Kiwi Fruit side effect : ಕಾಸ್ಲಿಯೆಸ್ಟ್ ಕಿವಿ ಹಣ್ಣು ಹೆಚ್ಚು ತಿಂದರೆ ಏನಾಗಬಹುದು ?
ಕಿವಿ ಹಣ್ಣು ನೋಡಲು ಸೂಕ್ಷ್ಮ ರೋಮಗಳಿಂದ ತುಂಬಿರುವ ಕಂದುಬಣ್ಣದ ಚಪ್ಪಟೆಯಾಗಿಸಿದ ಮೊಟ್ಟೆಯಂತೆ ಕಾಣುವ ಹಣ್ಣು. ವಾಸ್ತವದಲ್ಲಿ ವಿಟಮಿನ್ ಸಿ ಪೋಷಕಾಂಶದ ಭಂಡಾರವೇ ಆಗಿದೆ. ಆದರೆ ಅತಿಯಾದರೆ ಅಮೃತವೂ ಕೂಡ ವಿಷವಾಗುತ್ತದೆ. ಅತಿಯಾದ ಕಿವಿ ಹಣ್ಣಿನ ಸೇವನೆ ಕೂಡ ಹಾನಿ ಉಂಟು ಮಾಡುತ್ತದೆ.
ಕಿವಿಹಣ್ಣಿನ ಸೇವನೆಯಿಂದ ಕೊಬ್ಬಿನ ಉತ್ಪಾದನೆ ತಗ್ಗುವ ಮೂಲಕ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಕಡಿಮೆಯಾಗುವುದನ್ನು ಹಾಗೂ ರಕ್ತದ ಒತ್ತಡವನ್ನು ನಿಯಂತ್ರಿಸಲೂ ಸಾಧ್ಯವಾಗುವುದನ್ನು ಸಂಶೋಧನೆಗಳು ದೃಢಪಡಿಸಿವೆ.
ಡೆಂಗ್ಯೂ ಜ್ವರ ಅಥವಾ ಬಿಳಿ ರಕ್ತ ಕಣಗಳು ಕಡಿಮೆಯಾದಾಗ ಕಿವಿ ಜ್ಯೂಸ್ ಅಥವಾ ಕಿವಿ ಹಣ್ಣನ್ನು ತಿನ್ನಲು ವೈದ್ಯರು ಸಲಹೆ ನೀಡುವುದು ಗೊತ್ತಿರಬಹುದು. ಹಣ್ಣಿನಲ್ಲಿರುವ ವಿಟಮಿನ್ ಸಿ ಆ್ಯಂಟಿ ಆಕ್ಸಿಡೆಂಟ್‌ಗಳು, ಫೈಬರ್ ಮತ್ತು ಪೊಟ್ಯಾಸಿಯಮ್‌ನಂತಹ ಅಂಶಗಳು ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಅನೇಕ ರೀತಿಯ ವೈರಲ್ ಜ್ವರಕ್ಕೆ ಕಿವಿ ಹಣ್ಣು ತಿನ್ನುವುದರಿಂದ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸುತ್ತದೆ.
ಕಿವಿ ಹಣ್ಣಿನಲ್ಲಿ ಉರಿಯೂತ ನಿವಾರಕ, ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ವೈರಲ್, ಸೋಂಕು ನಿವಾರಕ ಗುಣಗಳಂತಹ ಹಲವು ಗುಣಗಳಿವೆ. ಇದಲ್ಲದೆ, ಇದು ವಿಟಮಿನ್ ಸಿ, ವಿಟಮಿನ್ ಬಿ 6, ಫೈಬರ್, ಪೊಟ್ಯಾಶಿಯಮ್, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್‌ಗಳು, ಬೀಟಾ ಕ್ಯಾರೋಟಿನ್ ಮುಂತಾದ ವಿವಿಧ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಕಿವಿ ಹಣ್ಣು ಔಷಧಿಯ ಗುಣಗಳ ಖನಿಜ ಎಂದರೂ ತಪ್ಪಾಗಲಾರದು. ಆದರೆ ಕಿವಿಯ ಅತಿಯಾದ ಸೇವನೆಯು ಆರೋಗ್ಯಕ್ಕೂ ಹಾನಿ ಮಾಡುತ್ತದೆ ಎಂಬುದು ಕೂಡ ನಿಜವೇ!!
ವರದಿಯೊಂದರ ಪ್ರಕಾರ, ದಿನದಲ್ಲಿ ಹೆಚ್ಚು ಕಿವಿ ಹಣ್ಣು ಸೇವಿಸಿದರೆ ಕೆಲವು ಅಲರ್ಜಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ. ಚರ್ಮದ ಮೇಲೆ ಗುಳ್ಳೆ, ಊತ ಅಥವಾ ಉರಿಯೂತ, ಬಾಯಿಯಲ್ಲಿ ಕಿರಿಕಿರಿ , ಅಸ್ತಮಾ ಸಮಸ್ಯೆಯು ಕಾಣಿಸಿಕೊಳ್ಳಬಹುದು. ಅನೇಕ ಜನರಲ್ಲಿ ಕಿವಿ ಹಣ್ಣಿನ ಅತಿಯಾದ ಸೇವನೆಯಿಂದ ಓರಲ್ ಅಲರ್ಜಿ ಸಿಂಡ್ರೋಮ್ ಕಾಡುವ ಅಪಾಯವಿದೆ. ಇದರಲ್ಲಿ ಬಾಯಿ, ತುಟಿ ಮತ್ತು ನಾಲಿಗೆಯಲ್ಲಿ ಊತವು ಬಾಯಿಯೊಳಗಿನ ಹುಣ್ಣುಗಳಂತಹ ಸಮಸ್ಯೆಗಳು ಕಂಡುಬರುತ್ತದೆ.
ಕಿವಿಯಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದ್ದು, ಇದರಿಂದ ಕಿಡ್ನಿ ಸಂಬಂಧಿ ಕಾಯಿಲೆಗಳು ಕಾಣಿಸುತ್ತವೆ. ಹಾಗಾಗಿ ಕಿವಿಯನ್ನು ಕಿಡ್ನಿ ರೋಗಿಗಳು ಅತಿ ಹೆಚ್ಚು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಕಿವಿ ಹಣ್ಣಿನಲ್ಲಿ ನಾರಿನಂಶ ಹೇರಳವಾಗಿದ್ದು, ಇದರಿಂದ ನಿಮಗೆ ಅತಿಸಾರ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದ್ದು, ಹೊಟ್ಟೆ ನೋವು, ವಾಂತಿ ಮತ್ತು ವಾಕರಿಕೆ ಮುಂತಾದ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತವೆ.
ಕಿವಿ ಹಣ್ಣನ್ನು ಹಿತಮಿತವಾಗಿ ತಿನ್ನುವ ಅಭ್ಯಾಸ ರೂಡಿಸಿ ಕೊಂಡರೆ ಉತ್ತಮ. ಇಲ್ಲವಾದರೆ ಅತಿಯಾದ ಸೇವನೆ ಕೂಡ ತೊಂದರೆ ಮಾಡುವುದರಲ್ಲಿ ಸಂಶಯವಿಲ್ಲ.