ಮೊಳಕೆ ಬರಿಸಿದ ಕಡಲೆ ಕಾಳು ಮತ್ತು ಹೆಸರುಕಾಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ | ಸಲಾಡ್‌ ಮಾಡಿ ತಿಂದರೆ ಲಾಭ ಏನು?

Share the Article

ಮೊಳಕೆ ಬರಿಸಿದ ಕಾಳುಗಳು ಆರೋಗ್ಯಕ್ಕೆ ವರದಾನವಿದ್ದಂತೆ. ಅವುಗಳ ಸಲಾಡ್‌ ಮಾಡಿ ಸವಿದರಂತೂ ಮತ್ತೆ ಮತ್ತೆ ತಿನ್ನಬೇಕೆನ್ನುವ ಭಾವ.

ಕಡಲೆ ಕಾಳು, ಹೆಸರು ಕಾಳುಗಳನ್ನು 8 ರಿಂದ 9 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟರೆ ಸಾಕು ಬಿಳಿ ಬಣ್ಣದ ಮೊಳಕೆಯೊಡೆಯಲು ಆರಂಭಿಸುತ್ತದೆ. ಇದು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರಿಗೂ ಉತ್ತಮ ಆಹಾರವಾಗಲಿದೆ. ಅಲ್ಲದೆ ಪೋಷಕಾಂಶಯುಕ್ತ ಆಹಾರವೂ ಆಗಲಿದೆ.

ಕಡಲೆ ಕಾಳು ಮತ್ತು ಹೆಸರುಕಾಳನ್ನು ಮೊಳಕೆ ಬರಿಸಿ ಅದರ ಸಲಾಡ್‌ ತಯಾರಿಸಿ ಸೇವನೆ ಮಾಡಿದರೆ ಎಷ್ಟು ಒಳ್ಳೆಯದು ಎನ್ನುವುದು ಗೊತ್ತಾ? ಇಲ್ಲಿದೆ ನೋಡಿ ಆರೋಗ್ಯಕ್ಕೆ ಈ ಎರಡೂ ಮೊಳಕೆ ಬರಿಸಿದ ಕಾಳುಗಳ ಭರಪೂರ ಉಪಯೋಗಗಳು.

ಕಣ್ಣಿಗೆ ಆರೋಗ್ಯ
ವಿಟಮಿನ್ ಎ ದೃಷ್ಟಿ ಆರೋಗ್ಯದ ಸುಧಾರಣೆಗೆ ಸಂಬಂಧಿಸಿದೆ. ವಿಟಮಿನ್ ಎ ಇರುವ ಕಾರಣ, ಮೊಳಕೆ ಬರಿಸಿದ ಕಾಳುಗಳು ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ವಿಟಮಿನ್‌ ಎ ಇರುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಮೊಳಕೆ ಬರಿಸಿದ ಕಾಳುಗಳನ್ನು ದಿನಾ ಬಳಸುವುದು ಒಳ್ಳೆಯದು.

ಕೂದಲಿನ ಆರೋಗ್ಯ
ಮೊಳಕೆಬರಿಸಿದ ಕಾಳುಗಳಲ್ಲಿ ವಿಟಮಿನ್ ಎ ಇರುವಿಕೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಲ್ಲದೆ ನೆತ್ತಿಯ ಮೇಲೆ ದಪ್ಪ ಮತ್ತು ಉದ್ದವಾದ ಕೂದಲು ಬೆಳೆಯುವಂತೆ ಮಾಡುತ್ತದೆ. ವಿಟಮಿನ್ ಎ ಕೊರತೆಯು ಕೂದಲು ತೆಳುವಾಗುವುದು, ಒಣ ನೆತ್ತಿ ಮತ್ತು ಅತಿಯಾದ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಹೀಗಾಗಿ ಮೊಳಕೆ ಬರಿಸಿದ ಕಾಳುಗಳನ್ನು ಸೇವನೆ ಮಾಡುತ್ತಿರಿ.

ಡ್ಯಾಂಡ್ರಫ್‌ ನಿವಾರಿಸುತ್ತದೆ
ಕಾಳುಗಳ ಮೊಳಕೆಯಲ್ಲಿರುವ ಸೆಲೆನಿಯಮ್ ಅಂಶ ಕೂದಲಿನ ನೆತ್ತಿಯ ಉಂಟಾಗುವ ತಲೆಹೊಟ್ಟು ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡುವ ಶಿಲೀಂಧ್ರಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಈ ಮೂಲಕ ಇದು ತಲೆಹೊಟ್ಟು ನಿವಾರಿಸುತ್ತದೆ ಮತ್ತು ನೆತ್ತಿಯು ನೈಸರ್ಗಿಕ ಎಣ್ಣೆಯನ್ನು ಉತ್ಪಾದಿಸಲು ಅನುವು ಮಾಡಿಕೊಡುತ್ತದೆ, ಇದು ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಒಣ ಕೂದಲನ್ನು ನಿವಾರಿಸಿ ಮೃದು ಕೂದಲು ಬೆಳೆಯುವಂತೆ ಮಾಡುತ್ತದೆ.

ಹೃದಯದ ಆರೋಗ್ಯಕ್ಕೆ
ಮೊಳಕೆಬರಿಸಿದ ಕಾಳುಗಳು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿದ್ದು ಅದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತನಾಳಗಳು ಮತ್ತು ಅಪಧಮನಿಗಳಲ್ಲಿ ಹಾನಿಕಾರಕ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಕೊಬ್ಬಿನಾಮ್ಲಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಅದು ಹೃದಯರಕ್ತನಾಳದ ವ್ಯವಸ್ಥೆಯ ಮೇಲಿನ ಅತಿಯಾದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪೊಟ್ಯಾಸಿಯಮ್‌ ಅಂಶ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಯಾವುದೇ ಹೃದಯರಕ್ತನಾಳದ ಸಮಸ್ಯೆಯ ಅಪಾಯವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಹೀಗಾಗಿ ದಿನನಿತ್ಯ ಒಂದು ಹೊತ್ತಾದರೂ ಮೊಳಕೆ ಬರಿಸಿದ ಕಾಳುಗಳ ಸಲಾಡ್‌ ಸೇವನೆ ಮಾಡಿ.

​ಮಧುಮೇಹ ಇರುವವರಿಗೆ(ಸಕ್ಕರೆ ಕಾಯಿಲೆಗೆ) ಇರುವವರಿಗೆ ಈ ಸಲಾಡ್‌ ಹೇಳಿ ಮಾಡಿಸಿದ ಆಹಾರವಾಗಿದೆ. ಪೋಷಕಾಂಶದ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ ಮಧುಮೇಹವನ್ನು ಕಂಟ್ರೋಲ್‌ನಲ್ಲಿಡುತ್ತದೆ.

ಹೀಗಾಗಿ ಪ್ರತಿನಿತ್ಯ ನಿಮ್ಮ ಡಯೆಟ್‌ನಲ್ಲಿ ಕಡಲೆಕಾಳು ಮತ್ತು ಮೊಳಕೆಬರಿಸಿದ ಕಾಳುಗಳನ್ನು ಸೇರಿಸಿಕೊಳ್ಳಿ. ಇದರಿಂದ ದೇಹವೂ ಆರೋಗ್ಯವಾಗಿರುತ್ತದೆ.

Leave A Reply

Your email address will not be published.