ಮಂಗಳೂರು : ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅರಿವು ಸಾಲ

ಹಿಂದುಳಿದ ವಿದ್ಯಾರ್ಥಿ ವರ್ಗದ 3ವರ್ಷಗಳ ಕಾಯುವಿಕೆಯ ಪ್ರತಿಯಾಗಿ ಅರಿವು ಯೋಜನೆಯಡಿ ಶಿಕ್ಷಣ ಸಾಲ ನೀಡುವ ಸಲುವಾಗಿ, ಈಗಾಗಲೇ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದಿಂದ ಸುತ್ತೋಲೆ ಹೊರಡಿಸಲಾಗಿದೆ.

 

ಹಿಂದುಳಿದ ವರ್ಗಗಳ ಸಿಇಟಿ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿ ಸುತ್ತೋಲೆ ಹೊರಡಿಸಲಾಗಿದ್ದು, 2022-23ನೇ ಸಾಲಿನ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ಮತ್ತು ಅರೆಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮಗಳ ವ್ಯಾಪ್ತಿಗೆ ಒಳಪಡುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಸಿಇಟಿ ಮೂಲಕ ಆಯ್ಕೆಯಾದವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವವರು ಸೇವಾ ಸಿಂಧು ಪೋರ್ಟಲ್ ಮೂಲಕ
ಸೆ. 6ರಿಂದ ಅ. 20ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದಲ್ಲದೆ ಈ ಮೇಲಿನ ನಿಗಮದ ಮೂಲಕ ಅರಿವು ಯೋಜನೆಯಡಿ ಸಾಲ ಪಡೆದವರಿಗೆ ಬಾಕಿಯಾಗಿರುವ 3 ಮತ್ತು 4ನೇ ಕಂತುಗಳ ಸಾಲ ಬಿಡುಗಡೆಗೂ ಕೂಡ ಉಳಿದ ದಿನಾಂಕದಡಿ ಅರ್ಜಿ ಸಲ್ಲಿಸಬಹುದು.

Leave A Reply

Your email address will not be published.