Ration Card : ಪಡಿತರ ಚೀಟಿದಾರರ ಬಗೆಹರಿಯದ ಸಮಸ್ಯೆ | ಎರಡು ಸಲ ಕಡ್ಡಾಯ ಬಯೋಮೆಟ್ರಿಕ್ ನಿಂದ ಸಮಸ್ಯೆ

Share the Article

ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆದುಕೊಳ್ಳಲು ಎರಡು ಬಾರಿ ಬಯೋಮೆಟ್ರಿಕ್ ನೀಡುವುದನ್ನು ರಾಜ್ಯದಲ್ಲಿ ಕಡ್ಡಾಯಗೊಳಿಸಲಾಗಿದ್ದು, ಇದರಿಂದಾಗಿ ಪಡಿತರ ಚೀಟಿದಾರರಿಗೆ ತೊಂದರೆಯೊಂದು ಪರಿಣಮಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಡಿತರ ಪಡೆಯಲು ಎರಡು ಬಾರಿ ಬಯೋಮೆಟ್ರಿಕ್ ನೀಡಬೇಕಿದ್ದು, ಇದರಿಂದಾಗಿ ನ್ಯಾಯಬೆಲೆ ಅಂಗಡಿಗಳ ಎದುರು ಸರತಿ ಸಾಲು ಕಂಡು ಬರುತ್ತಿದೆ.

ಸರ್ವರ್ ಸಮಸ್ಯೆಯ ಕಾರಣ ಜನರು ಕೆಲಸ ಕಾರ್ಯಗಳನ್ನು ಬಿಟ್ಟು ರೇಷನ್ ಅಂಗಡಿ ಎದುರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ನಭಾಗ್ಯ ಯೋಜನೆಗಳ ಪಡಿತರ ಪಡೆಯಲು ಪ್ರತ್ಯೇಕವಾಗಿ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಪಡೆದುಕೊಳ್ಳಲಾಗುತ್ತಿದೆ.

ಆಹಾರ ಇಲಾಖೆ ತಂತ್ರಾಂಶಕ್ಕೆ ಡಬಲ್ ಬಯೋಮೆಟ್ರಿಕ್ ವ್ಯವಸ್ಥೆ ಅಪ್ಡೇಟ್ ಮಾಡಲಾಗಿದ್ದು, ಸರ್ವರ್ ಸಮಸ್ಯೆ ಎದುರಾಗಿದೆ. ಎರಡು ಬಾರಿ ಬಯೋಮೆಟ್ರಿಕ್ ನೀಡಬೇಕಾಗಿರುವುದರಿಂದ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ. ಗೊಂದಲ ಉಂಟಾಗಿರುವುದರಿಂದ ಪಡಿತರ ಚೀಟಿದಾರರು ತೊಂದರೆ ಅನುಭವಿಸುವಂಥಾಗಿದೆ ಎಂದು ಹೇಳಲಾಗಿದೆ.

Leave A Reply