7th Pay Commission: ಸರ್ಕಾರಿ ನೌಕರರಿಗೆ ಢಬಲ್ ಧಮಾಕ : ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ, 8 ತಿಂಗಳ ಬಾಕಿ ವಾಪಸ್
ಸರ್ಕಾರಿ ನೌಕರರೇ ನಿಮಗೊಂದು ಸಿಹಿ ಸುದ್ದಿ. ನೌಕರರು ಡಿಎ ಹೆಚ್ಚಳಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದ ಕಾಲ ಮುಗಿಯಿತು. ಈಗ ತಿಳಿದಿರೋ ವಿಚಾರ ಏನೆಂದರೆ ನವರಾತ್ರಿಗೂ ಮುನ್ನ ಸರ್ಕಾರ ನೌಕರರ ತುಟ್ಟಿಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ.
ಹಬ್ಬದ ಮುನ್ನ ಒಡಿಶಾ ಸರ್ಕಾರ ಸೋಮವಾರ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳವನ್ನು ಪ್ರಕಟಿಸಿದೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೋಮವಾರ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಿಸುವ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ.
ಹೊಸ ಅಧಿಸೂಚನೆ ಪ್ರಕಾರ ತುಟ್ಟಿ ಭತ್ಯೆಯಲ್ಲಿ ಶೇ.3ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಹೊಸ ಪ್ರಕಟಣೆಯಲ್ಲಿ ನೌಕರರ ತುಟ್ಟಿ ಭತ್ಯೆಯನ್ನು ಈಗಿರುವ ಶೇ.31ರಿಂದ ಶೇ.34ಕ್ಕೆ ಏರಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಹೆಚ್ಚಿದ ತುಟ್ಟಿಭತ್ಯೆಯನ್ನು ಜನವರಿ 1, 2022 ರಿಂದ ಅನ್ವಯಿಸಲಾಗುತ್ತದೆ ಎಂದು ಪರಿಗಣಿಸಲಾಗುತ್ತದೆ. ಅಂದರೆ, ಇದರೊಂದಿಗೆ ನೌಕರರಿಗೆ 8 ತಿಂಗಳ ಬಾಕಿಯೂ ಸಿಗಲಿದೆ. ಒಡಿಶಾ ಸರ್ಕಾರದ ಈ ನಿರ್ಧಾರದಿಂದ 4 ಲಕ್ಷ ಉದ್ಯೋಗಿಗಳು ಮತ್ತು 3.5 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಜನವರಿಯಿಂದ ಆಗಸ್ಟ್ವರೆಗಿನ ತುಟ್ಟಿಭತ್ಯೆಯ ಬಾಕಿಯನ್ನು ನೌಕರರಿಗೆ ಪ್ರತ್ಯೇಕವಾಗಿ ನೀಡುವುದಾಗಿ ತಿಳಿಸಿತ್ತು.