ಬಾಲಿವುಡ್ ನ ಖ್ಯಾತ ನಟ ಇಮ್ರಾನ್ ಹಶ್ಮಿ ಮೇಲೆ ಕಲ್ಲು ತೂರಾಟ !!!

ಬಾಲಿವುಡ್ ನ ಜನಪ್ರಿಯ ನಟ ತನ್ನ ಕಿಸ್ಸಿಂಗ್ ಸೀನ್ ಗಳ ಮೂಲಕನೇ ಬಾಲಿವುಡ್ ನಲ್ಲಿ ಭಾರೀ ಸಂಚಲನ ಮಾಡಿದ ಹೀರೋ ಇಮ್ರಾನ್ ಹಶ್ಮಿ ಮೇಲೆ ಶೂಟಿಂಗ್ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆಯೊಂದು ನಡೆದಿದೆ. ಹೌದು, ಕಾಶ್ಮೀರದಲ್ಲಿ ಬಾಲಿವುಡ್ ನಟ ಇಮ್ರಾನ್ ಹಶ್ಮಿ (Emraan Hashmi) ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಹಲ್ಗಾಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

 

ಇಮ್ರಾನ್ ಹಶ್ಮಿಅವರು ತಮ್ಮ ಹೊಸ ಚಿತ್ರ ‘ಗ್ರೌಂಡ್ ಜೀರೋ’ ಶೂಟಿಂಗ್‌ಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆ ‌ನಡೆದಿದೆ.

ಮೂಲಗಳ ಪ್ರಕಾರ, ಶೂಟಿಂಗ್ ಮುಗಿಸಿ ಪಹಲ್ಗಾಮ್ ಮುಖ್ಯ ಮಾರುಕಟ್ಟೆಗೆ ಹೋದಾಗ ಅಪರಿಚಿತರು ಇಮ್ರಾನ್ ಹಶ್ಮಿ ಮೇಲೆ ಕಲ್ಲು ಎಸೆದಿದ್ದಾರೆ ಎನ್ನಲಾಗಿದೆ. ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ವಿರುದ್ಧ ಸೆಕ್ಷನ್ 147, 148, 370, 336, 323 ಅಡಿಯಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಗ್ರೌಂಡ್ ಜೀರೋ ಚಿತ್ರವನ್ನು ತೇಜಸ್ ದಿಯೋಸ್ಕ‌ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಸೇನಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Leave A Reply

Your email address will not be published.