SSLC, PUC ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪರೀಕ್ಷಾ ಶಾಖೆಯನ್ನು ವಿಲೀನಗೊಳಿಸಿ ಒಂದೇ ಮಂಡಳಿ ರಚಿಸಲಾಗುತ್ತದೆ.
‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ’ ಹೆಸರಲ್ಲಿ ಒಂದೇ ಮಂಡಳಿ ರಚಿಸಲು ಸರ್ಕಾರ ನಿರ್ಧರಿಸಿದೆ.
ಇದಕ್ಕಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾಯ್ದೆ -1966 ತಿದ್ದುಪಡಿಗೆ ಮಸೂದೆ ಸಿದ್ಧಪಡಿಸಲಾಗಿದ್ದು, ಅಧಿವೇಶನದಲ್ಲಿ ಮಂಡಿಸಲಾಗುವುದು. ಹೊಸಮಂಡಳಿಯಲ್ಲಿ ಎಸ್ಎಸ್ಎಲ್ ಸಿ, ಪಿಯುಸಿ, ಡಿಪ್ಲೋಮಾ ಇತರೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸಾಕ್ಷರತಾ ಇಲಾಖೆ ನಿರ್ದೇಶಕ ಹುದ್ದೆಯನ್ನು ಅಧ್ಯಕ್ಷ ಹುದ್ದೆಯಾಗಿ ಮರುನಿಗದಿಪಡಿಸಲಾಗಿದ್ದು, ಐಎಎಸ್ ಅಧಿಕಾರಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು ಎಂದು ಹೇಳಲಾಗಿದೆ.