ಉಕ್ರೇನ್ ನಿಂದ ಮರಳಿರುವ ವಿದ್ಯಾರ್ಥಿಗಳಿಗೆ ವೈದ್ಯ ಸೀಟು ಇಲ್ಲ
ಸಮಿತಿ ಶಿಫಾರಸು ಕಥೆ ಏನು

ಸಮರ ಪೀಡಿತ ಉಕ್ರೇನ್ ನಿಂದ ಮರಳಿರುವ ವೈದ್ಯ ವಿದ್ಯಾರ್ಥಿಗಳಿಗೆ ದೇಶದ ವಿಶ್ವವಿದ್ಯಾಲಯಗಳಲ್ಲಿ ಅವಕಾಶ ಕಲ್ಪಿಸಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸರಕಾರ ಗುರುವಾರ ಸುಪ್ರೀಂಕೋರ್ಟಿಗೆ ಸ್ಪಷ್ಟಪಡಿಸಿದೆ.

 

ವಿದೇಶದಲ್ಲಿ ಅಭ್ಯಾಸ ಮಾಡಿ ಬಂದ ವಿದ್ಯಾರ್ಥಿಗಳಿಗೆ ಅರ್ಧದಲ್ಲಿ ಪ್ರವೇಶ ಕಲ್ಪಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯ್ದೆಯಲ್ಲಿ ಅವಕಾಶವೇ ಇಲ್ಲ ಎಂದು ತಿಳಿಸಿದೆ.

ಈ ರೀತಿ ಸಂಕಷ್ಟ ಕೊಳಗಾದ ವಿದ್ಯಾರ್ಥಿಗಳಿಗೆ ಮಧ್ಯದಲ್ಲಿ ಅವಕಾಶ ಕೊಡುವುದರಿಂದ ವೈದ್ಯಕೀಯ ಶಿಕ್ಷಣದ ಗುಣಮಟ್ಟಕ್ಕೆ ಧಕ್ಕೆಯಾಗುತ್ತದೆ. ಮೆರಿಟ್ ಇಲ್ಲದ ವಿದ್ಯಾರ್ಥಿಗಳಿಗೆ ಅವಕಾಶ ಕೊಡುವುದರಿಂದ ಕಾನೂನು ಹೋರಾಟಗಳಿಗೋ ಕಾರಣವಾಗುವ ಅಪಾಯವಿದೆ ಇಂದು ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಸರಕಾರ ಉಲ್ಲೇಖಿಸಿದೆ.

ಸಮಿತಿ ಶಿಫಾರಸು ಕಥೆ ಏನು?
ಉಕ್ರೇನ್ ಯುದ್ಧ ಭೂಮಿಯಿಂದ ಮರಳಿದ ವಿದ್ಯಾರ್ಥಿಗಳ ಭವಿಷ್ಯ ಕುರಿತಂತೆ ವಿದೇಶಾಂಗ ಇಲಾಖೆ ರಚಿಸಿದ್ದ ಲೋಕಸಭಾ ಸಮಿತಿ ಆಗಸ್ಟ್ 3ರಂದು ಸರಕಾರಕ್ಕೆ ವರದಿ ಸಲ್ಲಿಸಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವಂತೆ ಶಿಫಾರಸು ಮಾಡಿತ್ತು.

ಸಮಿತಿ ಶಿಫಾರಸು ಜಾರಿ ಮಾಡುವಂತೆ ಕೋರಿ ವಿದ್ಯಾರ್ಥಿಗಳ ಪರ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಹೇಮಂತ್ ಗುಪ್ತ ಹಾಗೂ ನ್ಯಾಯಾಧೀಶರು ಸುಧಾಂಶು ಧುಲಿಯ ಪೀಠ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

Leave A Reply

Your email address will not be published.