Dasara Holidays: ಶಾಲಾ ಕಾಲೇಜುಗಳಿಗೆ ದಸರಾ ರಜೆ ಘೋಷಣೆ; ಮೈಸೂರಿನಲ್ಲಿ ಇಷ್ಟು ದಿನ, ದಕ್ಷಿಣಕನ್ನಡದಲ್ಲಿ ಅಷ್ಟು ದಿನ ರಜೆ !
ಮೈಸೂರು ದಸರಾ ಹಬ್ಬದ ರಜೆಯ ಘೋಷಣೆ ಆಗಿದೆ. ಪ್ರತಿ ಜಿಲ್ಲೆಗಳಿಗೂ ಸ್ಥಳೀಯವಾಗಿ ಗಮನಿಸಿ ದಸರಾ ರಜೆ ನೀಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿತ್ತು. ದಸರಾ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳಿವೆ. ಮೈಸೂರಿನ ಗತ ವೈಭವವನ್ನು ಸಾರುವ ದಸರಾದ ಗಮ್ಮತ್ತನ್ನು ನೋಡಿಯೇ ಅನುಭವಿಸಬೇಕು. ಅಂತಹಾ ಹಬ್ಬದ ಆಚರಣೆಗಾಗಿ ಮೈಸೂರು ರೆಡಿಯಾಗುತ್ತಿದೆ. ಅಲ್ಲಿನ ಹೋಟೆಲ್ ಗಳು ಹುರುಪಿನಿಂದ ಟೀಮ್ ಸೆಟ್ ಮಾಡುತ್ತಿದ್ದಾರೆ. ಹಳೆಯ ರುಚಿಕರ ಖಾದ್ಯಗಳನ್ನು ಹೋದ ರೀತಿಯಲ್ಲಿ ತಯಾರು ಮಾಡಲು ಬಾಣಸಿಗರು ಸಿದ್ಧರಾಗಿದ್ದಾರೆ. ಹಾಗೆ ಹಬ್ಬ ಆಚರಿಸಲು ಮೈಸೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಈ ಬಾರಿ ದಸರಾ ರಜೆ ನೀಡಲಾಗಿದೆ. ಅಲ್ಲಿ ಎಷ್ಟು ದಿನ ಗೊತ್ತೇ ?
ಮೈಸೂರು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 9:ರವರೆಗೆ ದಸರಾ ಹಬ್ಬದ ರಜೆ ಘೋಷಣೆ ಮಾಡಲಾಗಿದೆ. ಮಧ್ಯವಾರ್ಶಿಕದ ಓದಿನ ಬೀದಿಯಲ್ಲಿರುವ ಚಿನ್ನರಿಗೆ ಖುಷಿಯೋ ಖುಷಿ. ಈ ರಜೆಯ ಮಧ್ಯ ನಡೆಯಲಿರುವ ಗಾಂಧಿ ಜಯಂತಿ ಮತ್ತು ವಾಲ್ಮೀಕಿ ಜಯಂತಿಯನ್ನು ಎಲ್ಲ ಶಾಲೆಗಳಲ್ಲೂ ಕಡ್ಡಾಯವಾಗಿ ಆಚರಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಅಲ್ಲದೆ, ಪ್ರತಿ ಜಿಲ್ಲೆಗಳಿಗೂ ಸ್ಥಳೀಯವಾಗಿ ಹಬ್ಬದ ಆಚರಣೆ ಗಮನಿಸಿ ದಸರಾ ರಜೆ ನೀಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 10 ರವೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಈ ವರ್ಷ ಕೊರೊನಾ ವೈರಸ್ನ ನೆಪ ಮುಂದಿಟ್ಟುಕೊಂಡು ಕರ್ನಾಟಕ ಕೊಂಚ ಬೇಗನೇ ಶಾಲೆಗಳನ್ನು ಆರಂಭಿಸಿತ್ತು. ಅದೀಗ ಅನುಕೂಲವಾಗಿದೆ.