Home Decor Tips : ನಿಮ್ಮ ಮನೆಯ ಗೋಡೆ ಕಪ್ಪಾಗಿದೆಯೇ ? ಬೆಳ್ಳಗೆ ಮಿರಮಿರ ಮಿಂಚಲು ಈ ಟ್ರಿಕ್ ಫಾಲೋ ಮಾಡಿ

ಮನೆಯನ್ನು ಸುಂದರವಾಗಿ ಕಾಣಲು ಅಲಂಕಾರಿಕ ವಸ್ತುಗಳನ್ನು, ನಾನಾ ರೀತಿಯ ಗೃಹಪಯೋಗಿ ವಸ್ತುಗಳನ್ನು ಕ್ರಮಬದ್ಧವಾಗಿ ಜೋಡಿಸಿ, ಹೂ ಗಿಡಗಳನ್ನು ಮನೆಯ ಸುತ್ತಲೂ ಇಟ್ಟು ನೋಡುಗರ ಕಣ್ಣಿಗೆ ಚಂದ ಹೆಚ್ಚಿಸಲು ತರಹೇವಾರಿ ಕಸರತ್ತು ಮಾಡುವುದು ಸಾಮಾನ್ಯ.

 

ಮನೆಯಲ್ಲಿ ದೇವರ ಪೂಜೆ ಮಾಡುವಾಗ ದೀಪ, ಅಗರಬತ್ತಿ, ಧೂಪ ಬೆಳಗಿಸುವಾಗ ಅಗರಬತ್ತಿಯ ಹೊಗೆಯಿಂದ ಮನೆಯ ಗೋಡೆಯ ಬಣ್ಣ ಬದಲಾಗಿ ಕಪ್ಪು ಬಣ್ಣಕ್ಕೆ ತಿರುಗಿ ಕೋಣೆಯ ಮೆರುಗನ್ನು ಕಡಿಮೆ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಗೋಡೆಯನ್ನು ಮತ್ತೆ ಮೂಲ ಬಣ್ಣಕ್ಕೆ ತರುವುದಾದರೂ ಹೇಗೆ ಎಂಬ ಪ್ರಶ್ನೆ ಹಲವರನ್ನು ಕಾಡದಿರದು.

ಅಗರಬತ್ತಿಯ ಹೊಗೆಯಿಂದ ಕಪ್ಪಾಗಿರುವ ಗೋಡೆಗಳು ಕೆಟ್ಟದಾಗಿ ಕಾಣುವುದಲ್ಲದೆ ಮನೆಯ ಅಂದ ಮತ್ತು ಸೌಂದರ್ಯವನ್ನು ಕೆಡಿಸುತ್ತವೆ. ಗೋಡೆಯ ಬಣ್ಣ ಬಿಳಿಯಾಗಿಸಲು ಮಾಡಬಹುದಾದ ಸರಳ ಕ್ರಮಗಳನ್ನು ನೀಡಿದ್ದೇವೆ. ಬನ್ನಿ ಅದ್ಯಾವುದು ತಿಳಿದುಕೊಳ್ಳೋಣ.

ಗೋಡೆಗಳಿಗೆ ತೊಳೆಯಬಹುದಾದ ಬಣ್ಣ ಅನ್ವಯಿಸಿದ್ದರೆ, ಕಪ್ಪಾಗಿರುವ ಗೋಡೆಯನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು . ಧೂಪದ್ರವ್ಯದ ಹೊಗೆಯಿಂದ ಕಪ್ಪಾಗಿದ್ದ ಗೋಡೆಯನ್ನು ಸೋಪು ಮತ್ತು ಸ್ಕ್ರಬ್ ಸಹಾಯದಿಂದ ಸುಲಭವಾಗಿ ಸ್ವಚ್ಛಗೊಳಿಸಿ ಮೊದಲಿನಂತೆ ಹೊಳೆಯುವಂತೆ ಮಾಡಬಹುದು.

