ವಾಹನ ಸವಾರರಿಗೆ ಕೇಂದ್ರ ಸರ್ಕಾರ ದಿಂದ ಗುಡ್ ನ್ಯೂಸ್ | ಇನ್ಮುಂದೆ ಸವಾರರು ಕಚೇರಿಗೆ ಅಲೆಯುವ ಅಗತ್ಯವಿಲ್ಲ!
ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸುಲಭವಾದ ನಿಯಮಗಳನ್ನು ಜಾರಿಗೊಳಿಸುತ್ತಲೇ ಬಂದಿದ್ದು, ಇದೀಗ ಪ್ರಾದೇಶಿಕ ಸಾರಿಗೆ ಕಚೇರಿ ಮೂಲಕ ಸಾರ್ವಜನಿಕರಿಗೆ ದೊರೆಯುವ 58 ಸೇವೆಗಳು ಆನ್ ಲೈನ್ ನಲ್ಲೂ ಲಭ್ಯವಾಗಲಿದೆ.
ಹೌದು.ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರ ಈ ಮೂಲಕ ಗುಡ್ ನ್ಯೂಸ್ ನೀಡಿದೆ. ಇದರಿಂದ ವಾಹನ ಸವಾರರು ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಈ ಮೊದಲು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಲಸ ಮಾಡಿಸಿಕೊಳ್ಳಬೇಕೆಂದರೆ ಪದೇ ಪದೇ ಅಲೆದಾಡಬೇಕಿತ್ತು. ಅಲ್ಲದೆ ಬ್ರೋಕರ್ ಇಲ್ಲದೆ ನೇರವಾಗಿ ಹೋದ ಸಂದರ್ಭದಲ್ಲಿ ಕೆಲಸ ಆಗುವುದು ಹರ ಸಾಹಸವಾಗಿತ್ತು.
ಈ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ಸೇವೆಗಳು ಲಭ್ಯವಾಗುವಂತೆ ಮಾಡಲಾಗಿದ್ದು, ಈ ಸೇವೆಗಳನ್ನು ಪಡೆಯಲು ಆಧಾರ್ ಆಧರಿತ ದೃಢೀಕರಣ ಅಗತ್ಯವಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆನ್ ಲೈನ್ ಸೇವೆ ಕುರಿತ ಅಧಿಸೂಚನೆಯನ್ನು ಶನಿವಾರ ಹೊರಡಿಸಿದೆ.
ಇದರಿಂದಾಗಿ ಸಾರ್ವಜನಿಕರು ವಾಹನ ಚಾಲನೆ ಪರವಾನಗಿ, ವಾಹನ ನೋಂದಣಿ, ವಾಹನ ಮಾಲೀಕತ್ವ ವರ್ಗಾವಣೆ ಸೇರಿದಂತೆ ಹಲವು ಸೇವೆಗಳನ್ನು ಆನ್ ಲೈನ್ ಮೂಲಕ ಪಡೆಯಬಹುದಾಗಿದೆ. ಇದರಿಂದಾಗಿ ಸವಾರರ ಸಮಯ ಉಳಿಯಲಿದೆ.