Online shopping : ಆನ್ಲೈನ್ ಶಾಪಿಂಗ್ ಮಾಡುವಾಗ ಈ ರೀತಿ ಶಾಪಿಂಗ್ ಮಾಡಿದರೆ ನಿಮ್ಮ ದುಡ್ಡು ಉಳಿತಾಯ ಖಂಡಿತ
ಆನೈನ್ ಶಾಪಿಂಗ್ ( online shopping) ಈಗ ಟ್ರೆಂಡ್ ನಲ್ಲಿದೆ. ಹಾಗೇ ನೋಡಿದರೆ ಆನ್ಲೈನ್ ಶಾಪಿಂಗ್ ಬಹುತೇಕ ಸುಲಭ ಹಾಗೂ ಸಮಯ ಉಳಿತಾಯ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದರೆ ತಪ್ಪಾಗಲಾರದು. ಯಾವುದೇ ವಸ್ತು ಬೇಕಿದ್ದರೂ ಆನ್ಲೈನ್ ಮೂಲಕ ದೊರೆಯುತ್ತೆ. ಯಾವ ವಸ್ತು ಬೇಕೋ ಆ ವಸ್ತು ಮನೆಗೆ ಬರುತ್ತೆ.
ಹಾಗೇ ನೋಡಿದರೆ, ಕೆಲವೊಂದು ಶಾಪಿಂಗ್ ಸೈಟ್ ಗಳಲ್ಲಿ ಭರ್ಜರಿ ಆಫರ್ ಕೂಡ ಇರುತ್ತೆ. ಹಾಗಾಗಿಯೇ ಜನರು ಆನ್ಲೈನ್ ಶಾಪಿಂಗ್ ಇಷ್ಟಪಡಲು ಶುರು ಮಾಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ಶಾಪಿಂಗ್ ಸೈಟ್ ಗಳು ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಜೊತೆಗೆ ಕೆಲ ಆಫರ್ ನೀಡ್ತವೆ. ಇದೇ ಕಾರಣಕ್ಕೆ ಜನರು ಹಬ್ಬದ ಸಂದರ್ಭದಲ್ಲಿ ಎಲ್ಲೆ ಮೀರಿ ಖರೀದಿ ಮಾಡಲು ಹಾತೊರೆಯುತ್ತಾರೆ. ಆದರೆ ಆನ್ಲೈನ್ ಶಾಪಿಂಗ್ ವೇಳೆ ಮನಸ್ಸು ನಿಯಂತ್ರಣದಲ್ಲಿರೋದು ಬಹಳ ಮುಖ್ಯ. ಹಾಗಾಗಿ ಕೆಲ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಂದು ನಾವು ಆನ್ಲೈನ್ ಶಾಪಿಂಗ್ ಸಂದರ್ಭದಲ್ಲಿ ಏನೆಲ್ಲ ಗಮನಿಸಬೇಕು ಎಂಬುದನ್ನು ನಿಮಗೆ ಹೇಳುತ್ತೇವೆ.
ಖರೀದಿಸಲೇ ಬೇಕೆಂಬ ವಸ್ತುಗಳ ಪಟ್ಟಿ : ಒಂದೇ ಬಾರಿ ಹೆಚ್ಚು ಖರೀದಿಸುವ ಹಾಗೂ ಅನಗತ್ಯ ವಸ್ತುಗಳನ್ನು ಖರೀದಿಸುವ ಚಟ ನಿಮಗಿದ್ದರೆ ಅದನ್ನು ನಿಯಂತ್ರಿಸುವುದು ಉತ್ತಮ. ಶಾಪಿಂಗ್ ಶುರು ಮಾಡುವ ಮುನ್ನ ಯಾವ ವಸ್ತು ಅಗತ್ಯವಾಗಿದೆ ಎಂಬುದನ್ನು ಪಟ್ಟಿ ಮಾಡಿ. ಹಾಗಾಗಿ ಎಲ್ಲಾ ವಸ್ತುಗಳನ್ನು ಸರ್ಚ್ ಮಾಡುವ ಬದಲಿಗೆ ಬೇಕಾಸ ವಸ್ತುಗಳನ್ನು ಮಾತ್ರ ಸರ್ಚ್ ಮಾಡಿದರೆ ಉತ್ತಮ.
