ಮಂಗಳೂರು: ಕೂಳೂರು ಸೇತುವೆಗೆ ಡಾಂಬರು ಹಾಕಿಸಿದ ಎಂಜಿನಿಯರ್‌ ಗೆ ಎಂಜನಿಯರ್ಸ್ ಡೇಯ ಶುಭಾಶಯವಿಲ್ಲ !!!

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಂಗಳೂರು ಭೇಟಿ ಮಾಡಿದ ಸಂದರ್ಭದಲ್ಲಿ ಹಲವೆಡೆ ಡಾಮರೀಕರಣ ನಡೆದಿತ್ತು. ಹಾಗೂ ಅದು ತೇಪೆ ಕಾರ್ಯ ಎಂದು ಸ್ವಲ್ಪ ದಿನದಲ್ಲೇ ಸಾರ್ವಜನಿಕರಿಗೆ ತಿಳಿಯಿತು. ಹೌದು, ಇದರಲ್ಲಿ ಮುಖ್ಯವಾಗಿ ಚರ್ಚೆ ಆಗುತ್ತಿರುವ ರೋಡ್ ಎಂದರೆ ಕೂಳೂರು ಸೇತುವೆಯ ರೋಡ್.

 

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೂಳೂರು ಸೇತುವೆ ಮೇಲಿನ ಗುಂಡಿಗಳನ್ನು ಮುಚ್ಚಲು ಹಾಕಿದ್ದ ಡಾಂಬರು ಕೇವಲ ಹತ್ತೇ ದಿನದಲ್ಲಿ ಕಿತ್ತು ಹೋಗಿತ್ತು. ಹಾಗಾಗಿ ಇದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿ ಅನಂತರ ಮತ್ತೆ ದುರಸ್ತಿ ಕಾರ್ಯ ‌ನಡೆದಿತ್ತು.

ಆದರೆ ಸಾರ್ವಜನಿಕರೊಬ್ಬರು, ‘ಕೂಳೂರು ಸೇತುವೆಗೆ ಡಾಂಬರು ಹಾಕಿಸಿದ ಎಂಜಿನಿಯರ್ ಒಬ್ಬರನ್ನು ಬಿಟ್ಟು ಉಳಿದ ಎಲ್ಲ ಎಂಜಿನಿಯರ್‌ಗಳಿಗೆ ಎಂಜಿನಿಯರ್ಸ್ ದಿನದ ಶುಭಾಶಯಗಳು’ ಎಂಬ ಸಂದೇಶವೊಂದು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ಎಲ್ಲರ ಗಮನ ಸೆಳೆಯಿತು. ಸಾರ್ವಜನಿಕರೊಬ್ಬರು ಎಂಜಿನಿಯರ್ಸ್ ದಿನದ ಶುಭಾಶಯಗಳನ್ನು ಈ ರೀತಿ ವಿಭಿನ್ನವಾಗಿ ಕೋರಿದ್ದಾರೆ.

ಕೆಲ ವರ್ಷಗಳ ಹಿಂದೆ ಪಂಪ್‌ವೆಲ್ ಮೇಲ್ಸೇತುವೆಯ ಕಾಮಗಾರಿಯ ಎಂಜಿನಿಯರ್ ಅನ್ನು ಉಲ್ಲೇಖಿಸಿ ಇದೇ ರೀತಿ ಶುಭಾಶಯ ಕೋರಲಾಗಿತ್ತು.

Leave A Reply

Your email address will not be published.