ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ‘ರತೀಶ್’ ಮರಳಿ ಮನೆಗೆ | ಇದರ ಭೇಟಿಗೆ ಬೇರೆ ಜಿಲ್ಲೆಗಳಿಂದಲೂ ಬರುತ್ತಿದ್ದಾರಂತೆ ಜನ!

ಕೆಲವೊಂದಷ್ಟು ಪ್ರಾಣಿಪ್ರಿಯರು ಸಾಕು ಪ್ರಾಣಿಗಳನ್ನು ಪ್ರೀತಿಯಿಂದ ಸಾಕಿರುತ್ತಾರೆ. ಅದು ನಾಯಿಯೇ ಆಗಿರಲಿ, ಬೆಕ್ಕೆ ಆಗಿರಲಿ ಅದನ್ನು ಮನೆಯ ಒಬ್ಬ ಸದಸ್ಯನಂತೆ ಸ್ವೀಕರಿಸಿರುತ್ತಾರೆ. ಹೀಗಿರುವಾಗ ಅದು ನಾಪತ್ತೆಯಾದರೆ ಇದ್ರ ನೋವು ಸಾಕಿದವನಿಗೆ ಮಾತ್ರ ತಿಳಿದಿರುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಎರಡು ವರ್ಷಗಳ ಹಿಂದೆ ಇದ್ದಕ್ಕಿಂದ ಹಾಗೆ ನಾಪತ್ತೆಯಾಗಿದ್ದ ಬೆಕ್ಕೊಂದು ಮರಳಿ ಮನೆಗೆ ಸೇರಿದೆ.

 

ಇಂತಹ ಅಪರೂಪದ ಘಟನೆ ಕೊಟ್ಟಾಯಂ ಜಿಲ್ಲೆಯ ಪುತ್ತುಪಲ್ಲಿ ಪಟ್ಟಣದಲ್ಲಿ ನಡೆದಿದೆ. ರತೀಶ್ ಎಂಬ ಸಾಕು ಬೆಕ್ಕೊಂದು ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿತ್ತು. ಇದೀಗ ಇತ್ತೀಚೆಗೆ ತನ್ನ ಯಜಮಾನನ ಮನೆಯನ್ನು ಸೇರಿದೆ.

ಉಷಮ್ಮ ಎಂಬುವವರು 2016 ರಲ್ಲಿ ಬೆಕ್ಕನ್ನು ದತ್ತು ಪಡೆದಿದ್ದು, ಮಲಯಾಳಂನ ‘ಕಟ್ಟಪ್ಪನೈಲೆ ಹೃತಿಕ್ ರೋಷನ್’ ಚಿತ್ರದ ಪ್ರಸಿದ್ಧ ಸಂಭಾಷಣೆಯ ‘ಉಣರು ರತೀಶ್’ ಎಂದು ಅದಕ್ಕೆ ಹೆಸರಿಟ್ಟಿದ್ದರು. ಆದರೆ, ನಾಲ್ಕು ವರ್ಷಗಳ ಹಿಂದೆ ಅಪಘಾತಕ್ಕೀಡಾಗಿ ಬೆಕ್ಕಿನ ಕಾಲು ಮುರಿದಿತ್ತು. ಬಳಿಕ ಪ್ರೀತಿಯ ಬೆಕ್ಕಿಗಾಗಿ ಶಸ್ತ್ರಚಿಕಿತ್ಸೆ ಕೂಡ ಮಾಡಲಾಯಿತು ಎಂದು ಉಷಮ್ಮ ಹೇಳಿದ್ದಾರೆ.

ದುರಾದೃಷ್ಟವಶಾತ್, ಶಸ್ತ್ರಚಿಕಿತ್ಸೆಯ ನಂತರ ಕೆಲವು ವರ್ಷಗಳವರೆಗೆ ರತೀಶ್ ಕಣ್ಮರೆಯಾಗಿತ್ತು. ಇದರಿಂದಾಗಿ ಮನೆಯವರು ಬೇಸರಗೊಂಡಿದ್ದರು. ಎಷ್ಟೇ ಹುಡುಕಾಡಿದರು ಅದರ ಸುಳಿವೇ ಸಿಕ್ಕಿರಲಿಲ್ಲ. ಆದ್ರೆ ಇದೀಗ ಮರಳಿ ಮನೆ ಸೇರಿದೆ.

ರತೀಶ್ ಮನೆಗೆ ವಾಪಸ್​ ಆಗಿದೆ ಎಂಬ ವಿಷಯ ತಿಳಿದ ಬಳಿಕ ಬೇರೆ ಜಿಲ್ಲೆಗಳಿಂದಲೂ ಜನರು ಇದನ್ನು ನೋಡಲು ಬರುತ್ತಿದ್ದಾರಂತೆ. ಬೆಕ್ಕು ಆದಾಗೆ ಮಾಲೀಕನ ಮನೆಗೆ ಬಂದಿದೆ. ಅಲ್ಲದೇ ಮನೆಗೆ ಬಂದ ತಕ್ಷಣ ಉಷಮ್ಮ ಅವರ ಹತ್ತಿರ ಹೋಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಉಷಮ್ಮ ಮಾತನಾಡಿದ್ದು, ನಮ್ಮ ಬೆಕ್ಕು ಎರಡು ವರ್ಷಗಳ ಹಿಂದೆ ಅಂದರೆ ಕೋವಿಡ್ ಸಮಯದಲ್ಲಿ ಕಾಣೆಯಾಗಿತ್ತು. ಈಗ ಅದು ನಮ್ಮ ಮನೆಗೆ ಮರಳಿದೆ. ನಾಲ್ಕು ವರ್ಷಗಳ ಹಿಂದೆ ಬೆಕ್ಕು ಅಪಘಾತವನ್ನು ಸಹ ಎದುರಿಸಿತ್ತು. ಶಸ್ತ್ರಚಿಕಿತ್ಸೆಗಾಗಿ ನಾವು 6000 ರೂಪಾಯಿಗಳನ್ನು ಖರ್ಚು ಮಾಡಿದ್ದೆವು. ಈಗ ಅದು ಹಿಂತಿರುಗಿರುವುದರಿಂದ ನಮಗೆ ಸಂತೋಷವಾಗಿದೆ ಎಂದು ಹೇಳಿದರು.

Leave A Reply

Your email address will not be published.