ಬೆಲೆ : ಇಂದು ಆನ್ಲೈನ್ ನಲ್ಲಿ ಒಂದು ವಸ್ತು ಖರೀದಿ ಮಾಡೋಕೆ ಹೋದರೆ, ಅದರ ಬೆಲೆ ಎಷ್ಟಿದೆ ಎಂಬುದನ್ನು ಪರೀಕ್ಷೆ ಮಾಡುವುದು ಮುಖ್ಯ. ವಸ್ತುಗಳ ಬೆಲೆ ನಿರಂತರವಾಗಿ ಹೆಚ್ಚಾಗುತ್ತಿರುತ್ತದೆ. ಆದ್ರೂ ನೀವು ಹಿಂದಿನ ಬೆಲೆ ಪರಿಶೀಲನೆ ಮಾಡೇಕು. ಆನ್ಲೈನ್ ಪ್ರೈಸ್ ಹಿಸ್ಟ್ರಿ ಎಂಬ ಒಂದು ವೆಬ್ಸೈಟ್ ಇದೆ. ಅದ್ರಲ್ಲಿ ನಿಮಗೆ ಆ ವಸ್ತುವಿನ ಹಿಂದಿನ ಬೆಲೆ ಲಭ್ಯವಾಗುತ್ತದೆ. ಅದನ್ನು ನೀವು ಪರಿಶೀಲನೆ ಮಾಡಿದರೆ, ಆ ವಸ್ತುವಿಗೆ ಹಿಂದಿನ ತಿಂಗಳಿದ್ದ ಬೆಲೆಯೇ ಈಗಲೂ ಮುಂದುವರೆದಿದ್ದರೆ ನೀವು ಆ ವಸ್ತುವನ್ನು ಖರೀದಿ ಮಾಡಬಹುದು.
ಸಮಯ ಮುಖ್ಯ( Time Management) : ಅಗತ್ಯವಿಲ್ಲದ ವಸ್ತುಗಳನ್ನು ನೀವು ಸಾಮಾನ್ಯ ದಿನಗಳಲ್ಲಿ ಖರೀದಿ ಮಾಡಲು ಹೋಗೋಡಿ. ಅದನ್ನು ಹಬ್ಬದ ಋತುವಿನಲ್ಲಿ ಖರೀದಿ ಮಾಡಿ. ಯಾಕೆಂದ್ರೆ ಹಬ್ಬದ ಸಂದರ್ಭದಲ್ಲಿ ಶಾಪಿಂಗ್ ವೆಬ್ಬೆಟ್ ಗಳಲ್ಲಿ ಆಫರ್ ಹೆಚ್ಚಿರುತ್ತದೆ. ಕಡಿಮೆ ಬೆಲೆಗೆ ಹೆಚ್ಚಿನ ವಸ್ತುಗಳನ್ನು ನೀವು ಖರೀದಿ ಮಾಡಬಹುದಾಗಿದೆ.
ಸುಮಾರು ಕಡೆ ಸರ್ಚ್ (Search) ಮಾಡಿದರೆ ಉತ್ತಮ : ಒಂದು ಆನ್ಲೈನ್ ಶಾಪಿಂಗ್ ವೆಬ್ ಸೈಟ್ (Web Site) ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಎಂದು ಜಾಹೀರಾತು ಹಾಕಿರ್ತಾರೆ. ಆದರೆ ಆಗ ಆ ವಸ್ತುವಿನ ಬೆಲೆ ನಿಮಗೆ ಅಗ್ಗ ಎನ್ನಿಸುತ್ತದೆ. ಆದರೆ ಈಗ ಅನೇಕ ಶಾಪಿಂಗ್ ವೆಬ್ ಸೈಟ್ ಇದೆ. ಹಾಗಾಗಿ ನೀವು ಅದೇ ವಸ್ತು ಬೇರೆ ವೆಬ್ ಸೈಟ್ ನಲ್ಲಿ ಎಷ್ಟು ಬೆಲೆಗೆ ಸಿಗುತ್ತೆ ಎಂಬುದನ್ನು ಸರ್ಚ್ ಮಾಡಿ, ಒಂದು ವೇಳೆ ಬೇರೆ ವೆಬ್ ಸೈಟ್ ನಲ್ಲಿ ಅದೇ ವಸ್ತು ಕಡಿಮೆ ಬೆಲೆಗೆ ಲಭ್ಯವಿದ್ರೆ ನಿಮ್ಮ ಹಣವನ್ನು ನೀವು ಉಳಿಸೋಕೆ ಒಂದು ದಾರಿಯಾಗುತ್ತೆ.