ಬಹುಪಯೋಗಿ ಟೂತ್‌ ಪೇಸ್ಟ್ ಅನ್ನು ಹಲ್ಲುಜ್ಜಲು, ಬೆಳ್ಳಿಯ ವಸ್ತುಗಳಿಗೆ ಹೊಳಪು ನೀಡಲು, ಮೊಡವೆಗಳ ಅಳಿಸಲು ಬಳಸುವುದು ಸಾಮಾನ್ಯ. ಆದರೆ, ಧೂಪದ್ರವ್ಯದ ಹೊಗೆಯಿಂದ ಕಪ್ಪಾಗಿರುವ ಗೋಡೆಗಳನ್ನು ಜೆಲ್ ಟೂತ್‌ಪೇಸ್ಟ್ ನಿಂದ ಸ್ವಚ್ಛಗೊಳಿಸಬಹುದು ಎಂದರೆ ಆಶ್ಚರ್ಯವಾದರೂ ಕೂಡ ಇದು ನಿಜ. ಜೆಲ್ ಟೂತ್‌ಪೇಸ್ಟ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಬಣ್ಣದ ಕಲೆಗಳು, ಕಪ್ಪು ಗೋಡೆಗಳನ್ನು ಜೆಲ್ ಟೂತ್‌ಪೇಸ್ಟ್ ತೆಗೆದುಕೊಂಡು ಕಪ್ಪಾಗಿರುವ ಅಥವಾ ಹಾನಿಗೊಳಗಾದ ಗೋಡೆಯ ಪ್ರದೇಶವನ್ನು ಬಟ್ಟೆಯಿಂದ ಉಜ್ಜಿದರೆ ಗೋಡೆಯು ಸ್ವಚ್ಛವಾಗುತ್ತದೆ.

ಧೂಪದ್ರವ್ಯದ ಹೊಗೆಯಿಂದ ಕಪ್ಪಾಗಿದ್ದ ಗೋಡೆಗಳನ್ನು ಡಿಶ್ ಸೋಪಿನಿಂದ ಸ್ವಚ್ಛಗೊಳಿಸಬಹುದು. ಈ ಕಲೆಗಳನ್ನು ಸ್ವಚ್ಛಗೊಳಿಸಲು ಡಿಶ್ ಸೋಪ್ ಮತ್ತು ವಿನೆಗರ್ ಅನ್ನು ಸಹ ಬಳಸಬಹುದು. 1 ಕಪ್ ನೀರಿಗೆ 1 ಚಮಚ ಲಿಕ್ವಿಡ್ ಡಿಶ್ ಸೋಪ್ ಮತ್ತು ಬಿಳಿ ವಿನೆಗರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದ ನಂತರ ಮಿಶ್ರಣದಲ್ಲಿ ಸ್ಕ್ರಬ್ ಅನ್ನು ಅದ್ದಿ ಗೋಡೆಯ ಮೇಲೆ ಉಜ್ಜಿದರೆ ಕಪ್ಪು ಕಲೆಗಳನ್ನು ಸ್ವಚ್ಛಗೊಳಿಸಬಹುದು. ಇದಲ್ಲದೆ, ಲಾಂಡ್ರಿ ಡಿಟರ್ಜೆಂಟ್ ಮೂಲಕವೂ ಕೂಡ ಕಪ್ಪು ಗೋಡೆಗಳನ್ನು ಸ್ವಚ್ಛಗೊಳಿಸಬಹುದು.
ಮನೆಯ ಗೋಡೆಗಳು ಕಪ್ಪಾಗಿದ್ದರೆ ಮನೆಯ ಸೌಂದರ್ಯ ಹಾಳಾಯಿತು ಎಂದು ಕೊರಗುವ ಅವಶ್ಯಕತೆ ಇಲ್ಲ. ಸುಲಭ ವಿಧಾನಗಳ ಮುಖಾಂತರ ಕಪ್ಪಾದ ಗೋಡೆಯನ್ನು ಮೊದಲಿನ ಬಣ್ಣಕ್ಕೆ ಬದಲಾಯಿಸಬಹುದು.

Leave A Reply

Your email address will not be published.