಷಣಿಕ ವರ್ಷದ ಡಿಸೆಂಬರ್ ನಿಂದ ಇದನ್ನು ಪರಿಚಯಿಸಲಾಗುವುದು ಎಂದು ಅವರು ಹೇಳಿದರು.
ನೈತಿಕ ಶಿಕ್ಷಣದ ಬಗ್ಗೆ ಶಿಫಾರಸು ಮಾಡುವ ತಜ್ಞರ ಸಮಿತಿಯನ್ನು ನಾವು ರಚಿಸುತ್ತೇವೆ. ಸಮಿತಿಯ ವರದಿಯ ಆಧಾರದ ಮೇಲೆ, ನೈತಿಕ ಶಿಕ್ಷಣದ ಅಡಿಯಲ್ಲಿ ಏನನ್ನು ಕಲಿಸಬೇಕು ಎಂಬುದರ ಬಗ್ಗೆ ನಾವು ನಿರ್ಧರಿಸುತ್ತೇವೆ ಎಂದು ತಿಳಿಸಿದ್ದಾರೆ. ಯಾವ ರೀತಿಯ ನೈತಿಕ ಶಿಕ್ಷಣವನ್ನು ಪರಿಚಯಿಸಬೇಕು ಎಂಬುದರ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ. ಆದರೆ, ಈ ಶೈಕ್ಷಣಿಕ ವರ್ಷದಿಂದಲೇ ಆರಂಭವಾಗಲಿದೆ ಎಂದು ಹೇಳಿದರು.