‘ಲವ್ ಜಿಹಾದ್ ‘ ಕಾನೂನಿನ ಅಡಿ ಮೊದಲ ಬಾರಿಗೆ ವ್ಯಕ್ತಿಗೆ ಭಾರೀ ಶಿಕ್ಷೆ ನೀಡಿದ ಕೋರ್ಟ್ !!!
ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ನಿಯಂತ್ರಣ ಕಾನೂನಿನಡಿಯಲ್ಲಿ ಆರೋಪಿಯೋರ್ವನಿಗೆ ಉತ್ತರ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಶಿಕ್ಷೆಯಾಗಿರುವ ಘಟನೆಯೊಂದು ನಡೆದಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಮೊಹಮ್ಮದ್ ಅಫೂಲ್ ಎಂಬಾತನೇ ಕಾನೂನಿನಡಿಯಲ್ಲಿ ಶಿಕ್ಷೆಗೊಳಗಾದ ವ್ಯಕ್ತಿ. ಈತನಿಗೆ ಅಮರೋಹ ಜಿಲ್ಲೆಯ ನ್ಯಾಯಾಲಯವು 5 ವರ್ಷ ಜೈಲು ಶಿಕ್ಷೆ ಹಾಗೂ 40 ಸಾವಿರ ದಂಡ ವಿಧಿಸಿದ್ದು, ಲವ್ ಜಿಹಾದ್ ಪ್ರಕರಣದಲ್ಲಿ ಈಗ ಈತ ಜೈಲುಪಾಲಾಗಿದ್ದಾನೆ.
ಅಫೂಲ್ ಸಂಭಾಲ್ ಜಿಲ್ಲೆಯ ನಿವಾಸಿಯಾಗಿದ್ದು, ಹಿಂದೂ ಸಮುದಾಯದ ಯುವತಿಯನ್ನು ಮದುವೆಯಾಗಲು ಯತ್ನಿಸಿದ್ದ. ಈತ ಸುಳ್ಳು ಭರವಸೆಗಳನ್ನು ನೀಡಿದ್ದ. ಆತ ತಾನು ಹಿಂದೂ ಧರ್ಮಕ್ಕೆ ಸೇರಿದವನು ಎಂದು ಯುವತಿಯನ್ನು ನಂಬಿಸಿ ಮೋಸ ಮಾಡಿ ಹುಡುಗಿಯನ್ನು ಬಲೆಗೆ ಹಾಕಿದ್ದ.
ಯುವತಿಯ ತಂದೆಯು ಅಮರೋಹ ಜಿಲ್ಲೆಯ ಹಸನ್‌ಪುರದಲ್ಲಿ ‘ನರ್ಸರಿ’ ನಡೆಸುತ್ತಿದ್ದರು. ವೃತ್ತಿಯಲ್ಲಿ ಚಾಲಕನಾಗಿದ್ದ ಅಫೂಲ್, ಸಸಿಗಳನ್ನು ಖರೀದಿಸುವ ಸಲುವಾಗಿ ಆಗಾಗ ‘ನರ್ಸರಿ’ಗೆ ಹೋಗುತ್ತಿದ್ದ. ಅಲ್ಲಿ ಯುವತಿಯನ್ನು ಭೇಟಿ ಮಾಡಿದ್ದ. ತನ್ನ ಹೆಸರು ಅರ್ಮಾನ್ ಕೊಹ್ಲಿ ಎಂದು ಹೇಳಿ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಪರಿಚಯ ಸ್ನೇಹಕ್ಕೆ ತಿರುಗಿದ ನಂತರ ಈತ ಆಕೆಯನ್ನು ಪುಸಲಾಯಿಸಿದ್ದಾನೆ. ನಂತರ ಇಬ್ಬರೂ ಮನೆಬಿಟ್ಟು ಹೋಗಿದ್ದರು.
ಮಗಳು ಕಾಣೆಯಾದ ಬಗ್ಗೆ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅವರು ತನ್ನ ಮಗಳನ್ನು ಅಫೂಲ್ ಅಪಹರಿಸಿದ್ದಾನೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಾಗಾಗಿ ಪೊಲೀಸರು ಹುಡುಕಾಡಿ ನಂತರ ಆತನನ್ನು ಬಂಧನಕ್ಕೊಳಪಡಿಸಿದ್ದರು. ಕಳೆದ ವರ್ಷದ ಎಪ್ರಿಲ್‌ನಲ್ಲಿ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು. ಆತನ ವಿರುದ್ಧ ಲವ್ ಜಿಹಾದ್ ನಿಯಂತ್ರಣ ಹಾಗೂ ಪೋಕ್ಸೋ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿತ್ತು. ಈಗ ಇದರ ವಿಚಾರಣೆ ಕೊನೆಯ ಹಂತಕ್ಕೆ ಬಂದಿದ್ದು, ಶನಿವಾರ ಇದರ ವಿಚಾರಣೆ ನಡೆಸಿದ್ದ ಕೋರ್ಟ್, ಪೋಕ್ಸೋ ವಿಶೇಷ ನ್ಯಾಯಾಲಯವು ಈ ತೀರ್ಪು ಪ್ರಕಟಿಸಿದೆ.