ಬೃಹತ್ ಭೂಕಂಪಕ್ಕೆ ನಲುಗಿದ ಕಟ್ಟಡ ರಸ್ತೆ | ಸ್ವಿಮ್ಮಿಂಗ್ ಫುಲ್ ನಲ್ಲೂ ಸುನಾಮಿ – ಭಯಾನಕ ವೀಡಿಯೋ ವೈರಲ್
ಮೆಕ್ಸಿಕೋದಲ್ಲಿ ನಿನ್ನೆ ಬೃಹತ್ ಭೂಕಂಪನ ಸಂಭವಿಸಿದ್ದು, ಕಟ್ಟಡಗಳು ಅಲುಗಾಡಿದರೆ, ಸ್ವಿಮ್ಮಿಂಗ್ ಫುಲ್ ನಲ್ಲಿ ಸುನಾಮಿಯೇ ಕಾಣಿಸಿಕೊಂಡ ಘಟನೆ ನಡೆದಿದೆ. ಈ ಭಯಾನಕ ದೃಶ್ಯದ ವೀಡಿಯೋ ಇದೀಗ ವೈರಲ್ ಆಗಿದ್ದು, ಮೈ ಜುಮ್ ಅನಿಸುವಂತಿದೆ.
ಈ ಘಟನೆ ಪೆಸಿಫಿಕ್ ಕರಾವಳಿಯಲ್ಲಿ ಸೋಮವಾರ ಸಂಭವಿಸಿದೆ. ಕಟ್ಟಡವೊಂದರ ಮೇಲಿರುವ ಈಜುಕೊಳದ ದೃಶ್ಯವನ್ನು ನೆಟ್ಟಿಗರೊಬ್ಬ ಹಂಚಿಕೊಂಡಿದ್ದು, ಸ್ವಮ್ಮಿಂಗ್ಪೂಲ್ನಲ್ಲಿ ಮಿನಿ ಸುನಾಮಿ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಭೂಕಂಪನಕ್ಕೆ ಕಟ್ಟಡ ಅಲುಗಾಡಿದ ಪರಿಣಾಮ ಕಟ್ಟಡದ ಮೇಲಿಂದ ನೀರು ಕೆಳಗೆ ಚೆಲ್ಲುತ್ತಿರುವ ದೃಶ್ಯವಿದೆ. ಇನ್ನೊಂದು ವಿಡಿಯೋದಲ್ಲಿ ಹೋಟೆಲ್ ಒಂದರ ಕೊಠಡಿಯೊಳಗೆ ಫ್ಯಾನ್ ಅಲುಗಾಡುತ್ತಿರುವ ದೃಶ್ಯವಿದೆ. ಮಗದೊಂದು ವಿಡಿಯೋದಲ್ಲಿ ಭೂಂಕಪನಕ್ಕೆ ಪಾರ್ಕ್ ಮಾಡಿರುವ ಕಾರುಗಳು ಸಹ ಅಲುಗಾಡುತ್ತಿವೆ. ಒಟ್ಟಾರೆ ಈ ವೀಡಿಯೋಗಳು ಜನರನ್ನೇ ಬೆಚ್ಚಿಬೀಳಿಸಿದೆ.
ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 1.05ರ ಸುಮಾರಿಗೆ 7.5 ತೀವ್ರತೆಯ ಪ್ರಬಲ ಭೂಕಂಪನವು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಭೂಕಂಪವು ಅಕ್ವಿಲಾದಿಂದ ಆಗ್ನೇಯಕ್ಕೆ 37 ಕಿಲೋಮೀಟರ್ ದೂರದಲ್ಲಿ ಕೊಲಿಮಾ ಮತ್ತು ಮೈಕೋವಾಕನ್ ರಾಜ್ಯಗಳ ಬಳಿ ಕೇಂದ್ರೀಕೃತವಾಗಿತ್ತು ಎಂದು ತಿಳಿದುಬಂದಿದೆ.