BBK : “ಕಿಸ್” ವಿಚಾರ ಬಾಯ್ಬಿಟ್ಟ ಸೋನು ಗೌಡ !!! ನೆಟ್ಟಿಗರು ಮಾತ್ರ ನಂಬ್ತಾ ಇಲ್ಲ

Biggboss Kannada Ott ಮುಕ್ತಾಯಗೊಂಡಿದ್ದು, ಈಗಾಗಲೇ ಇದರಲ್ಲಿ ಭಾಗವಹಿಸಿದ್ದ, ನಾಲ್ವರು ನೇರವಾಗಿ ಟಿವಿ ಶೋ ಬಿಗ್ ಬಾಸ್ ಸೀಸನ್ 9 ಕ್ಕೆ ಆಯ್ಕೆಯಾಗಿದ್ದಾರೆ.

ಈ ಬಾರಿಯ ಒಟಿಟಿ ಸೀಸನ್ ಬಹಳ ಇಂಟ್ರೆಸ್ಟಿಂಗ್ ಆಗಿ ಇತ್ತು. ಏಕೆಂದರೆ ಮೊದಲ ಬಾರಿ ಒಟಿಟಿಯಲ್ಲಿ ಕನ್ನಡ ಬಿಗ್ ಬಾಸ್ ಪ್ರಸಾರವಾಗಿತ್ತು. ಈ ಬಾರಿಯ ಮುಖ್ಯ ಹೈಲೈಟ್ ಸೋನು ಗೌಡ ಎಂದರೆ ತಪ್ಪಾಗಲಾರದು. ಹಾಗೆ ನೋಡಿದರೆ ಸೋನು ಗೌಡ ಟ್ರೋಲರ್ ಗಳಿಂದಲೇ ಹೆಸರು ಮಾಡಿದವಳು ಅನ್ನಬಹುದು. ಬಿಗ್ ಬಾಸ್ ಮನೆಯೊಳಗೆ ಸೋನು ಗೌಡ, ರಾಕೇಶ್ ಅಡಿಗ ಜೊತೆಗೆ ಬಹಳಷ್ಟು ಕ್ಲೋಸ್ ಆಗಿ ಟ್ರೋಲಿಗರಿಗೆ ಟ್ರೋಲ್ ಮಾಡಲು ತಾವೇ ಅವಕಾಶಗಳನ್ನು ಕೊಟ್ಟಿದ್ದಾಳೆ ಎಂದರೆ ತಪ್ಪಿಲ್ಲ.

ಅಂದಹಾಗೇ, ಸೋನು ರಾಕಿ ತುಂಬಾ ಕ್ಲೋಸ್ ಆಗಿದ್ದರು ಅನ್ನೋದು ಯಾರಿಗೂ ಗೊತ್ತಿಲ್ಲದ ವಿಚಾರವೇನೂ ಅಲ್ಲ. ಅವರಿಬ್ಬರ ಆತ್ಮೀಯತೆ ಒಂದು ಹಂತದಲ್ಲಿ ಮುತ್ತಿನ ಹಂತಕ್ಕೂ ಹೋಗಿತ್ತು.

ಆದರೀಗ ಸೋನು ರಾಕೇಶ್ ತಮಗೆ ಮುತ್ತಿಟ್ಟಿದ್ದನ್ನು ಒಪ್ಕೊಂಡಿದ್ದಾರೆ. ಆದರೆ ಆ ಮುತ್ತು ತಮ್ಮ ತಾಯಿ ನೀಡಿದಂತೆ ಇತ್ತು ಎಂದು ಹೇಳಿಕೊಂಡಿದ್ದಾರೆ ಕೂಡಾ.
ಸೋನು ಕೇಳಿದಾಗೆಲ್ಲ ರಾಕೇಶ್ ಮುತ್ತಿಟ್ಟಿದ್ದಾರೆ. ಹಾಗೆನೇ, ಕೆಲವೊಮ್ಮೆ ಜಯಶ್ರೀಯನ್ನು ಉರಿಸೋಕೆ, ಹಾಗೆನೇ ಕೆಲವೊಮ್ಮೆ ಸೋನುನಾ ಉರಿಸೋಕೆ ಜಯಶ್ರೀಗೆ ಮುತ್ತಿಟ್ಟಿದ್ದಾರೆ. ಹಾಗಾಗಿ ನೆಟ್ಟಿಗರು ರಾಕಿಯನ್ನು ಫ್ಲರ್ಟ್ ಅಂತ ಕರೆದಿದ್ದಾರೆ.

ಆದರೆ ರಾಕಿ ಅದೃಷ್ಟ ಚೆನ್ನಾಗಿತ್ತು. ಟಿವಿ ಬಿಗ್ ಬಾಸ್ ಗೆ ಪ್ರವೇಶ ಪಡೆದರು. ಆದರೆ ಸೋನು ಒಟಿಟಿಯಲ್ಲೇ ತೃಪ್ತಿ ಪಡಬೇಕಾಯಿತು.

ಮನೆಯಿಂದ ಹೊರಬಂದ ನಂತರ ಸೋನು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ರಾಕೇಶ್ ಬಗ್ಗೆ ತಮ್ಮ ಜರ್ನಿ ಬಗ್ಗೆ ಮಾತನಾಡಿದ್ದು, “ರಾಕೇಶ್ ತುಂಬಾ ಒಳ್ಳೆಯ ಹುಡುಗ. ಒಂದು ರೀತಿಯಲ್ಲಿ ಅವನ ಪ್ರೀತಿ ಅಮ್ಮನ ರೀತಿ ಇತ್ತು. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ.

ಅಷ್ಟು ಮಾತ್ರವಲ್ಲದೇ, ಅವನ ಮೇಲೆ ಬಹಳ ಸೆಳೆತ ನನಗೆ ಇತ್ತು. ನಿಜ. ಆದರೆ ಅದು ಲವರ್ ಮಧ್ಯೆ ಇರುವಂತಹ ಆಕರ್ಷಣೆ ಅಲ್ಲ. ಅದೊಂದು ರೀತಿಯಲ್ಲಿ ಮಗ ಮತ್ತು ತಾಯಿ ಮಧ್ಯದಲ್ಲಿರುವ ಮಮಕಾರ. ಬೇರೆಯವರು ಏನು ಅಂದುಕೊಂಡರೂ ಐ ಡೋಂಟ್ ಕೇರ್. ನಾನು ನೇರವಾಗಿಯೇ ಮಾತನಾಡುವ ಹುಡುಗಿ. ಹಾಗಾಗಿಯೇ ಅವನು ನನಗೆ ಇಷ್ಟವಾದ ನನಗೆ ಏನು ಅನಿಸುತ್ತಿತ್ತೋ ಅದನ್ನು ರಾಕೇಶ್ ಜೊತೆ ಮಾಡಿರುವೆ. ಆದರೆ, ಯಾವುದೂ ನಮ್ಮ ಮಧ್ಯೆ ಕೆಟ್ಟದ್ದು ಅನ್ನುವುದು ಇಲ್ಲ ” ಎಂದಿದ್ದಾರೆ. ಆದರೆ ವೀಕ್ಷಕರು ಯಾಕೋ ಈ ಮಾತನ್ನು ಒಪ್ಕೊಳ್ಳೋಕೆ ರೆಡಿ ಇಲ್ಲ. ಹಾಗಾಗಿ ನಾವು ಮುಂದೇನಾಗುತ್ತೋ ಎಂಬುದನ್ನು ತಿಳಿಯಲು ಕಾಯೋಣ.

Leave A Reply

Your email address will not be published.